ಶರವೇಗದ ಶತಕ ಬಾರಿಸಿ ಮತ್ತೆ ಟೀಂ ಇಂಡಿಯಾದ ಕದ ತಟ್ಟಿದ ಸರ್ಫರಾಜ್ ಖಾನ್

Updated on: Dec 02, 2025 | 5:35 PM

Sarfaraz Khan Century: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸರ್ಫರಾಜ್ ಖಾನ್ ಅಸ್ಸಾಂ ವಿರುದ್ಧ ಭರ್ಜರಿ ಚೊಚ್ಚಲ ಟಿ20 ಶತಕ ಸಿಡಿಸಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ನಿರಂತರ ಉತ್ತಮ ಪ್ರದರ್ಶನ ನೀಡಿದರೂ ಟೀಂ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿರುವ ಸರ್ಫರಾಜ್, ಕೇವಲ 47 ಎಸೆತಗಳಲ್ಲಿ 100 ರನ್ ಗಳಿಸಿದರು. ಈ ಸಾಧನೆಯು ಮುಂಬರುವ ಐಪಿಎಲ್ ಹರಾಜಿನಲ್ಲಿ ಅವರಿಗೆ ಪ್ರಮುಖ ಪಾತ್ರ ವಹಿಸಲಿದ್ದು, ಬಿಳಿ ಚೆಂಡಿನ ಕ್ರಿಕೆಟ್‌ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

1 / 5
ದೇಶೀ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿ ಪದೇ ಪದೇ ಟೀಂ ಇಂಡಿಯಾ ಕದ ತಟ್ಟುತ್ತಿರುವ ಸರ್ಫರಾಜ್ ಖಾನ್​ಗೆ ನಾನಾ ಕಾರಣಗಳಿಂದ ಭಾರತ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ಆದಾಗ್ಯೂ ತಮ್ಮ ಪ್ರಯತ್ನಗಳನ್ನು ಕೈಬಿಡದ ಸರ್ಫರಾಜ್ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

2 / 5
ವಾಸ್ತವವಾಗಿ ಇದು ಸರ್ಫರಾಜ್ ಖಾನ್ ಅವರ ಟಿ20 ವೃತ್ತಿಜೀವನದ ಮೊದಲ ಶತಕವಾಗಿದೆ. ಸರ್ಫರಾಜ್ ಅವರ ಅಬ್ಬರದ ಶತಕದ ನೆರವಿನಿಂದ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಕೇವಲ 4 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಸ್ಸಾಂ ತಂಡ ಕೇವಲ 122 ರನ್​ಗಳಿಗೆ ಆಲೌಟ್ ಆಗಿ 98 ರನ್​ಗಳಿಂದ ಸೋಲೊಪ್ಪಿಕೊಂಡಿತು.

3 / 5
ಅಸ್ಸಾಂ ವಿರುದ್ಧದ ಈ ಪಂದ್ಯದಲ್ಲಿ ಸರ್ಫರಾಜ್ ಖಾನ್ ಕೇವಲ 47 ಎಸೆತಗಳಲ್ಲಿ 100 ರನ್​ಗಳ ಅಜೇಯ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿಗಳು ಮತ್ತು 7 ಅಗಾಧ ಸಿಕ್ಸರ್‌ಗಳು ಸೇರಿದ್ದವು. ಮೇಲೆ ಹೇಳಿದಂತೆ ಕಳೆದ ಎರಡು ವರ್ಷಗಳಿಂದ, ಸರ್ಫರಾಜ್ ದೇಶೀಯ ಕ್ರಿಕೆಟ್‌ನಲ್ಲಿ ರನ್ ಗಳಿಸುತ್ತಿದ್ದಾರೆ. ರಣಜಿ ಟ್ರೋಫಿಯಲ್ಲಿ ಶತಕಗಳ ಮೇಲೆ ಶತಕ ಬಾರಿಸಿದ್ದ ಸರ್ಫರಾಜ್, ಭಾರತದ ಪರ ಚೊಚ್ಚಲ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿದ್ದರು.

4 / 5
ಸರ್ಫರಾಜ್​ಗೆ ಟೀಂ ಇಂಡಿಯಾದಲ್ಲಿ ಸಧ್ಯಕ್ಕೆ ಸ್ಥಾನ ಸಿಗದಿದ್ದರೂ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿನಲ್ಲಿ ಅವರ ಖರೀದಿಯಲ್ಲಿ ಈ ಶತಕ ಪ್ರಮುಖ ಪಾತ್ರವಹಿಸಲಿದೆ. ಕೇವಲ 47 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ, ಸರ್ಫರಾಜ್ ಅವರು ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಬಿಳಿ ಚೆಂಡಿನ ಕ್ರಿಕೆಟ್‌ನಲ್ಲಿಯೂ ಪ್ರಮುಖ ಪಂದ್ಯ ವಿಜೇತರಾಗಬಹುದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

5 / 5
ಪಂದ್ಯದ ಬಗ್ಗೆ ಹೇಳುವುದಾದರೆ.. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 220 ರನ್ ಗಳಿಸಿತು. ಸರ್ಫರಾಜ್ ಖಾನ್ ಜೊತೆಗೆ, ಅಜಿಂಕ್ಯ ರಹಾನೆ ಕೂಡ 42 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಮಧ್ಯೆ, ಸಾಯಿರಾಜ್ ಪಾಟೀಲ್ 9 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ ಕೂಡ 20 ರನ್‌ಗಳ ಕೊಡುಗೆ ನೀಡಿದರೆ, ಆಯುಷ್ ಮ್ಹಾತ್ರೆ 21 ರನ್‌ಗಳ ಕೊಡುಗೆ ನೀಡಿದರು.