
ಭಾರತಕ್ಕೆ ಸತತ ಎರಡನೇ ಟಿ20 ವಿಶ್ವಕಪ್ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ಐರ್ಲೆಂಡ್ ಪ್ರವಾಸ ದುಃಸ್ವಪ್ನವಾಗಿ ಕಾಡಿದೆ. ಅತ್ಯಂತ ಅನುಭವಿ ಆಟಗಾರನಾಗಿ ತಂಡದಲ್ಲಿದ್ದ ಸಂಜು ಸ್ಯಾಮ್ಸನ್, ಈ ಸರಣಿಯಲ್ಲಿ ಯಾವ ರೀತಿಯಲ್ಲೂ ಪ್ರಯೋಜನಕ್ಕೆ ಬರಲಿಲ್ಲ. ಈ ಮೂಲಕ ತಂಡದಿಂದ ಹೊರಹೋಗುವ ದಾರಿಯನ್ನು ತಾವೇ ನೋಡಿಕೊಂಡಿದ್ದಾರೆ ಎನ್ನಬಹುದು (PC-PTI).

ಐರ್ಲೆಂಡ್ನ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿ ನಡೆದ ಸರಣಿಯ ಎರಡೂ ಪಂದ್ಯಗಳಲ್ಲೂ ಸಂಜು ಸ್ಯಾಮ್ಸನ್ ಆಟ ಅತ್ಯಂತ ಕಳಪೆಯಾಗಿತ್ತು. ಮೊದಲ ಪಂದ್ಯದಲ್ಲಿ 4 ಎಸೆತಗಳನ್ನು ಎದುರಿಸಿ ಕೇವಲ 5 ರನ್ ಬಾರಿಸಿ ಭಾರತ ಮೂಲದ ಬೌಲರ್ ಜೈ ಮುಂಧ್ರಾಗೆ ವಿಕೆಟ್ ಒಪ್ಪಿಸಿದ್ದ ಸಂಜು, ಎರಡನೇ ಪಂದ್ಯದಲ್ಲೂ ಅವರಿಗೆ ಬಲಿಯಾದರು. ಈ ಪಂದ್ಯದಲ್ಲಿ ಸಂಜುಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ (PC-PTI).

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಅಪಾರ ಅನುಭವವಿರುವ ಸಂಜು, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಈಗಷ್ಟೇ ಕಾಲಿಟ್ಟಿರುವ ಜೈ ಮುಂಧ್ರಾಗೆ ಎರಡು ಪಂದ್ಯಗಳಲ್ಲೂ ಬಲಿಯಾಗಿದ್ದು. ವಾಸ್ತವವಾಗಿ ಐಪಿಎಲ್‌ನಲ್ಲೂ ಸಂಜು ಅವರ ಪ್ರದರ್ಶನ ಸ್ಥಿರವಾಗಿರಲಿಲ್ಲ. ಈ ಸೀಸನ್ನಲ್ಲಿ ಶತಕ ಬಾರಿಸಿದರಾದರೂ ಉಳಿದ ಪಂದ್ಯಗಳಲ್ಲಿ ಅವರ ಆಟ ಅಷ್ಟಕಷ್ಟೆ ಆಗಿತ್ತು (PC-PTI).

ಐರ್ಲೆಂಡ್‌ನಂತಹ ದುರ್ಬಲ ತಂಡದ ವಿರುದ್ಧವೇ ಎಡವಿದ ಸಂಜು ಸ್ಯಾಮ್ಸನ್‌ಗೆ ಟಿ20 ತಂಡದ ಬಾಗಿಲು ಭಾಗಶಃ ಮುಚ್ಚಿದಂತೆ ಕಾಣುತ್ತಿದೆ. ಸಂಜು ಟಿ20 ವಿಶ್ವಕಪ್‌ನಲ್ಲಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಸಲುವಾಗಿ ಅವರನ್ನು ಐರ್ಲೆಂಡ್ ಸರಣಿಯಲ್ಲೂ ಮುಂದುವರೆಸಲಾಯಿತು. ಆದರೆ ಐರ್ಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿರುವ ಸಂಜು ತಂಡದಿಂದ ಹೊರಬೀಳುವ ಸಾಧ್ಯತೆಗಳು ಹೆಚ್ಚಿವೆ (PC-PTI).

ಈ ಐರ್ಲೆಂಡ್ ಪ್ರವಾಸ ಮುಗಿದ ಬಳಿಕ ಟೀಂ ಇಂಡಿಯಾ, ಇಂಗ್ಲೆಂಡ್ಗೆ ತೆರಳಲಿದೆ. ಅಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಆ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ ಸೂರ್ಯವಂಶಿಯನ್ನು ಆಡಿಸುವ ಸಾಧ್ಯತೆಗಳು ಹೆಚ್ಚಿವೆ. ಸಂಜು ವಿಫಲರಾಗಿರುವ ಕಾರಣ, ವೈಭವ್ರನ್ನು ತಂಡಕ್ಕೆ ಆಯ್ಕೆ ಮಾಡುವುದಕ್ಕೂ ಆಯ್ಕೆ ಮಂಡಳಿಗೆ ಹೆಚ್ಚಿನ ಒತ್ತಡವಿರುವುದಿಲ್ಲ (PC-PTI).