
ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ರೋಹಿತ್ ಶರ್ಮಾ ಅವರ ವೃತ್ತಿಬದುಕಿನ ಬಗ್ಗೆಗಿನ ವದಂತಿಗಳಿಗೆ ತೆರೆ ಬಿದ್ದಿದೆ. ವಾಸ್ತವವಾಗಿ ರೋಹಿತ್ ಶರ್ಮಾ 2027 ರ ಏಕದಿನ ವಿಶ್ವಕಪ್ಗೆ ತಂಡದಲ್ಲಿ ಇರುವುದಿಲ್ಲ. ಅವರ ಬದಲಿಗೆ ಬೇರೆ ಆಟಗಾರನನ್ನು ಆಡಿಸಲು ಬಿಸಿಸಿಐ ಚಿಂತಿಸಿದೆ ಎಂದು ವರದಿಯಾಗಿತ್ತು. ಅಲ್ಲದೆ ಸೆಪ್ಟೆಂಬರ್ 3 ರಂದು ನಡೆಯಲಿರುವ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗುತ್ತಿತ್ತು(PC-PTI).
ಪೂರ್ವ ನಿಗದಿಯಂತೆ ಇಂದು ಮುಂಬೈನ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಈ ಸಭೆಯಲ್ಲಿ ಮಂಡಳಿಯ ಅಧಿಕಾರಿಗಳ ಜೊತೆಗೆ, ಮುಖ್ಯ ಕೋಚ್ ಗೌತಮ್ ಗಂಭೀರ್, ಏಕದಿನ ಮತ್ತು ಟೆಸ್ಟ್ ನಾಯಕ ಶುಭ್ಮನ್ ಗಿಲ್, ಟಿ 20 ನಾಯಕ ಶ್ರೇಯಸ್ ಅಯ್ಯರ್, ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತು ಆಯ್ಕೆ ಸಮಿತಿಯ ಸದಸ್ಯರು ಭಾಗವಹಿಸಿದ್ದರು(PC-PTI).
ಈ ಸಭೆಯಲ್ಲಿ ರೋಹಿತ್ ಶರ್ಮಾ ಮತ್ತು ಅಜಿತ್ ಅಗರ್ಕರ್ ಅವರ ಭವಿಷ್ಯ ಮತ್ತು ಟೀಂ ಇಂಡಿಯಾದ ಇತ್ತೀಚಿನ ಪ್ರದರ್ಶನದ ವಿಮರ್ಶೆ ಮತ್ತು ಆಟಗಾರರ ಗಾಯಗಳಂತಹ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಭೆಯ ನಂತರ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ರೋಹಿತ್ ಶರ್ಮಾ ಅವರ ಭವಿಷ್ಯದ ಸುತ್ತಲಿನ ಎಲ್ಲಾ ಊಹಾಪೋಹಗಳನ್ನು ತಳ್ಳಿಹಾಕಿದರು(PC-PTI).
ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಅವರು 138 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಹೀಗಿರುವಾಗ ಅವರ ಬಗ್ಗೆ ವದಂತಿಗಳು ಏಕೆ ಹರಡುತ್ತಿವೆ?. ಅಲ್ಲದೆ ಇಂತಹ ಊಹಾಪೋಹ ಮತ್ತು ವದಂತಿಗಳಿಗೆ ಯಾವುದೇ ಸ್ಪಷ್ಟನೆ ನೀಡಲು ನಾವು ಬಯಸುವುದಿಲ್ಲ ಎಂದರು. ಇದರರ್ಥ ರೋಹಿತ್ ಶರ್ಮಾ ಭಾರತೀಯ ಏಕದಿನ ತಂಡದ ಭಾಗವಾಗಿ ಉಳಿಯುತ್ತಾರೆ ಎಂಬ ಸೂಚನೆ ಸ್ಪಷ್ಟವಾಗಿದೆ(PC-PTI).
ಇದಕ್ಕೂ ಮೊದಲು, ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ, ರೋಹಿತ್ ಶರ್ಮಾ ನಿವೃತ್ತಿ ವರದಿಗಳು ಹೊರಬಂದಾಗ, ಸೈಕಿಯಾ ಮಾಧ್ಯಮಗಳನ್ನು ಉದ್ದೇಶಿಸಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದರು. ರೋಹಿತ್ ಶರ್ಮಾ ಭಾರತೀಯ ಏಕದಿನ ತಂಡದ ಖಾಯಂ ಸದಸ್ಯರಾಗಿದ್ದಾರೆ ಮತ್ತು ತಂಡದಲ್ಲೇ ಇರುತ್ತಾರೆ. ಅಲ್ಲದೆ ಲಾರ್ಡ್ಸ್‌ನಲ್ಲಿ ರೋಹಿತ್ ತಮ್ಮ ಕೊನೆಯ ಪಂದ್ಯವನ್ನು ಆಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂತಲೂ ಅವರು ಹೇಳಿದ್ದರು. ಆ ನಂತರ ರೋಹಿತ್, ಲಾರ್ಡ್ಸ್ ಏಕದಿನ ಪಂದ್ಯದಲ್ಲಿ 138 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ಎಲ್ಲಾ ಟೀಕಾಕಾರರಿಗೆ ಸೂಕ್ತ ಉತ್ತರ ನೀಡಿದ್ದರು(PC-PTI).