AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುಮ್ರಾ ಬೆಂಡೆತ್ತಿ ಹೊಸ ಇತಿಹಾಸ ರಚಿಸಿದ ಸ್ಯಾಮ್ ಕೊನ್​ಸ್ಟಾಸ್

Sam Konstas - Jasprit Bumrah: ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಬರೋಬ್ಬರಿ 4483 ಎಸೆತಗಳ ಬಳಿಕ ಟೆಸ್ಟ್​ನಲ್ಲಿ ಸಿಕ್ಸ್ ಹೊಡೆಸಿಕೊಂಡಿದ್ದಾರೆ. ಅಂದರೆ 2021 ರಿಂದ 28 ಟೆಸ್ಟ್ ಪಂದ್ಯಗಳನ್ನಾಡಿರುವ ಬುಮ್ರಾ ಒಮ್ಮೆಯೂ ಸಿಕ್ಸ್ ಚಚ್ಚಿಸಿಕೊಂಡಿರಲಿಲ್ಲ. ಆದರೀಗ ಬುಮ್ರಾ ಅವರ ಬೆಂಡೆತ್ತುವ ಮೂಲಕ ಸ್ಯಾಮ್ ಕೊನ್​ಸ್ಟಾಸ್ ಈ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದಾರೆ.

ಝಾಹಿರ್ ಯೂಸುಫ್
|

Updated on: Dec 26, 2024 | 7:54 AM

Share
ಜಸ್​ಪ್ರೀತ್ ಬುಮ್ರಾ ತಮ್ಮ ಟೆಸ್ಟ್ ಕೆರಿಯರ್​ನಲ್ಲಿ 44 ಪಂದ್ಯಗಳನ್ನಾಡಿದ್ದಾರೆ. ಈ 44 ಪಂದ್ಯಗಳಲ್ಲಿ 84 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಎಸೆದಿರುವ ಒಟ್ಟು ಓವರ್​ಗಳ ಸಂಖ್ಯೆ 1383, ಅಂದರೆ ಬರೋಬ್ಬರಿ 8298 ಎಸೆತಗಳನ್ನು ಎಸೆದಿದ್ದಾರೆ. ಇದರ ನಡುವೆ ನೀಡಿರುವುದು ಕೇವಲ 7 ಸಿಕ್ಸ್​​ಗಳು ಮಾತ್ರವಾಗಿತ್ತು. ಆದರೆ ಅದು ಸ್ಯಾಮ್ ಕೊನ್​ಸ್ಟಾಸ್ ಬರುವ ಮುಂಚೆ.

1 / 5
ಹೌದು, ಮೆಲ್ಬೋರ್ನ್​ನ ಎಂಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲೇ ಸ್ಯಾಮ್ ಕೊನ್​ಸ್ಟಾಸ್ ಅಬ್ಬರಿಸಿದ್ದಾರೆ. ಅದು ಕೂಡ ಯಾರ್ಕರ್ ಸ್ಪೆಷಲಿಸ್ಟ್ ಜಸ್​ಪ್ರೀತ್ ಬುಮ್ರಾಗೆ ಸಿಕ್ಸ್​ಗಳನ್ನು ಸಿಡಿಸುವ ಮೂಲಕ ಎಂಬುದು ವಿಶೇಷ.

2 / 5
2021 ರಲ್ಲಿ ಟೆಸ್ಟ್​ನಲ್ಲಿ ಕೊನೆಯ ಬಾರಿ ಸಿಕ್ಸ್ ಹೊಡೆಸಿಕೊಂಡ ಬುಮ್ರಾ ಇದೀಗ ಒಂದೇ ಪಂದ್ಯದಲ್ಲಿ 2 ಸಿಕ್ಸ್ ಚಚ್ಚಿಸಿಕೊಂಡಿದ್ದಾರೆ. ಈ ಎರಡೂ ಸಿಕ್ಸ್​ಗಳನ್ನು ಬಾರಿಸಿದ್ದು 19ರ ಹರೆಯದ ಸ್ಯಾಮ್ ಕೊನ್​ಸ್ಟಾಸ್ ಎಂಬುದು ವಿಶೇಷ. ಈ ಮೂಲಕ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ಬುಮ್ರಾಗೆ 2 ಸಿಕ್ಸ್ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸ್ಯಾಮ್ ತಮ್ಮದಾಗಿಸಿಕೊಂಡಿದ್ದಾರೆ.

2021 ರಲ್ಲಿ ಟೆಸ್ಟ್​ನಲ್ಲಿ ಕೊನೆಯ ಬಾರಿ ಸಿಕ್ಸ್ ಹೊಡೆಸಿಕೊಂಡ ಬುಮ್ರಾ ಇದೀಗ ಒಂದೇ ಪಂದ್ಯದಲ್ಲಿ 2 ಸಿಕ್ಸ್ ಚಚ್ಚಿಸಿಕೊಂಡಿದ್ದಾರೆ. ಈ ಎರಡೂ ಸಿಕ್ಸ್​ಗಳನ್ನು ಬಾರಿಸಿದ್ದು 19ರ ಹರೆಯದ ಸ್ಯಾಮ್ ಕೊನ್​ಸ್ಟಾಸ್ ಎಂಬುದು ವಿಶೇಷ. ಈ ಮೂಲಕ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ಬುಮ್ರಾಗೆ 2 ಸಿಕ್ಸ್ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸ್ಯಾಮ್ ತಮ್ಮದಾಗಿಸಿಕೊಂಡಿದ್ದಾರೆ.

3 / 5
ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಈ ಪಂದ್ಯದ 11ನೇ ಓವರ್​ನಲ್ಲಿ ಸ್ಯಾಮ್ ಕೊನ್​ಸ್ಟಾಸ್ ಒಂದೇ ಓವರ್​ನಲ್ಲಿ 18 ರನ್​ ಚಚ್ಚಿದ್ದಾರೆ. ಇದು ಸಹ ಜಸ್​ಪ್ರೀತ್ ಬುಮ್ರಾ ಅವರ ಓವರ್​ನಲ್ಲಿ ಎಂಬುದು ಉಲ್ಲೇಖಾರ್ಹ. ಅಂದರೆ ಬುಮ್ರಾ ಅವರನ್ನೇ ಲೀಲಾಜಾಲವಾಗಿ ಎದುರಿಸಿ ಸ್ಯಾಮ್ ಕೊನ್​ಸ್ಟಾಸ್ ಚೊಚ್ಚಲ ಪಂದ್ಯದಲ್ಲೇ ಸಂಚಲನ ಸೃಷ್ಟಿಸಿದ್ದಾರೆ.

4 / 5
ಈ ಸಿಡಿಲಬ್ಬರದ ಬ್ಯಾಟಿಂಗ್​​ನೊಂದಿಗೆ ಸ್ಯಾಮ್ ಕೇವಲ 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 65 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​​ಗಳೊಂದಿಗೆ 60 ರನ್ ಬಾರಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ 2ನೇ ಕಿರಿಯ ಬ್ಯಾಟರ್ ಎಂಬ ದಾಖಲೆಯನ್ನು ಸ್ಯಾಮ್ ಕೊನ್​ಸ್ಟಾಸ್ ತಮ್ಮದಾಗಿಸಿಕೊಂಡಿದ್ದಾರೆ.

5 / 5
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ