- Kannada News Photo gallery Cricket photos Shahid Afridi has said i will request the Indian prime minister Narendra Modi to let cricket happen Kannada News
Shahid Afridi: ನಾನು ಮೋದಿ ಬಳಿ ಭಾರತ-ಪಾಕಿಸ್ತಾನ ಪಂದ್ಯ ನಡೆಸಲು ವಿನಂತಿಸುತ್ತೇನೆ: ಶಾಹಿದ್ ಅಫ್ರಿದಿ
India vs Pakistan: ಭಾರತೀಯ ಕ್ರಿಕೆಟ್ನ ಕೆಲ ಆಟಗಾರರೊಂದಿಗೆ ನನ್ನ ಸ್ನೇಹ ಉತ್ತಮವಾಗಿದೆ. ಸಿಕ್ಕಾಗ ಮಾತನಾಡುತ್ತೇವೆ, ಚರ್ಚಿಸುತ್ತೇವೆ. ಸುರೇಶ್ ರೈನಾ ನನ್ನ ಒಳ್ಳೆಯ ಸ್ನೇಹಿತ. ಇತ್ತೀಚೆಗಷ್ಟೆ ರೈನಾ ಬಳಿ ನಾನು ಬ್ಯಾಟ್ ಕೇಳಿದೆ, ಅವರು ನೀಡಿದರು ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.
Updated on: Mar 21, 2023 | 11:57 AM

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ಭಾರತ-ಪಾಕ್ ನಡುವಣ ಪಂದ್ಯದ ಕುರಿತು ಮಹತ್ವದ ಮಾತುಗಳನ್ನಾಡಿದ್ದಾರೆ. ನಾನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಳಿ ಉಭಯ ತಂಡಗಳ ನಡುವೆ ಕ್ರಿಕೆಟ್ ನಡೆಯುವಂತೆ ಮಾಡಿ ಎಂದು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ದೋಹಾದಲ್ಲಿ ನಡೆದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ವೇಳೆ ಮಾತನಾಡಿದ ಅಫ್ರಿದಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಸಾಕಷ್ಟು ಬಲಿಷ್ಠವಾಗಿದೆ. ಅವರರಿಗೆ ದೊಡ್ಡ ಜವಾಬ್ದಾರಿಯಿದೆ. ಹೀಗಿರುವಾಗ ಎರಡು ದೇಶಗಳ ನಡುವೆ ಕ್ರಿಕೆಟ್ ಆಯೋಜಿಸಿ ಉತ್ತಮ ಸಂಬಂಧ ಬೆಳೆಸಿದರೆ ಒಳ್ಳೆಯದು ಎಂದು ಹೇಳಿದ್ದಾರೆ.

ನೀವು ಹೆಚ್ಚು ಶತ್ರುಗಳನ್ನು ಮಾಡಿಕೊಂಡರೆ ಏನು ಉಪಯೋಗ. ಆದಷ್ಟು ಸ್ನೇಹಿತರನ್ನು ಸಂಪಾದಿಸಬೇಕು. ಸ್ನೇಹಿತರನ್ನಾಗಿ ಮಾಡಿಕೊಂಡರೆ ಬಿಸಿಸಿಐ ಇನ್ನಷ್ಟು ಬಲಶಾಲಿಯಾಗುತ್ತದೆ. ಹಾಗಂತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ದುರ್ಬಲವಾಗಿದೆ ಎಂದು ನಾನು ಹೇಳುವುದಿಲ್ಲ. ಆದರೆ ಮುಂದಿನ ದಿನ ಕೆಲವು ಉತ್ತರ ಬರಬಹುದು: ಶಾಹಿದ್ ಅಫ್ರಿದಿ.

ಭಾರತೀಯ ಕ್ರಿಕೆಟ್ನ ಕೆಲ ಆಟಗಾರರೊಂದಿಗೆ ನನ್ನ ಸ್ನೇಹ ಉತ್ತಮವಾಗಿದೆ. ಸಿಕ್ಕಾಗ ಮಾತನಾಡುತ್ತೇವೆ, ಚರ್ಚಿಸುತ್ತೇವೆ. ಸುರೇಶ್ ರೈನಾ ನನ್ನ ಒಳ್ಳೆಯ ಸ್ನೇಹಿತ. ಇತ್ತೀಚೆಗಷ್ಟೆ ರೈನಾ ಬಳಿ ನಾನು ಬ್ಯಾಟ್ ಕೇಳಿದೆ, ಅವರು ನೀಡಿದರು ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.

ಪಾಕಿಸ್ತಾನದ ಭದ್ರತಾ ಕಾಳಜಿಗೆ ಸಂಬಂಧಿಸಿದಂತೆ, ನಮ್ಮಲ್ಲಿಗೆ ಇತ್ತೀಚೆಗೆ ಅನೇಕ ಅಂತರರಾಷ್ಟ್ರೀಯ ತಂಡಗಳು ಪ್ರಯಾಣಿಸಿವೆ. ನಾವು ಭಾರತದಿಂದ ಭದ್ರತಾ ಬೆದರಿಕೆಗಳನ್ನು ಎದುರಿಸುತ್ತೇವೆ, ಆದರೆ ಎರಡೂ ದೇಶಗಳ ಸರ್ಕಾರದಿಂದ ಅನುಮತಿ ಪಡೆದರೆ ಪ್ರವಾಸ ನಡೆಯುತ್ತದೆ. ಎಂದು ಅಫ್ರಿದಿ ಹೇಳಿದ್ದಾರೆ.

2008ರ ಮುಂಬೈ ದಾಳಿಯ ಬಳಿಕ ಭಾರತ ಮತ್ತು ಪಾಕ್ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯಾಟಗಳು ನಡೆದಿಲ್ಲ. ಕೇವಲ ಬಹು ರಾಷ್ಟ್ರಗಳ ಪಂದಾವಳಿಯಲ್ಲಿ ಮಾತ್ರ ಮುಖಾಮುಖಿ ಆಗುತ್ತಿದೆ. ಅಲ್ಲದೆ ಮುಂಬವರು ಏಷ್ಯಾಕಪ್ ಪಾಕ್ನಲ್ಲಿ ನಡೆದರೆ ಭಾರತ ಪ್ರಯಾಣ ಬೆಳೆಸುವುದಿಲ್ಲ ಎಂದು ಬಿಸಿಸಿಐ ಹೇಳಿದೆ.
