ಅದರಂತೆ ಇನಿಂಗ್ಸ್ ಆರಂಭಿಸಿದ ಸೇಲಂ ಸ್ಪಾರ್ಟನ್ಸ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕರಾದ ವಿಶಾಲ್ ವೈದ್ಯ (36) ಹಾಗೂ ಅಭಿಷೇಕ್ (20) ಉತ್ತಮ ಅಡಿಪಾಯ ಹಾಕಿಕೊಟ್ಟರೆ, ಅಂತಿಮ ಹಂತದಲ್ಲಿ ಕಣಕ್ಕಿಳಿದ ಹರೀಶ್ ಕುಮಾರ್ 19 ಎಸೆತಗಳಲ್ಲಿ 5 ಸಿಕ್ಸ್ನೊಂದಿಗೆ 42 ರನ್ ಚಚ್ಚಿದರು. ಈ ಮೂಲಕ ಸೇಲಂ ಸ್ಪಾರ್ಟನ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.