Shikhar Dhawan: ಟೆಸ್ಟ್ ತಂಡದಲ್ಲಿ ಚಾನ್ಸ್ ಕೊಡಲ್ಲ, ಮತ್ತೇಕೆ ನಾ ರಣಜಿ ಕ್ರಿಕೆಟ್ ಆಡಲಿ: ಶಿಖರ್ ಧವನ್

Edited By:

Updated on: Mar 02, 2023 | 1:53 PM

Shikhar Dhawan: ಟೀಮ್ ಇಂಡಿಯಾ ಪರ 34 ಟೆಸ್ಟ್ ಪಂದ್ಯಗಳನ್ನಾಡಿರುವ ಶಿಖರ್ ಧವನ್ 7 ಶತಕ ಹಾಗೂ 5 ಅರ್ಧಶತಕದೊಂದಿಗೆ 2315 ರನ್​ ಕಲೆಹಾಕಿದ್ದಾರೆ.

1 / 7
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಆರಂಭಿಕರ ವೈಫಲ್ಯದಿಂದ ಚಿಂತೆಗೀಡಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ 3ನೇ ಟೆಸ್ಟ್​ನಲ್ಲಿ ಶುಭ್​ಮನ್ ಗಿಲ್​ಗೆ ಅವಕಾಶ ನೀಡಲಾಯಿತು. ಆದರೆ ಗಿಲ್ ಅವರಿಂದ ಕೂಡ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ.

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಆರಂಭಿಕರ ವೈಫಲ್ಯದಿಂದ ಚಿಂತೆಗೀಡಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ 3ನೇ ಟೆಸ್ಟ್​ನಲ್ಲಿ ಶುಭ್​ಮನ್ ಗಿಲ್​ಗೆ ಅವಕಾಶ ನೀಡಲಾಯಿತು. ಆದರೆ ಗಿಲ್ ಅವರಿಂದ ಕೂಡ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ.

2 / 7

ಇತ್ತ ಟೀಮ್ ಇಂಡಿಯಾ ಆರಂಭಿಕರ ವೈಫಲ್ಯಗಳ ನಡುವೆ ಅನುಭವಿ ಆಟಗಾರರಿಗೆ ಮಣೆಹಾಕಬೇಕೆಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಈ ಅಭಿಪ್ರಾಯಗಳ ನಡುವೆ ಶಿಖರ್ ಧವನ್ ಹೆಸರು ಕೂಡ ಕೇಳಿ ಬಂದಿದೆ. ಆದರೆ ಧವನ್ ಮಾತ್ರ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಭರವಸೆಯನ್ನೇ ಹೊಂದಿಲ್ಲ.

3 / 7

ಹೌದು, ಶಿಖರ್ ಧವನ್ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದು 5 ವರ್ಷಗಳೇ ಕಳೆದಿವೆ. ಅವರು ಕೊನೆಯ ಬಾರಿ ಟೀಮ್ ಇಂಡಿಯಾ ಪರ ಟೆಸ್ಟ್ ಆಡಿದ್ದು 2018 ರಲ್ಲಿ. ಇದಾದ ಬಳಿಕ ಎಡಗೈ ದಾಂಡಿಗನನ್ನು ದೀರ್ಘಾವಧಿ ಕ್ರಿಕೆಟ್​ಗೆ ಆಯ್ಕೆ ಮಾಡಿಲ್ಲ. ಇದೇ ಕಾರಣದಿಂದಾಗಿ ಇದೀಗ ರಣಜಿ ಕ್ರಿಕೆಟ್ ಆಡುವುದನ್ನು ಕೂಡ ಶಿಖರ್ ಧವನ್ ಬಿಟ್ಟಿದ್ದಾರೆ.

4 / 7

ಈ ಬಗ್ಗೆ ಮಾತನಾಡಿರುವ ಶಿಖರ್ ಧವನ್, ನನ್ನ ಟೆಸ್ಟ್ ವೃತ್ತಿಜೀವನ ಮುಗಿದಿದೆ ಎಂಬುದು ನನಗೆ ತಿಳಿದಿದೆ. ಕಳೆದ 2-3 ವರ್ಷಗಳಿಂದ ನಾನು ಟೆಸ್ಟ್ ತಂಡದ ಭಾಗವಾಗಿಲ್ಲ. ಇದಕ್ಕೆ ವಯಸ್ಸು ಕೂಡ ಕಾರಣ ಇರಬಹುದು. ಪ್ರತಿಯೊಬ್ಬ ಕ್ರಿಕೆಟಿಗನ ಜೀವನವೂ ವಿಭಿನ್ನವಾಗಿರುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಯುವಕರಿಗೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ನಾನು ಸಹ ರೆಡ್ ಬಾಲ್ ಕ್ರಿಕೆಟ್​ನಿಂದ ದೂರ ಉಳಿದಿದ್ದೇನೆ ಎಂದು ಧವನ್ ತಿಳಿಸಿದ್ದಾರೆ.

5 / 7

ನಮಗೆ ತಂಡದಲ್ಲಿ ಅವಕಾಶ ಸಿಗುವುದಿಲ್ಲ ಎಂದು ಗೊತ್ತಾದ ಮೇಲೆ ನಾನು ರಣಜಿ ಟೂರ್ನಿಯನ್ನು ಏಕೆ ಆಡಬೇಕು ಹೇಳಿ. ಅದೇ ಸಮಯದಲ್ಲಿ ವಿಶ್ರಾಂತಿ ಪಡೆಯಬಹುದಲ್ಲವೇ. ಹೀಗಾಗಿ ನಾನು ದೇಶೀಯ ಏಕದಿನ ಮತ್ತು ಟಿ20 ಕ್ರಿಕೆಟ್‌ಗಳನ್ನು ಆಡಿದ್ದೇನೆ ಎಂದು ಧವನ್ ತಿಳಿಸಿದ್ದಾರೆ. ಈ ಮೂಲಕ ರಣಜಿ ಟೂರ್ನಿಯಿಂದ ಹೊರಗುಳಿಯುತ್ತಿರುವುದಕ್ಕೆ ಗಬ್ಬರ್ ಸ್ಪಷ್ಟ ಕಾರಣ ನೀಡಿದ್ದಾರೆ.

6 / 7

ಟೀಮ್ ಇಂಡಿಯಾ ಪರ 34 ಟೆಸ್ಟ್ ಪಂದ್ಯಗಳನ್ನಾಡಿರುವ ಶಿಖರ್ ಧವನ್ 7 ಶತಕ ಹಾಗೂ 5 ಅರ್ಧಶತಕದೊಂದಿಗೆ 2315 ರನ್​ ಕಲೆಹಾಕಿದ್ದಾರೆ. ಅಂದರೆ ಧವನ್ ಟೆಸ್ಟ್​ ಕ್ರಿಕೆಟ್​ನಲ್ಲಿ 40.61 ಸರಾಸರಿಯಲ್ಲಿ ರನ್​ಗಳಿಸಿದ್ದರು. ಇದು ಪ್ರಸ್ತುತ ತಂಡದಲ್ಲಿರುವ ಕೆಲ ಆಟಗಾರರ ರನ್ ಸರಾಸರಿಗಿಂತ ಹೆಚ್ಚು ಎಂಬುದು ವಿಶೇಷ.

7 / 7

ಇದಾಗ್ಯೂ ಶಿಖರ್ ಧವನ್ ಅವರನ್ನು ಕಳೆದ 5 ವರ್ಷಗಳಿಂದ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿಲ್ಲ. ಇದೇ ಕಾರಣದಿಂದಾಗಿ ಇದೀಗ ರಣಜಿ ಟೂರ್ನಿಯಿಂದ ಧವನ್ ಹಿಂದೆ ಸರಿದಿದ್ದಾರೆ. ಅಲ್ಲದೆ ಏಕದಿನ ಹಾಗೂ ಟಿ20 ಕ್ರಿಕೆಟ್​ನತ್ತ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ.

Loading...
Unable to load recommendations.
Follow Us