- Kannada News Photo gallery Cricket photos rohit sharma in post match presentation after IND vs AFG 2nd T20I He talking about Jaiswal and Shivam Dube
IND vs AFG 2nd T20I: ಪಂದ್ಯ ಮುಗಿದ ಬಳಿಕ ದುಬೆ-ಜೈಸ್ವಾಲ್ ಬಗ್ಗೆ ರೋಹಿತ್ ಶರ್ಮಾ ಏನಂದ್ರು ನೋಡಿ
Rohit Sharma post match presentation, India vs Afghanistan 2nd T20I: ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಸರಣಿ ವಶಪಡಿಸಿಕೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಆಟಗಾರರ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ. ಅವರು ಏನು ಹೇಳಿದ್ದಾರೆ ನೋಡಿ.
Updated on:Jan 15, 2024 | 7:50 AM

ಭಾನುವಾರ ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ಭಾರತ ಭರ್ಜರಿ ಜಯ ಸಾಧಿಸಿದೆ. ಅಕ್ಷರ್ ಪಟೇಲ್ ಬೌಲಿಂಗ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ 6 ವಿಕೆಟ್ಗಳ ಗೆಲುವು ಕಂಡಿತು.

ಈ ಗೆಲುವಿನ ಮೂಲಕ ಭಾರತ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಆಟಗಾರರ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ. ಅವರು ಏನು ಹೇಳಿದ್ದಾರೆ ನೋಡಿ.

ತನ್ನ 150ನೇ ಟಿ20 ಪಂದ್ಯದ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ಇದೊಂದು ದೊಡ್ಡ ಭಾವನೆ, 2007 ರಲ್ಲಿ ಪ್ರಾರಂಭವಾದ ದೀರ್ಘ ಪ್ರಯಾಣವಾಗಿದೆ. ಇಲ್ಲಿ ಕಳೆದ ಪ್ರತಿ ಕ್ಷಣವನ್ನು ನಾನು ಪ್ರೀತಿಸುತ್ತೇನೆ. ಈ ಹಾದಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪಂದ್ಯದ ಪ್ರದರ್ಶನದ ಬಗ್ಗೆ ಮಾತನಾಡಿದ ರೋಹಿತ್, ಆಟಗಾರರಿಗೆ ನಾವು ಏನು ಮಾಡಬೇಕೆಂದು ಸ್ಪಷ್ಟವಾಗಿ ಹೇಳಿದ್ದೇವೆ, ಎಲ್ಲರಿಗೂ ಸಂದೇಶವನ್ನು ನೀಡುತ್ತೇವೆ. ಆಗ ಅಂತಹ ಪ್ರದರ್ಶನವನ್ನು ನೋಡಿದಾಗ, ನಿಜವಾಗಿಯೂ ಹೆಮ್ಮೆ ಆಗುತ್ತದೆ. ಕಳೆದ ಎರಡು ಪಂದ್ಯಗಳಲ್ಲಿ, ನಾವು ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕಿದ್ದೇವೆ ಎಂದಿದ್ದಾರೆ.

ಯಶಸ್ವಿ ಜೈಸ್ವಾಲ್ ಈಗ ಟೆಸ್ಟ್ ಕ್ರಿಕೆಟ್ ಆಡುತ್ತಾರೆ. ಜೊತೆಗೆ ಟಿ20I ಕೂಡ ಆಡಿದ್ದಾರೆ. ಅವರು ತಮ್ಮ ಸಾಮರ್ಥ್ಯ ಏನೆಂದು ತೋರಿಸಿದ್ದಾರೆ. ಅವರು ಉತ್ತಮ ಪ್ರತಿಭೆಯನ್ನು ಹೊಂದಿದ್ದಾರೆ. ಜೈಸ್ವಾಲ್ ಆಯ್ಕೆ ಮಾಡುವ ಒಂದೊಂದು ಹೊಡೆತ ಉತ್ತಮವಾಗಿರುತ್ತದೆ ಎಂಬುದು ರೋಹಿತ್ ಶರ್ಮಾ ಮಾತು.

ಶಿವಂ ದುಬೆ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ದುಬೆ ಒಬ್ಬ ಬಿಗ್ ಗಾಯ್. ಅವರು ಸಾಕಷ್ಟು ಶಕ್ತಿ ಹೊಂದಿದ್ದಾರೆ. ಸ್ಪಿನ್ನರ್‌ಗಳಿಗೆ ಚೆನ್ನಾಗಿ ಆಡುತ್ತಾರೆ. ಇದು ನಾವು ಅವರಿಗೆ ನೀಡಿರುವ ಪಾತ್ರ ಮತ್ತು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಮಗೆ ಕಳೆದ ಎರಡು ಪಂದ್ಯಗಳಲ್ಲಿ ಕೂಡ ನಿರ್ಣಾಯಕ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ ಎಂದು ಹಿಟ್ಮ್ಯಾನ್ ಹೇಳಿದರು.
Published On - 7:39 am, Mon, 15 January 24



















