ಸತತ ಸೆಂಚುರಿ ಸಿಡಿಸಿದ ಬೆನ್ನಲ್ಲೇ ಸರ್ಫರಾಝ್​ ಖಾನ್​ಗೆ ಬಿಗ್ ಶಾಕ್..!

Updated on: Sep 01, 2025 | 11:53 AM

Sarfaraz Khan: ಸರ್ಫರಾಝ್ ಖಾನ್ ಟೀಮ್ ಇಂಡಿಯಾ ಪರ ಈವರೆಗೆ 6 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 11 ಇನಿಂಗ್ಸ್ ಆಡಿರುವ ಅವರು 1 ಶತಕ ಹಾಗೂ 3 ಅರ್ಧಶತಕಗಳೊಂದಿಗೆ ಒಟ್ಟು 371 ರನ್ ಕಲೆಹಾಕಿದ್ದಾರೆ. ಈ ಭರ್ಜರಿ ಪ್ರದರ್ಶನದ ಹೊರತಾಗಿಯೂ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸರ್ಫರಾಝ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಇದಾಗ್ಯೂ ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದರು.

1 / 5
ಟೀಮ್ ಇಂಡಿಯಾ ಆಟಗಾರ ಸರ್ಫರಾಝ್ ಖಾನ್ (Sarfaraz Khan) ಇತ್ತೀಚೆಗೆ ನಡೆದ ಬುಚ್ಚಿ ಬಾಬು ಟೂರ್ನಿಯಲ್ಲಿ ಮುಂಬೈ ಪರ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಮಿಂಚಿದ್ದರು. ಈ ಶತಕದಬ್ಬರೊಂದಿಗೆ  ದುಲೀಪ್ ಟ್ರೋಫಿಗೆ ಸಜ್ಜಾಗಿದ್ದ ಸರ್ಫರಾಝ್ ಖಾನ್​ಗೆ ಆಘಾತ ಎದುರಾಗಿದೆ.

ಟೀಮ್ ಇಂಡಿಯಾ ಆಟಗಾರ ಸರ್ಫರಾಝ್ ಖಾನ್ (Sarfaraz Khan) ಇತ್ತೀಚೆಗೆ ನಡೆದ ಬುಚ್ಚಿ ಬಾಬು ಟೂರ್ನಿಯಲ್ಲಿ ಮುಂಬೈ ಪರ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಮಿಂಚಿದ್ದರು. ಈ ಶತಕದಬ್ಬರೊಂದಿಗೆ  ದುಲೀಪ್ ಟ್ರೋಫಿಗೆ ಸಜ್ಜಾಗಿದ್ದ ಸರ್ಫರಾಝ್ ಖಾನ್​ಗೆ ಆಘಾತ ಎದುರಾಗಿದೆ.

2 / 5

ದುಲೀಪ್ ಟ್ರೋಫಿ ಟೂರ್ನಿಯ ಸೆಮಿಫೈನಲ್​ನಲ್ಲಿ ಪಶ್ಚಿಮ ವಲಯ ಪರ ಕಣಕ್ಕಿಳಿಯಲು ಸಜ್ಜಾಗಿದ್ದ ಸರ್ಫರಾಝ್ ಖಾನ್ ಗಾಯಗೊಂಡಿದ್ದಾರೆ. ಹೀಗಾಗಿ ಸೆಪ್ಟೆಂಬರ್ 4 ರಿಂದ ಶುರುವಾಗಲಿರುವ ಕೇಂದ್ರ ವಲಯ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸರ್ಫರಾಝ್ ಖಾನ್ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ.

3 / 5

ಇದಕ್ಕೂ ಮುನ್ನ ಸರ್ಫರಾಝ್ ಖಾನ್ ಬುಚ್ಚಿ ಬಾಬು ಟೂರ್ನಿಯಲ್ಲಿ ಸತತ ಶತಕಗಳನ್ನು ಬಾರಿಸಿದ್ದರು. ಆಗಸ್ಟ್ 18 ರಂದು ನಡೆದ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿದ ಸರ್ಫರಾಝ್ ಕೇವಲ 92 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಅಲ್ಲದೆ ಈ ಪಂದ್ಯದಲ್ಲಿ 114 ಎಸೆತಗಳನ್ನು ಎದುರಿಸಿ 6 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 138 ರನ್ ಬಾರಿಸಿದ್ದರು.

4 / 5

ಇದಾದ ಬಳಿಕ ಹರ್ಯಾಣ ವಿರುದ್ಧದ ಪಂದ್ಯದಲ್ಲೂ ಸರ್ಫರಾಝ್ ಖಾನ್ ಮೂರಂಕಿ ಮೊತ್ತ ಗಳಿಸಿದ್ದರು. ಈ ಪಂದ್ಯದಲ್ಲಿಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ ಖಾನ್  100 ಎಸೆತಗಳಲ್ಲಿ ಶತಕ ಪೂರೈಸಿದರು. ಇನ್ನು ಈ ಪಂದ್ಯದಲ್ಲಿ 112 ಎಸೆತಗಳನ್ನು ಎದುರಿಸಿದ ಬಲಗೈ ದಾಂಡಿಗನ ಬ್ಯಾಟ್​ನಿಂದ 9 ಫೋರ್ ಹಾಗೂ 5 ಸಿಕ್ಸ್​ಗಳೊಂದಿಗೆ 111 ರನ್​ಗಳು ಮೂಡಿಬಂದಿದ್ದವು.

5 / 5

ಈ ಎರಡು ಭರ್ಜರಿ ಶತಕಗಳ ಹುಮ್ಮಸ್ಸಿನೊಂದಿಗೆ ಸರ್ಫರಾಝ್ ಖಾನ್ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದರು. ಆದರೀಗ ಗಾಯಗೊಂಡಿರುವ ಅವರು ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಸರ್ಫರಾಝ್ ಖಾನ್ ಮಿಂಚಿದ್ದರೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗುವ ಸಾಧ್ಯತೆಯಿತ್ತು. ಆದರೆ ದುರಾದೃಷ್ಟ ಗಾಯದಿಂದಾಗಿ ಅವರು ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯಲು ಸಾಧ್ಯವಾಗುತ್ತಿಲ್ಲ..!

Loading...
Unable to load recommendations.
Follow Us