Venkatesh Iyer IPL Auction 2025: 23.75 ಕೋಟಿ ರೂ.ಗೆ ಕೆಕೆಆರ್​ನಲ್ಲೇ ಉಳಿದ ವೆಂಕಟೇಶ್ ಅಯ್ಯರ್

Venkatesh Iyer Auction Price: ಐಪಿಎಲ್ 2025 ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 23.75 ಕೋಟಿ ರೂ.ಗೆ ಖರೀದಿಸಿದೆ. ಅಯ್ಯರ್ ಅವರ ಮೂಲ ಬೆಲೆ 2 ಕೋಟಿ ರೂ.ಗಳಾಗಿದ್ದು, ಹರಾಜಿನಲ್ಲಿ ಅವರಿಗೆ ಸಾಕಷ್ಟು ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ವೆಂಕಟೇಶ್ ಮತ್ತೆ ತನ್ನ ಮಾತೃ ತಂಡದಲ್ಲೇ ಉಳಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪೃಥ್ವಿಶಂಕರ
|

Updated on: Nov 24, 2024 | 7:35 PM

ಕಳೆದ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಮತ್ತೊಮ್ಮೆ ತನ್ನ ಹಳೆಯ ತಂಡದಲ್ಲೇ ಉಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ದಿನದ ಮೊದಲ ಖರೀದಿಯಾಗಿ ಶಾರುಖ್ ಫ್ರಾಂಚೈಸ್ ವೆಂಕಟೇಶ್ ಅಯ್ಯರ್ ಅವರನ್ನು 23 ಕೋಟಿ 75 ಲಕ್ಷ ರೂ.ಗಳಿಗೆ ಖರೀದಿಸಿದೆ.

1 / 5
ವೆಂಕಟೇಶ್ ಅಯ್ಯರ್ 2021 ರಿಂದ ಕೆಕೆಆರ್ ತಂಡದ ಪರ ಆಡುತ್ತಿದ್ದು, ಈ ತಂಡದ ಜೊತೆಗೆ ಐಪಿಎಲ್​ಗೆ ಪದಾರ್ಪಣೆ ಮಾಡಿದರು. ಆದಾಗ್ಯೂ ಕೆಕೆಆರ್, ವೆಂಕಟೇಶ್ ಅವರನ್ನು ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಂಡಿರಲಿಲ್ಲ. ಆದರೀಗ ಕೆಕೆಆರ್ ಮೆಗಾ ಹರಾಜಿನಲ್ಲಿ ದಾಖಲೆಯ ಮೊತ್ತ ನೀಡಿ ಅವರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

2 / 5
ವಾಸ್ತವವಾಗಿ ವೆಂಕಟೇಶ್ ಅವರನ್ನು ಖರೀದಿಸಲು ಆರ್​ಸಿಬಿ ಹಾಗೂ ಕೆಕೆಆರ್ ನಡುವೆ ಭಾರಿ ಪೈಪೋಟಿ ಕಂಡುಬಂದಿತು. ಈ ದೇಶೀ ಆಟಗಾರನಿಗಾಗಿ ಆರ್​ಸಿಬಿ 23.50 ಕೋಟಿ ರೂಗಳನ್ನು ಖರ್ಚು ಮಾಡಲು ಸಿದ್ದವಾಗಿತ್ತು. ಆದರೆ ಕೆಕೆಆರ್ 23.75 ಕೋಟಿ ರೂ. ನೀಡಿ ಅವರನ್ನು ತನ್ನಲ್ಲೇ ಉಳಿಸಿಕೊಂಡಿತು.

3 / 5
ವೆಂಕಟೇಶ್ ಅಯ್ಯರ್ ಇದುವರೆಗಿನ ಐಪಿಎಲ್ ವೃತ್ತಿಜೀವನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಡಿರುವ 51 ಪಂದ್ಯಗಳಲ್ಲಿ 31.57 ಸರಾಸರಿ ಮತ್ತು 137.12 ಸ್ಟ್ರೈಕ್ ರೇಟ್‌ನಲ್ಲಿ 1,327 ರನ್ ಗಳಿಸಿದ್ದಾರೆ. ಇದರಲ್ಲಿ 11 ಅರ್ಧ ಶತಕ ಮತ್ತು 1 ಶತಕ ಕೂಡ ಸೇರಿದೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ 104 ರನ್ ಆಗಿದೆ. ಇದರೊಂದಿಗೆ 121 ಬೌಂಡರಿ ಹಾಗೂ 61 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

4 / 5
ಬೌಲಿಂಗ್‌ನಲ್ಲೂ ಮಿಂಚಿರುವ ವೆಂಕಟೇಶ್ 3 ವಿಕೆಟ್ ಪಡೆದಿದ್ದಾರೆ. ಇನ್ನು ಕಳೆದ ಐಪಿಎಲ್‌ನಲ್ಲಿ 15 ಪಂದ್ಯಗಳನ್ನಾಡಿದ್ದ ವೆಂಕಟೇಶ್ 46.25 ರ ಸರಾಸರಿಯಲ್ಲಿ 370 ರನ್ ಗಳಿಸಿದ್ದರು. ಇದು ಅವರ ಅತ್ಯುತ್ತಮ ಬ್ಯಾಟಿಂಗ್‌ಗೆ ಉದಾಹರಣೆಯಾಗಿದೆ. ಹೀಗಾಗಿಯೇ ಕೆಕೆಆರ್, ವೆಂಕಟೇಶ್ ಮೇಲೆ ಇಷ್ಟು ನಂಬಿಕೆ ಇಟ್ಟಿದೆ.

5 / 5
Follow us
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್