
ಗುವಾಹಟಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಪರ ನಾಯಕ ಶಾಯ್ ಹೋಪ್ ಭರ್ಜರಿ ಶತಕ ಬಾರಿಸಿದರು. ಇದು ಭಾರತದ ವಿರುದ್ಧ ಹೋಪ್ ಕಲೆಹಾಕಿದ ನಾಲ್ಕನೇ ಏಕದಿನ ಶತವಾಗಿದೆ. 90 ಎಸೆತಗಳಲ್ಲಿ ಶತಕ ಬಾರಿಸಿದ ಹೋಪ್ಗೆ ಏಳು ವರ್ಷಗಳಲ್ಲಿ ಭಾರತದ ವಿರುದ್ಧ ಇದು ಮೊದಲ ಏಕದಿನ ಶತಕವಾಗಿದೆ(PC-PTI).
2019 ರಲ್ಲಿ ಭಾರತದಲ್ಲಿ ಕೊನೆಯ ಬಾರಿಗೆ ಶತಕ ಬಾರಿಸಿದ್ದ ಹೋಪ್ ಇದೀಗ 7 ವರ್ಷಗಳ ಬರ ನೀಗಿಸಿಕೊಂಡಿದ್ದಾರೆ. ಶಾಯ್ ಹೋಪ್ ಅವರ ಈ ಶತಕದ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಪಾತ್ರವೂ ಅಪಾರವಾಗಿದೆ. ಏಕೆಂದರೆ ಶಾಯ್ ಹೋಪ್ ನೀಡಿದ ಕ್ಯಾಚ್ ಅನ್ನು ವಿರಾಟ್ ಕೊಹ್ಲಿ ಕೈಚೆಲ್ಲಿದರು. ಆ ಸಮಯದಲ್ಲಿ ಹೋಪ್ ಅರ್ಧಶತಕವನ್ನು ಬಾರಿಸಿರಲಿಲ್ಲ(PC-PTI).
20ನೇ ಓವರ್ನಲ್ಲಿ ವಿರಾಟ್ ಕೊಹ್ಲಿ, ಹೋಪ್ ನೀಡಿದ ಕ್ಯಾಚ್ ಕೈಚೆಲ್ಲಿದರು. ನಮನ್ ಧೀರ್ ಬೌಲಿಂಗ್ನಲ್ಲಿ ಹೋಪ್ ಲೆಗ್ ಸೈಡ್ನಲ್ಲಿ ಶಾಟ್ ಹೊಡೆದರು. ಆದರೆ ಶಾರ್ಟ್ ಮಿಡ್ ವಿಕೆಟ್ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಸರಳ ಕ್ಯಾಚ್ ಕೈಚೆಲ್ಲಿದರು. ಕೊಹ್ಲಿಗೂ ಮುನ್ನ, ಕುಲ್ದೀಪ್ ಯಾದವ್ ಕೂಡ ಹೋಪ್ಗೆ ಜೀವದಾನ ನೀಡಿದರು. ಈ ಎರಡು ಜೀವದಾನಗಳು ಭಾರತಕ್ಕೆ ಬಲು ದುಬಾರಿಯಾದವು(PC-PTI).
ಮೇಲೆ ಹೇಳಿದಂತೆ ಭಾರತದಲ್ಲಿ ಭಾರತ ತಂಡದ ವಿರುದ್ಧ ಶಾಯ್ ಹೋಪ್ ಬಾರಿಸಿರುವ ನಾಲ್ಕು ಏಕದಿನ ಶತಕ ಇದಾಗಿದೆ. 2018 ರಲ್ಲಿ ಹೋಪ್ ಅಜೇಯ 123 ರನ್ ಬಾರಿಸಿದ್ದರು. ನಂತರ 2019 ರಲ್ಲಿ ಲಕ್ನೋದಲ್ಲಿ ಅಜೇಯ 109 ರನ್ಗಳ ಇನ್ನಿಂಗ್ಸ್ ಆಡಿದ್ದರು. ಬಳಿಕ ಚೆನ್ನೈನಲ್ಲಿ ಅಜೇಯ 102 ರನ್ ಬಾರಿಸಿದ್ದ ಹೋಪ್, ಭಾರತದ ವಿರುದ್ಧ ಏಕದಿನ ಪಂದ್ಯಗಳಲ್ಲಿ 70 ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ(PC-PTI).
ಶಾಯ್ ಹೋಪ್ ಕೇವಲ 151 ಏಕದಿನ ಇನ್ನಿಂಗ್ಸ್‌ಗಳಲ್ಲಿ 20 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್ ಪರ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ. ಲಾರಾ ಏಕದಿನ ಪಂದ್ಯಗಳಲ್ಲಿ 19 ಶತಕಗಳನ್ನು ಗಳಿಸಿದ್ದಾರೆ. ಪ್ರಸ್ತುತ, ಕ್ರಿಸ್ ಗೇಲ್ ಏಕದಿನ ಪಂದ್ಯಗಳಲ್ಲಿ 25 ಶತಕಗಳೊಂದಿಗೆ ವೆಸ್ಟ್ ಇಂಡೀಸ್ ಪರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ(PC-PTI).
Published On - 5:33 pm, Wed, 30 September 26