- Kannada News Photo gallery Cricket photos Royal Challengers Bangalore Players reached Jaipur for clash against Rajasthan Royals Check RCB Playoff scenario
RR vs RCB: ಜೈಪುರ ತಲುಪಿದ ಆರ್ಸಿಬಿ ಆಟಗಾರರು: ಫಾಪ್ ಪಡೆ ಮುಂದಿನ ಪಂದ್ಯವನ್ನು ಹೇಗೆ ಗೆಲ್ಲಬೇಕು?
Royal Challengers Bangalore: ಆರ್ಸಿಬಿಗೆ ಉಳಿದಿರುವುದು ಕೇವಲ ಮೂರು ಪಂದ್ಯ ಮಾತ್ರ. ಇದರಲ್ಲಿ ಮೇ 14 ಭಾನುವಾರದಂದು ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯಲಿದೆ.
Updated on: May 12, 2023 | 12:06 PM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಹತ್ವದ ಘಟ್ಟದತ್ತ ತಲುಪುತ್ತಿದೆ. ಒಂದು ತಂಡದ ಸೋಲು- ಗೆಲುವು ಮತ್ತೊಂದು ತಂಡದ ಅಳಿವು-ಉಳಿವಿನ ಲೆಕ್ಕಚಾರ ಶುರುವಾಗಿದೆ. ಕೆಲ ತಂಡಗಳು + ರನ್ರೇಟ್ಗಾಗಿ ಹರಸಾಹಸ ಪಡುತ್ತಿದೆ.

ಚೊಚ್ಚಲ ಕಪ್ ಗೆಲ್ಲುವ ನಿರೀಕ್ಷೆಯೊಂದಿಗೆ ಐಪಿಎಲ್ 2023 ರಲ್ಲಿ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಕೂಡ ಸಂಕಷ್ಟದಲ್ಲಿದೆ. ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಬೇಕಾದರೆ ಆರ್ಸಿಬಿ ಸಾಕಷ್ಟು ಶ್ರಮವಹಿಸಬೇಕಿದೆ.

ಬೆಂಗಳೂರಿಗೆ ಉಳಿದಿರುವುದು ಕೇವಲ ಮೂರು ಪಂದ್ಯ ಮಾತ್ರ. ಇದರಲ್ಲಿ ಮೇ 14 ಭಾನುವಾರದಂದು ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯಲಿದೆ.

ಇದೀಗ ಆರ್ಆರ್ ವಿರುದ್ಧದ ಪಂದ್ಯದಕ್ಕೆ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ಸೇರಿದಂತೆ ಆರ್ಸಿಬಿ ಎಲ್ಲ ಆಟಗಾರರು ಗುರುವಾರ ಜೈಪುರ ತಲುಪಿದ್ದಾರೆ. ಇಂದಿನಿಂದ ಕಠಿಣ ಅಭ್ಯಾಸ ಶುರು ಮಾಡಲಿದ್ದಾರೆ.

ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಬೇಕಾದರೆ ಮುಂದಿನ ಮೂರು ಪಂದ್ಯಗಳಲ್ಲಿ ಕೇವಲ ಗೆದ್ದರಷ್ಟೆ ಸಾಲದು. ದೊಡ್ಡ ಅಂತರದ ಜಯ ಸಾಧಿಸಿ + ರನ್ರೇಟ್ಗೆ ಮರಳಬೇಕಿದೆ. ಜೊತೆಗೆ ಮೇ. 14 ರಂದು ನಡೆಯಲಿರುವ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಸೋಲಬೇಕಿದೆ. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್ ಕೂಡ 1 ಪಂದ್ಯದಲ್ಲಿ ಸೋಲುವುದನ್ನು ಎದುರು ನೋಡಬೇಕು.

ಹೀಗೆ ಕೆಲವು ಲೆಕ್ಕಚಾರಗಳ ಮೂಲಕ ಆರ್ಸಿಬಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇನ್ನೂ ಜೀವಂತವಾಗಿದೆ. ಆದರೆ, ಮುಂದಿನ ಮೂರು ಪಂದ್ಯಗಳಲ್ಲಿ ಬೆಂಗಳೂರು ಯಾವರೀತಿ ಪ್ರದರ್ಶನ ತೋರುತ್ತೆ ಎಂಬುದರ ಮೇಲೆ ಈ ಎಲ್ಲ ಲೆಕ್ಕಚಾರ ನಿಂತಿದೆ.

ಮೇ. 14 ರಂದು ಆರ್ಸಿಬಿ ತಂಡ ಆರ್ಆರ್ ವಿರುದ್ಧ ಆಡಿದರೆ ಬಳಿಕ ಮೇ. 18 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ. ನಂತರ ಮೇ. 21 ರಂದು ಲೀಗ್ನ ಕೊನೆಯ ಪಂದ್ಯ ಆರ್ಸಿಬಿ ಆಡಲಿದ್ದು ಗುಜರಾತ್ ಟೈಟಾನ್ಸ್ ಎದುರಾಳಿ ಆಗಿದೆ.

ಸದ್ಯ ರಾಯಲ್ ಚಾಲೆಂಜರ್ಸ್ ಪಾಯಿಂಟ್ ಟೇಬಲ್ನಲ್ಲಿ ಆರನೇ ಸ್ಥಾನಕ್ಕೇರಿದೆ. ಗುರುವಾರದ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಕೆಕೆಆರ್ ಸೋತ ಪರಿಣಾಮ ಆರ್ಸಿಬಿ ಒಂದು ಸ್ಥಾನ ಮೇಲಕ್ಕೇರಿದೆ. ಆಡಿದ ಒಟ್ಟು ಹನ್ನೊಂದು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಆರರಲ್ಲಿ ಸೋಲು ಕಂಡು 10 ಅಂಕ ಸಂಪಾದಿಸಿ -0.345 ರನ್ರೇಟ್ ಹೊಂದಿದೆ.
























