- Kannada News Photo gallery Cricket photos Rohit Sharma Surpasses Sachin Tendulkar and Sehwag Records
Rohit Sharma: ಹಿಟ್ಮ್ಯಾನ್ ಅಬ್ಬರಕ್ಕೆ ಸಚಿನ್-ಸೆಹ್ವಾಗ್ ದಾಖಲೆ ಧೂಳೀಪಟ
Rohit Sharma's Records: ಆಸೀಸ್ ವಿರುದ್ಧ 212 ಎಸೆತಗಳಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾ 2 ಸಿಕ್ಸ್ ಹಾಗೂ 15 ಫೋರ್ನೊಂದಿಗೆ 120 ರನ್ ಚಚ್ಚಿದ್ದರು.
Updated on: Feb 11, 2023 | 10:58 PM

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಪ್ರಮುಖ ದಾಖಲೆಯೆಂದರೆ ಓಪನಿಂಗ್ ಸೆಂಚುರಿ ರೆಕಾರ್ಡ್.

ಆಸೀಸ್ ವಿರುದ್ಧ 212 ಎಸೆತಗಳಲ್ಲಿ ಹಿಟ್ಮ್ಯಾನ್ 2 ಸಿಕ್ಸ್ ಹಾಗೂ 15 ಫೋರ್ನೊಂದಿಗೆ 120 ರನ್ ಚಚ್ಚಿದ್ದರು. ಇದರೊಂದಿಗೆ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಅತೀ ಹೆಚ್ಚು ಶತಕ ಬಾರಿಸಿದ ದಾಖಲೆ ರೋಹಿತ್ ಶರ್ಮಾ ಪಾಲಾಯಿತು.

ಈ ಹಿಂದೆ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ ತೆಂಡೂಲ್ಕರ್ ಭಾರತದಲ್ಲಿ ಆರಂಭಿಕರಾಗಿ ಒಟ್ಟು 19 ಶತಕಗಳನ್ನು ಬಾರಿಸಿದ್ದಾರೆ.

ಇನ್ನು ವೀರೇಂದ್ರ ಸೆಹ್ವಾಗ್ ಆರಂಭಿಕರಾಗಿ ಕಣಕ್ಕಿಳಿದು ಒಟ್ಟು 18 ಶತಕಗಳನ್ನು ಸಿಡಿಸಿದ್ದಾರೆ. ಇದೀಗ ಈ ಇಬ್ಬರು ದಿಗ್ಗಜರನ್ನು ಹಿಟ್ಮ್ಯಾನ್ ಹಿಂದಿಕ್ಕಿರುವುದು ವಿಶೇಷ.

ಶ್ರೀಲಂಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ರೋಹಿತ್ ಶರ್ಮಾ, ಇದೀಗ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್ನಲ್ಲಿ ಸೆಂಚುರಿಸಿ ಸಿಡಿಸಿದ್ದಾರೆ. ಈ ಮೂಲಕ ಭಾರತದಲ್ಲಿ ಆರಂಭಿಕನಾಗಿ ಕಣಕ್ಕಿಳಿದು 20 ಶತಕಗಳನ್ನು ಬಾರಿಸಿದ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.




