AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs LSG, IPL 2023: ಕೊನೆಯ 1 ಬಾಲ್​ನಲ್ಲಿ 1 ರನ್: ಆರ್​ಸಿಬಿ-ಎಲ್​ಎಸ್​ಜಿ ಪಂದ್ಯ ರೋಚಕ ಫೋಟೋಗಳು ಇಲ್ಲಿದೆ ನೋಡಿ

Bangalore vs Lucknow: ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಪರ ವಿರಾಟ್​ ಕೊಹ್ಲಿ, ಫಾಫ್​ ಡು ಪ್ಲೆಸಿಸ್​ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ ಅವರ ಭರ್ಜರಿ ಅರ್ಧಶತಕದ ಆಟವಾಡಿದರು. ಪರಿಣಾಮ ಬೆಂಗಳೂರು ಎರಡು ವಿಕೆಟ್​ ನಷ್ಟಕ್ಕೆ 212 ರನ್​ ಗಳಿಸಿತು.

Vinay Bhat
|

Updated on:Apr 11, 2023 | 9:35 AM

Share
ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೇಂಟ್ಸ್ ನಡುವಣ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿತು. ಉಭಯ ತಂಡಗಳು ಕೂಡ ಸಂಪೂರ್ಣ 20 ಓವರ್​ಗಳನ್ನು ಆಡಿದವು.

1 / 8
200+ ರನ್ ಟಾರ್ಗೆಟ್ ನೀಡಿದ್ದರೂ ಮಾರ್ಕಸ್ ಸ್ಟೊಯಿನಿಸ್ ಮತ್ತು ನಿಕೋಲಸ್ ಪೂರನ್ ಅವರ ಸಿಡಿಲಬ್ಬರದ ಬ್ಯಾಟಿಂಗ್​ ನೆರವಿನಿಂದ ಕೆಎಲ್​ ರಾಹುಲ್​ ಪಡೆಯು ಒಂದು ವಿಕೆಟ್​ನಿಂದ ರೋಚಕ ಗೆಲುವು ಸಾಧಿಸಿತು.

2 / 8
ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಪರ ವಿರಾಟ್​ ಕೊಹ್ಲಿ, ಫಾಫ್​ ಡು ಪ್ಲೆಸಿಸ್​ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ ಅವರ ಭರ್ಜರಿ ಅರ್ಧಶತಕದ ಆಟವಾಡಿದರು. ಪರಿಣಾಮ ಬೆಂಗಳೂರು ಎರಡು ವಿಕೆಟ್​ ನಷ್ಟಕ್ಕೆ 212 ರನ್​ ಗಳಿಸಿತು.

3 / 8
44 ಎಸೆತಗಳನ್ನು​ ಎದುರಿಸಿದ ಕೊಹ್ಲಿ 4 ಬೌಂಡರಿ ಮತ್ತು 4 ಸಿಕ್ಸ್​ನಿಂದ 61 ರನ್​ ಸಿಡಿಸಿದರು. ಈ ಮೂಲಕ ಐಪಿಎಲ್​ ವೃತ್ತಿಜೀವನದ 46ನೇ ಅರ್ಧಶತಕ ದಾಖಲಿಸಿದರು.

4 / 8
ನಂತರ ಫಾಫ್ ಜೊತೆಯಾದ ಮ್ಯಾಕ್ಸ್​ವೆಲ್​ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಆಸೀಸ್ ದಾಂಡಿಗ ತಮ್ಮ ಹಳೆಯ ಬ್ಯಾಟಿಂಗ್​ ವೈಖರಿಯನ್ನು ಪ್ರದರ್ಶಿಸಿದರು. 29 ಬಾಲ್​ನಲ್ಲಿ 6 ಸಿಕ್ಸ್​ ಮತ್ತು 3 ಬೌಂಡರಿಯಿಂದ 59 ರನ್​ ಗಳಿಸಿ, ಇನ್ನಿಂಗ್ಸ್ ಮುಕ್ತಾಯಕ್ಕೆ ಒಂದು ಬಾಲ್ ಬಾಕಿ​ ಇದ್ದಾಗ ವಿಕೆಟ್​ ಒಪ್ಪಿಸಿದರು.

5 / 8
ಇತ್ತ ನಾಯಕ ಫಾಫ್ ಡುಪ್ಲೆಸಿಸ್​ 46 ಬಾಲ್​ನಲ್ಲಿ 5 ಸಿಕ್ಸರ್​ ಮತ್ತು 5 ಬೌಂಡರಿಯಿಂದ 79 ರನ್​ ಗಳಿಸಿ ಅಜೇಯರಾಗುಳಿದರು. ಆರ್​​ಸಿಬಿ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು. ಲಖನೌ ಪರ ಮಾರ್ಕ್​ ವುಡ್​ ಮತ್ತು ಅಮಿತ್​ ಮಿಶ್ರಾ ತಲಾ ಒಂದೊಂದು ವಿಕೆಟ್​ ಪಡೆದರು.

6 / 8
ಗುರಿ ಬೆನ್ನತ್ತಿದ ಲಖನೌ ತಂಡಕ್ಕೆ ಆರ್​ಸಿಬಿ ಬೌಲರ್​ಗಳು ಆರಂಭದಲ್ಲಿ ಕಾಡಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೊಯಿನಿಸ್ (30 ಎಸೆತಗಳಲ್ಲಿ 65 ರನ್) ಮತ್ತು ನಿಕೋಲಾಸ್ ಪೂರನ್ (19 ಎಸೆತಗಳಲ್ಲಿ 62 ರನ್) ಸ್ಫೋಟಕ ಬ್ಯಾಟಿಂಗ್ ನಡೆಸಿದರು.

7 / 8
ಆಯುಷ್ ಬದೋನಿ (24 ಎಸೆತಗಳಲ್ಲಿ 30 ರನ್) ಕೂಡ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಕೊನೆಯ ಎಸೆತದವರೆಗೂ ಗೆಲುವು ಯಾರಿಗೆಂದು ನಿರ್ಧರಿಸಲು ಸಾಧ್ಯವಾಗಲಿಲ್ಲ. 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದ ಎಸಲ್​ಎಸ್​ಜಿ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿತು.

8 / 8

Published On - 9:33 am, Tue, 11 April 23

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ

ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ

ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ

ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?

‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ