- Kannada News Photo gallery Cricket photos KL Rahul IPL 2025 Auction delhi capitals buys the indian player for the auction price of 14 cr Rupees, details in kannada
KL Rahul IPL Auction 2025: ಅಭಿಮಾನಿಗಳಿಗೆ ಆಘಾತ; ಆರ್ಸಿಬಿಗೆ ಬರಲಿಲ್ಲ ಕನ್ನಡಿಗ ಕೆಎಲ್ ರಾಹುಲ್
KL Rahul Auction Price: ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಾಹುಲ್ರನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡದ ಪರ ಕಣಕ್ಕಿಳಿಯಲು 17 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ರಾಹುಲ್, ಇದೀಗ ಡೆಲ್ಲಿ ಪರ 3 ಕೋಟಿ ನಷ್ಟದಲ್ಲಿ ಅಂದರೆ 14 ಕೋಟಿ ರೂಗೆ ಬ್ಯಾಟ್ ಬೀಸಲಿದ್ದಾರೆ.
Updated on:Nov 24, 2024 | 6:00 PM

ಕಳೆದ ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದ ಕನ್ನಡಿಗ ಕೆಎಲ್ ರಾಹುಲ್, ಇದೀಗ ಮುಂದಿನ ಆವೃತ್ತಿಯಿಂದ ಹೊಸ ತಂಡದ ಪರ ಕಣಕ್ಕಿಳಿಯಲಿದ್ದಾರೆ. ರಾಹುಲ್ ಆರ್ಸಿಬಿ ಪರ ಕಣಕ್ಕಿಳಿಯುತ್ತಾರೆ ಎಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆಯಾಗಿದೆ. ಏಕೆಂದರೆ ರಾಹುಲ್ರನ್ನು ಖರೀದಿಸಲು ಆರ್ಸಿಬಿ ಮನಸು ಮಾಡಲಿಲ್ಲ. ಹೀಗಾಗಿ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು.

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಾಹುಲ್ರನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡದ ಪರ ಕಣಕ್ಕಿಳಿಯಲು 17 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ರಾಹುಲ್, ಇದೀಗ ಡೆಲ್ಲಿ ಪರ 3 ಕೋಟಿ ನಷ್ಟದಲ್ಲಿ ಅಂದರೆ 14 ಕೋಟಿ ರೂಗೆ ಬ್ಯಾಟ್ ಬೀಸಲಿದ್ದಾರೆ.

ಕೆಎಲ್ ರಾಹುಲ್ ಐಪಿಎಲ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಆದರೆ 2022 ರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ರಾಹುಲ್, ಒಮ್ಮೆಯೂ ತಂಡಕ್ಕೆ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಈ ಕಾರಣದಿಂದಾಗಿ ಲಕ್ನೋ ಅವರನ್ನು ತಂಡದಿಂದ ಕೈಬಿಟ್ಟಿತ್ತು.

2013 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ರಾಹುಲ್, ಇಲ್ಲಿಯವರೆಗೆ ಐಪಿಎಲ್‌ನಲ್ಲಿ 132 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 4 ಶತಕ ಮತ್ತು 37 ಅರ್ಧ ಶತಕಗಳೊಂದಿಗೆ 4,683 ರನ್ ಗಳಿಸಿದ್ದಾರೆ. ಇದಲ್ಲದೇ ರಾಹುಲ್ 6 ಸೀಸನ್‌ಗಳಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಸೀಸನ್ನಲ್ಲಿಯೂ ಅವರು 520 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು.

ವಾಸ್ತವವಾಗಿ, ಕಳೆದ ಸೀಸನ್ನಲ್ಲಿ, ಲಕ್ನೋ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ರಾಹುಲ್ ನಡುವೆ ಮೈದಾನದಲ್ಲಿ ಮಾತಿನ ಚಕಮಕಿ ನಡೆದಿತ್ತು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಪಡೆ 10 ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಇದಾದ ಬಳಿಕ ತಂಡದ ಡಗೌಟ್ ಬಳಿ ನಾಯಕ ಕೆಎಲ್ ರಾಹುಲ್ ಅವರನ್ನು ಮಾಲೀಕ ಸಂಜೀವ್ ಗೋಯೆಂಕಾ ಸಾರ್ವಜನಿಕವಾಗಿಯೇ ಜರಿದ್ದಿದ್ದರು.

ಆ ಬಳಿಕ ರಾಹುಲ್ ಲಕ್ನೋ ತಂಡವನ್ನು ತೊರೆಯುವುದು ಖಚಿತವಾಗಿತ್ತು. ಹೀಗಾಗಿ ಹರಾಜಿಗೆ ಬರುವ ರಾಹುಲ್ರನ್ನು ಆರ್ಸಿಬಿ ಖರೀದಿಸಲಿದೆ ಎಂದು ಎಲ್ಲಾ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಆರಂಭದಲ್ಲಿ ರಾಹುಲ್ರನ್ನು ಖರೀದಿಸಲು ಮುಂದಾಗಿದ್ದ ಆರ್ಸಿಬಿ, ಆ ಬಳಿಕ ಹಿಂದಕ್ಕೆ ಸರಿಯಿತು. ಹೀಗಾಗಿ ಕಡಿಮೆ ಬೆಲೆಗೆ ರಾಹುಲ್ ಡೆಲ್ಲಿ ತಂಡವನ್ನು ಸೇರಿಕೊಂಡರು.
Published On - 5:56 pm, Sun, 24 November 24
