Gautam Gambhir: ಟೀಮ್ ಇಂಡಿಯಾ ಈಗ ಅತ್ಯಂತ ಸುರಕ್ಷಿತ ಕೈಯಲ್ಲಿದೆ..!

| Updated By: ಝಾಹಿರ್ ಯೂಸುಫ್

Updated on: Dec 12, 2021 | 5:49 PM

India vs South Africa: ಭಾರತ ತಂಡವು ಇದೇ ತಿಂಗಳ 16 ರಂದು ದಕ್ಷಿಣ ಆಫ್ರಿಕಾ ಸರಣಿಗೆ ತೆರಳಲಿದ್ದು, ಮೊದಲ ಟೆಸ್ಟ್ ಪಂದ್ಯವು ಡಿಸೆಂಬರ್ 26 ರಿಂದ ಶುರುವಾಗಲಿದೆ. ಇನ್ನು ಮೂರು ಟೆಸ್ಟ್ ಪಂದ್ಯಗಳ ಬಳಿಕ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಆರಂಭವಾಗಲಿದೆ.

1 / 5
ಟೀಮ್ ಇಂಡಿಯಾ ಡಿಸೆಂಬರ್ 16 ರಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು 3 ದಿನಗಳ ಕ್ವಾರಂಟೈನ್ಗೆ ಒಳಗಾಗಿದ್ದಾರೆ.

2 / 5
ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರವನ್ನು ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಸ್ವಾಗತಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಗಂಭೀರ್, ಇದು ಭಾರತೀಯ ಕ್ರಿಕೆಟ್‌ಗೆ ಬಹಳ ಉತ್ತಮ ಸಂಕೇತವಾಗಿದೆ. ಸೀಮಿತ ಓವರ್‌ಗಳ ಸ್ವರೂಪದಲ್ಲಿ ತಂಡವನ್ನು ರೋಹಿತ್ ಶರ್ಮಾ ಉತ್ತಮವಾಗಿ ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

3 / 5
ನನ್ನ ಪ್ರಕಾರ T20 ಸ್ವರೂಪವಾಗಿರಲಿ ಅಥವಾ ODI ಫಾರ್ಮ್ಯಾಟ್ ಆಗಿರಲಿ, ಎರಡೂ ತಂಡಕ್ಕೂ ರೋಹಿತ್ ಶರ್ಮಾ ಉತ್ತಮ ಕ್ಯಾಪ್ಟನ್. ಹೀಗಾಗಿ ಈಗ ಟೀಮ್ ಇಂಡಿಯಾ ಸುರಕ್ಷಿತ ಕೈಯಲ್ಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಗಂಭೀರ್ ತಿಳಿಸಿದ್ದಾರೆ.

4 / 5
ರೋಹಿತ್ ಶರ್ಮಾ ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. ಇದಕ್ಕೆಲ್ಲಾ ಕಾರಣ ಆತನಲ್ಲಿರುವ ನಾಯಕತ್ವದ ಗುಣ. ಆತನಲ್ಲಿರುವ ಸಂಯಮ ಹಾಗೂ ಚುತುರತೆ ತಂಡಕ್ಕೆ ನೆರವಾಗಲಿದೆ. ಹೀಗಾಗಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಭಾರತ ತಂಡವು ಉತ್ತಮ ಪ್ರದರ್ಶನ ನೀಡಲಿದೆ ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.

5 / 5
ಭಾರತ ತಂಡವು ಇದೇ ತಿಂಗಳ 16 ರಂದು ದಕ್ಷಿಣ ಆಫ್ರಿಕಾ ಸರಣಿಗೆ ತೆರಳಲಿದ್ದು, ಮೊದಲ ಟೆಸ್ಟ್ ಪಂದ್ಯವು ಡಿಸೆಂಬರ್ 26 ರಿಂದ ಶುರುವಾಗಲಿದೆ. ಇನ್ನು ಮೂರು ಟೆಸ್ಟ್ ಪಂದ್ಯಗಳ ಬಳಿಕ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯೊಂದಿಗೆ ರೋಹಿತ್ ಶರ್ಮಾ ಏಕದಿನ ತಂಡದ ನಾಯಕನಾಗಿ ಪದಾರ್ಪಣೆ ಮಾಡಲಿದ್ದಾರೆ.