- Kannada News Photo gallery Cricket photos Rohit Sharma praised teams outstanding performance in post match presentation after IND vs SL Asia Cup Final
Asia Cup Final: ಟ್ರೋಫಿ ಎತ್ತಿ ಹಿಡಿಯುವ ಮುನ್ನ ಪೋಸ್ಟ್ ಮ್ಯಾಚ್ನಲ್ಲಿ ರೋಹಿತ್ ಶರ್ಮಾ ಹೇಳಿದ್ದೇನು ನೋಡಿ
Rohit Sharma Post Match, IND vs SL Asia Cup Final: ಶ್ರೀಲಂಕಾ ವಿರುದ್ಧದ ಏಷ್ಯಾಕಪ್ ಫೈನಲ್ ಪಂದ್ಯ ಮುಗಿದ ಬಳಿಕ ಟ್ರೋಫಿ ಪಡೆದುಕೊಳ್ಳುವ ಮುನ್ನ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಆಟಗಾರರು ನೀಡಿದ ಪ್ರದರ್ಶನವನ್ನು ಹಿಟ್ಮ್ಯಾನ್ ಹಾಡಿಹೊಗಳಿದ್ದಾರೆ.
Updated on: Sep 18, 2023 | 7:35 AM

ಏಷ್ಯಾಕಪ್ 2023 ಫೈನಲ್ನಲ್ಲಿ ಊಹೆಗೂ ನಿಲುಕದ ರೀತಿ ಪ್ರದರ್ಶನ ತೋರಿದ ಭಾರತ ಕ್ರಿಕೆಟ್ ತಂಡ ಪ್ರಶಸ್ತಿ ಗೆದ್ದು ಬೀಗಿದೆ. ಕೊಲಂಬೊದ ಆರ್. ಪ್ರೇಮದಾ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಭಾರತ-ಶ್ರೀಲಂಕಾ ಫೈನಲ್ ಪಂದ್ಯ 2 ಗಂಟೆಗಳ ಒಳಗೆ ಮುಕ್ತಾಯಗೊಂಡಿತು. ಮೊಹಮ್ಮದ್ ಸಿರಾಜ್ 6 ವಿಕೆಟ್ ಕಿತ್ತು ಹೀರೋ ಆದರು.

ಪಂದ್ಯ ಮುಗಿದ ಬಳಿಕ ಟ್ರೋಫಿ ಪಡೆದುಕೊಳ್ಳುವ ಮುನ್ನ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಆಟಗಾರರು ನೀಡಿದ ಪ್ರದರ್ಶನವನ್ನು ಹಿಟ್ಮ್ಯಾನ್ ಹಾಡಿಹೊಗಳಿದ್ದಾರೆ.

ಇದೊಂದು ಅದ್ಭುತ ಪ್ರದರ್ಶನವಾಗಿದೆ. ಫೈನಲ್ನಲ್ಲಿ ನಿಮ್ಮನ್ನು ನೀವು ತಯಾರು ಮಾಡಿಕೊಂಡು ಈರೀತಿ ಪ್ರದರ್ಶನ ತೋರುವುದು ಸುಲಭವಲ್ಲ. ಬೌಲಿಂಗ್ನಲ್ಲಿ ಅತ್ಯುತ್ತಮ ಆರಂಭ ಪಡೆದುಕೊಂಡು ಬ್ಯಾಟಿಂಗ್ನಲ್ಲಿ ಉತ್ತಮವಾಗಿ ಮುಕ್ತಾಯ ಮಾಡಿದೆವು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ನಮ್ಮ ವೇಗದ ಬೌಲರ್ಗಳು ತುಂಬಾ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾರೆ. ಇದು ನಾವು ಹೆಮ್ಮೆ ಪಡುವ ವಿಷಯ. ವೇಗಿಗಳಿಗೆ ತಾವೇನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇದೆ. ಅದನ್ನು ನೋಡಲು ಚೆನ್ನಾಗಿರುತ್ತದೆ. ಈರೀತಿಯ ಪ್ರದರ್ಶನವನ್ನು ನಾವು ದೀರ್ಘಕಾಲದ ವರೆಗೆ ಮುಂದುವರೆಸುತ್ತೇವೆ - ರೋಹಿತ್ ಶರ್ಮಾ.

ಇಂದಿನ ಪಂದ್ಯದಲ್ಲಿ ಕ್ರೆಡಿಟ್ ಮೊಹಮ್ಮದ್ ಸಿರಾಜ್ಗೆ ಸಲ್ಲಬೇಕು. ವೇಗಿಗಳು ಚೆಂಡನ್ನು ಗಾಳಿಯಲ್ಲಿ ಬಿಟ್ಟು ಪಿಚ್ನ ಹೊರಗೆ ಚಲಿಸುವಂತೆ ಮಾಡುವುದು ಅಪರೂಪ. ಈ ಟೂರ್ನಿಯಲ್ಲಿ ನಾವು ಏನೆಲ್ಲ ಸಾಧಿಸಬೇಕು ಎಂದುಕೊಂಡಿದ್ದೆವೊ ಅದನ್ನೆಲ್ಲ ಮಾಡಿದ್ದೇವೆ. ಮುಂಬರುವ ವಿಶ್ವಕಪ್ ಅನ್ನು ಎದುರು ನೋಡುತ್ತಿದ್ದೇವೆ ಎಂಬುದು ರೋಹಿತ್ ಮಾತು.

ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಹಾರ್ದಿಕ್ ಪಾಂಡ್ಯ-ಇಶಾನ್ ಕಿಶನ್ ಬ್ಯಾಟಿಂಗ್ ಮಾಡಿದ ರೀತಿ, ನಂತರ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಶತಕ, ಶುಭ್ಮನ್ ಗಿಲ್ ಬ್ಯಾಟಿಂಗ್ ಮಾಡಿದ ರೀತಿ ಅತ್ಯುತ್ತಮವಾಗಿತ್ತು. ನಮ್ಮ ಆಟಗಾರರು ವಿವಿಧ ಹಂತಗಳಲ್ಲಿ ತಂಡಕ್ಕೆ ಅಗತ್ಯ ಕೊಡುಗೆ ಸಲ್ಲಿಸಿದ್ದಾರೆ ಎಂದು ರೋಹಿತ್ ಹೇಳಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಮೊಹಮ್ಮದ್ ಸಿರಾಜ್ (21 ರನ್ಗೆ 6 ವಿಕೆಟ್) ಬೌಲಿಂಗ್ ದಾಳಿಗೆ ತತ್ತರಿಸಿ 50 ರನ್ಗಳಿಗೆ ಆಲೌಟ್ ಆಯಿತು. ಭಾರತ ಕೇವಲ 6.1 ಓವರ್ಗಳಲ್ಲಿ ಗುರಿ ಮುಟ್ಟಿ ಎಂಟನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.









