Shikhar Dhawan Career: ಏಷ್ಯನ್ ಗೇಮ್ಸ್​ಗೂ ಬೇಡವಾದ ಶಿಖರ್ ಧವನ್; ಗಬ್ಬರ್ ಕ್ರಿಕೆಟ್ ಕೆರಿಯರ್ ಅಂತ್ಯ..?

Updated on: Jul 15, 2023 | 12:10 PM

Shikhar Dhawan Career: ಧವನ್​ಗೆ ನಾಯಕತ್ವ ಕುಡುವುದಿರಲಿ ಕನಿಷ್ಠ ಪಕ್ಷ ಅವರಿಗೆ ತಂಡದಲ್ಲಿ ಸ್ಥಾನವನ್ನು ನೀಡಿಲ್ಲ. ಇದರಿಂದ ಟೀಂ ಇಂಡಿಯಾದಲ್ಲಿ ಧವನ್ ಯುg ಮುಗಿಯಿತಾ ಎಂಬ ಪ್ರಶ್ನೆ ಮೂಡಿದೆ.

1 / 9
ಚೀನಾದಲ್ಲಿ ನಡೆಯಲ್ಲಿರುವ ಏಷ್ಯನ್ ಗೇಮ್ಸ್​ಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ಭಾರತ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಆಡಲಿದೆ. ತಂಡದ ನಾಯಕತ್ವವನ್ನು ಯುವ ಬ್ಯಾಟರ್ ರುತುರಾಜ್​ ಗಾಯಕ್ವಾಡ್​ಗೆ ಹಸ್ತಾಂತರಿಸಿದ್ದು, ನಿರೀಕ್ಷೆಯಂತೆ ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಚೀನಾದಲ್ಲಿ ನಡೆಯಲ್ಲಿರುವ ಏಷ್ಯನ್ ಗೇಮ್ಸ್​ಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ಭಾರತ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಆಡಲಿದೆ. ತಂಡದ ನಾಯಕತ್ವವನ್ನು ಯುವ ಬ್ಯಾಟರ್ ರುತುರಾಜ್​ ಗಾಯಕ್ವಾಡ್​ಗೆ ಹಸ್ತಾಂತರಿಸಿದ್ದು, ನಿರೀಕ್ಷೆಯಂತೆ ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

2 / 9

ಆದರೆ ಬಿಸಿಸಿಐ ಪ್ರಕಟಿಸಿರುವ ತಂಡದಲ್ಲಿ ಅಚ್ಚರಿಯೆಂಬಂತೆ ಕಾಣೆಯಾಗಿರುವ ಹೆಸರೆಂದರೆ ಅದು ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್​ರದ್ದು. ಈ ಹಿಂದೆ ಏಷ್ಯನ್ ಗೇಮ್ಸ್​ಗೆ ಧವನ್​ರನ್ನು ತಂಡದಲ್ಲಿ ನಾಯಕನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ವರದಿಯಾಗಿತ್ತು.

3 / 9

ಆದರೆ ಎಲ್ಲಾ ವರದಿಗಳನ್ನು ತಳ್ಳಿ ಹಾಕಿರುವ ಆಯ್ಕೆ ಮಂಡಳಿ, ಧವನ್​ಗೆ ನಾಯಕತ್ವ ಕುಡುವುದಿರಲಿ ಕನಿಷ್ಠ ಪಕ್ಷ ಅವರಿಗೆ ತಂಡದಲ್ಲಿ ಸ್ಥಾನವನ್ನು ನೀಡಿಲ್ಲ. ಇದರಿಂದ ಟೀಂ ಇಂಡಿಯಾದಲ್ಲಿ ಧವನ್ ಯುಗ ಮುಗಿಯಿತಾ ಎಂಬ ಪ್ರಶ್ನೆ ಮೂಡಿದೆ.

4 / 9

ವಾಸ್ತವವಾಗಿ ತಂಡದ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ತಂಡವನ್ನು ಇತರ ಸರಣಿಗಳಿಗೆ ಆಯ್ಕೆ ಮಾಡಿದಾಗ ಶಿಖರ್ ಧವನ್ ಅವರನ್ನು ತಂಡದ ನಾಯಕನಾಗಿ ಆಯ್ಕೆ ಮಾಡುವುದು ಖಾಯಂ ಆಗಿತ್ತು. ಧವನ್ ಕೂಡ ನೀಡಿದ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಹೀಗಾಗಿ ಏಷ್ಯನ್​ಗೇಮ್ಸ್​ನಲ್ಲೂ ಧವನ್ ತಂಡವನ್ನು ಮುನ್ನಡೆಸಲ್ಲಿದ್ದಾರೆ ಎಂಬ ಕೂಗು ಕೇಳಲಾರಂಭಿಸಿತ್ತು.

5 / 9

ಆದರೆ ಧವನ್​ರನ್ನು ಕಡೆಗಣಿಸಿರುವ ಆಯ್ಕೆ ಮಂಡಳಿ ಧವನ್ ವೃತ್ತಿ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಆದರೆ ಧವನ್ ಆಯ್ಕೆಯಾಗದಿರುವುದಕ್ಕೆ ನಾನಾ ಆಯಾಮಗಳು ಸಿಗುತ್ತಿದ್ದು, ವಿಶ್ವಕಪ್​ ದೃಷ್ಟಿಯಿಂದ ಧವನ್​ಗೆ ವಿಶ್ರಾಂತಿ ನೀಡಲಾಗಿದೆ ಎಂಬ ಮಾತು ಕೇಳಿ ಬಂದಿದೆ.

6 / 9

ಅಂದರೆ ಧವನ್​ರನ್ನು ವಿಶ್ವಕಪ್​ಗೆ ಬ್ಯಾಕ್ ಅಪ್ ಆರಂಭಿಕನಾಗಿ ತಂಡಕ್ಕೆ ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ ಎಂಬ ಮಾತು ಕೇಳಿಬಂದಿದೆ. ರೋಹಿತ್ ಜೊತೆ ಗಿಲ್ ಆರಂಭಿಕನಾಗಿ ಕಣಕ್ಕಿಳಿಯುವುದು ಖಚಿತ. ಆದರೆ ಅನುಭವಕ್ಕೆ ಬಿಸಿಸಿಐ ಹೆಚ್ಚು ಒತ್ತು ನೀಡಿದರೆ, ಈ ಇಬ್ಬರ ಜೊತೆ ಧವನ್ ಕೂಡ ಆರಂಭಿಕ ಆಯ್ಕೆಯಾಗುವ ಸಾಧ್ಯತೆಗಳಿವೆ.

7 / 9

ಆದರೆ ಏಷ್ಯನ್ ಗೇಮ್ಸ್​ಗೂ ಧವನ್​ರನ್ನು ತಂಡಕ್ಕೆ ಆಯ್ಕೆ ಮಾಡದಿರುವುದು ಇನ್ನೊಂದು ಆಯಾಮವನ್ನು ತೆರೆದಿಡುತ್ತಿದೆ. ಅಂದರೆ, ಆಯ್ಕೆಗಾರರು ಬಹುಶಃ ಧವನ್‌ಗೆ ಅವರ ವೃತ್ತಿಜೀವನ ಮುಗಿದಿದೆ ಎಂಬುದನ್ನು ಸೂಚಿಸುತ್ತಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

8 / 9

ಟೀಂ ಇಂಡಿಯಾ ಪರ ತನ್ನ ಕೊನೆಯ ಪಂದ್ಯವನ್ನು 10 ಡಿಸೆಂಬರ್ 2022 ರಂದು ಆಡಿದ ಧವನ್, ಅಂದಿನಿಂದ ತಂಡದಿಂದ ಹೊರಗುಳಿದಿದ್ದಾರೆ. ಧವನ್ ಬಗ್ಗೆ ಆಯ್ಕೆಗಾರರು ಏನು ಯೋಚಿಸುತ್ತಿದ್ದಾರೆ ಎಂಬುದು ಏಕದಿನ ವಿಶ್ವಕಪ್ ತಂಡ ಪ್ರಕಟವಾದಾಗಲೇ ಗೊತ್ತಾಗಲಿದೆ.

9 / 9

ಒಂದು ವೇಳೆ ತಂಡದಲ್ಲಿ ಧವನ್ ಹೆಸರು ಕಾಣಿಸಿಕೊಂಡರೆ ಅವರ ವೃತ್ತಿಜೀವನ ಮುಂದುವರೆಯಲಿದೆ. ಒಂದು ವೇಳೆ ಹೆಸರು ಕಾಣಿಸದಿದ್ದರೆ ಧವನ್‌ಗೆ ಹೆಚ್ಚಿನ ಅವಕಾಶ ನೀಡುವ ಮನಸ್ಥಿತಿಯಲ್ಲಿ ಆಯ್ಕೆದಾರರು ಇಲ್ಲ ಎಂಬುದು ದೃಢಪಟ್ಟಿದೆ.

Published On - 12:09 pm, Sat, 15 July 23

Loading...
Unable to load recommendations.
Follow Us