Rishabh Pant IPL Auction 2025: ಐಪಿಎಲ್‌ನ ಎಲ್ಲಾ ದಾಖಲೆ ಉಡೀಸ್; ರಿಷಬ್ ಪಂತ್ ಲಕ್ನೋ ಪಾಲು

Rishabh Pant Auction Price: ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಹೆಚ್ಚು ಬೇಡಿಕೆಯಲ್ಲಿದ್ದರು. ರಿಷಬ್ ಪಂತ್ ಗಾಗಿ ಹಲವು ತಂಡಗಳ ನಡುವೆ ಬಿಡ್ಡಿಂಗ್ ವಾರ್ ನಡೆದಿತ್ತು. ಆದರೆ ಅಂತಿಮವಾಗಿ, ಲಕ್ನೋ ಸೂಪರ್ ಜೈಂಟ್ಸ್ ತಂಡ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ, ಇದಕ್ಕಾಗಿ ಲಕ್ನೋ ಭಾರಿ ಮೊತ್ತವನ್ನು ಪಾವತಿಸಬೇಕಾಯಿತು.

ಪೃಥ್ವಿಶಂಕರ
|

Updated on: Nov 24, 2024 | 4:58 PM

ಐಪಿಎಲ್‌ನಲ್ಲಿ ಅತ್ಯಂತ ಕುತೂಹಲಕಾರಿ ಕ್ಷಣಕ್ಕೆ ಕೊನೆಗೂ ತೆರೆ ಬಿದ್ದಿದೆ. ಇಷ್ಟು ದಿನ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣರಾಗಿದ್ದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೊನೆಗೂ ಹರಾಜಿನಲ್ಲಿ ಕಾಣಿಸಿಕೊಂಡಿದ್ದು, ಅವರನ್ನು ದಾಖಲೆಯ ಮೊತ್ತ ನೀಡಿ ಲಕ್ನೋ ಸೂಪರ್‌ಜೈಂಟ್ಸ್‌ ತಂಡ ಖರೀದಿಸುವಲ್ಲಿ ಯಶಸ್ವಿಯಾಗಿದೆ.

1 / 5
ಕೆಎಲ್ ರಾಹುಲ್​ರನ್ನು ತಂಡದಿಂದ ಕೈಬಿಟ್ಟು ಸಖತ್ ಸುದ್ದಿಯಾಗಿದ್ದ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ, ರಿಷಬ್ ಪಂತ್ ಅವರನ್ನು ಬರೋಬ್ಬರಿ 27 ಕೋಟಿ ರೂಪಾಯಿ ಬೃಹತ್ ಮೊತ್ತವನ್ನು ಪಾವತಿಸಿ ತಂಡಕ್ಕೆ ಸೇರಿಸಿಕೊಮಡಿದೆ. ಈ ಮೂಲಕ ರಿಷಬ್ ಪಂತ್, ಕೆಲವೇ ಕ್ಷಣಗಳಲ್ಲಿ ಐಪಿಎಲ್ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಅವರ ದಾಖಲೆಯನ್ನು ಮುರಿದಿದ್ದಾರೆ.

2 / 5
ರಿಷಬ್ ಪಂತ್ ಕಳೆದ 9 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ನ ಭಾಗವಾಗಿದ್ದರು. 2016 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ನಂತರ 2021 ರಲ್ಲಿ ಪಂತ್​ಗೆ ನಾಯಕತ್ವವನ್ನು ನೀಡಲಾಯಿತು. ಈ ಮೂಲಕ ಪಂತ್, ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಸುರೇಶ್ ರೈನಾ ಮತ್ತು ಶ್ರೇಯಸ್ ಅಯ್ಯರ್ ನಂತರ ಐಪಿಎಲ್ ಇತಿಹಾಸದಲ್ಲಿ ನಾಯಕತ್ವವಹಿಸಿಕೊಂಡ ಐದನೇ ಕಿರಿಯ ಆಟಗಾರ ಎನಿಸಿಕೊಂಡಿದ್ದರು.

3 / 5
ಆದರೆ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಿಷಬ್ ಪಂತ್ ನಡುವೆ ನಾಯಕತ್ವದ ವಿಚಾರವಾಗಿ ವೈಮನಸು ಮೂಡಿದೆ ಎಂಬ ವದಂತಿ ಹಬ್ಬಿತ್ತು. ಹೀಗಾಗಿ ಪಂತ್​ರನ್ನು ಡೆಲ್ಲಿ ತಂಡದಿಂದ ಬಿಡುಗಡೆ ಮಾಡಿದೆ ಎಂದು ಹೇಳಲಾಗಿತ್ತು. ಆದಾಗ್ಯೂ ಆರ್​ಟಿಎಮ್ ಕಾರ್ಡ್​ ಅನ್ನು ಬಳಸುವ ಸಮಯ ಬಂದಾಗ ಡೆಲ್ಲಿ ಪಂತ್​ರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿತು. ಆದರೆ ಲಕ್ನೋ ದಾಖಲೆಯ ಮೊತ್ತ ನೀಡಿದ ಕಾರಣ ಪಂತ್ ಹೊಸ ತಂಡ ಸೇರಿಕೊಳ್ಳಬೇಕಾಯಿತು.

4 / 5
ಇದುವರೆಗೆ ಐಪಿಎಲ್‌ನಲ್ಲಿ 111 ಪಂದ್ಯಗಳನ್ನಾಡಿರುವ ಪಂತ್, 35.31 ಮತ್ತು ಸ್ಟ್ರೈಕ್ ರೇಟ್‌ನಲ್ಲಿ 3284 ರನ್ ಗಳಿಸಿದ್ದಾರೆ. ಇದಲ್ಲದೆ ಐಪಿಎಲ್‌ನಲ್ಲಿ ಕ್ಯಾಪಿಟಲ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯೂ ರಿಷಬ್ ಪಂತ್ ಹೆಸರಿನಲ್ಲಿದೆ. ಕಳೆದ ಸೀಸನ್​ನಲ್ಲಿ ಪಂತ್, ಆಡಿದ 13 ಪಂದ್ಯಗಳಲ್ಲಿ 446 ರನ್ ಗಳಿಸಿದ್ದರು. ಇದರಲ್ಲಿ 18 ಅರ್ಧ ಶತಕ ಮತ್ತು 1 ಶತಕವೂ ಸೇರಿದೆ.

5 / 5
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ