Rohit Sharma: ರೋಹಿತ್ ಶರ್ಮಾ ಈಗ ಸಿಕ್ಸರ್ ಸರದಾರ

| Updated By: ಝಾಹಿರ್ ಯೂಸುಫ್

Updated on: Nov 22, 2021 | 4:46 PM

Rohit Sharma Record: ಮುಂದಿನ ಸರಣಿಯಲ್ಲಿ ರೋಹಿತ್ ಶರ್ಮಾ 15 ಸಿಕ್ಸ್ ಬಾರಿಸಿದರೆ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಬ್ಯಾಟರ್​ ಎನಿಸಿಕೊಳ್ಳಲಿದ್ದಾರೆ.

1 / 5
 ನ್ಯೂಜಿಲೆಂಡ್ ವಿರುದ್ದ ಕೊನೆಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಾಯಕ ರೋಹಿತ್ ಶರ್ಮಾ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಯುವ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಜೊತೆಗೂಡಿ ಇನಿಂಗ್ಸ್​ ಆರಂಭಿಸಿದ ಹಿಟ್​ಮ್ಯಾನ್ ಬಿರುಸಿನ ಅರ್ಧಶತಕ ಬಾರಿಸಿ ಗಮನ ಸೆಳೆದರು.

2 / 5
ಅಂತಿಮವಾಗಿ 31 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 56 ರನ್​ ಬಾರಿಸಿ ಔಟಾದರು. ಆದರೆ ಇದಕ್ಕೂ ಮುನ್ನ ಹಿಟ್​ಮ್ಯಾನ್ 5 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸ್ ಸಿಡಿಸಿದ್ದರು. ಈ ಮೂರು ಸಿಕ್ಸ್​ನೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ನಿರ್ಮಿಸಿದ್ದಾರೆ.

3 / 5
ನ್ಯೂಜಿಲೆಂಡ್ ವಿರುದ್ದದ 3 ಸಿಕ್ಸ್​ನೊಂದಿಗೆ ಹಿಟ್​ಮ್ಯಾನ್ ಟಿ20 ಕ್ರಿಕೆಟ್​ನಲ್ಲಿ 150 ಸಿಕ್ಸ್ ಪೂರೈಸಿದ್ದಾರೆ. ಇದರೊಂದಿಗೆ 150 ಸಿಕ್ಸ್​ ಬಾರಿಸಿದ ವಿಶ್ವದ ಎರಡನೇ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್​ಮನ್ ಎಂಬ ದಾಖಲೆ ನಿರ್ಮಿಸಿದ್ದಾರೆ.

4 / 5
 ಸದ್ಯ 165 ಸಿಕ್ಸ್ ಬಾರಿಸಿರುವ ಮಾರ್ಟಿನ್ ಗಪ್ಟಿಲ್ ಅಗ್ರಸ್ಥಾನದಲ್ಲಿದ್ದು, ಈ ವಿಶ್ವ ದಾಖಲೆಯನ್ನು ಮುರಿಯಲು ಹಿಟ್​ಮ್ಯಾನ್​ಗೆ ಇನ್ನು ಕೇವಲ 12 ಸಿಕ್ಸ್​ಗಳ ಅವಶ್ಯಕತೆಯಿದೆ.

5 / 5
ಹೀಗಾಗಿ ಮುಂದಿನ ಸರಣಿಯಲ್ಲಿ ರೋಹಿತ್ ಶರ್ಮಾ 15 ಸಿಕ್ಸ್ ಬಾರಿಸಿದರೆ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಬ್ಯಾಟರ್​ ಎನಿಸಿಕೊಳ್ಳಲಿದ್ದಾರೆ.