IND vs ENG: ಟೀಮ್ ಇಂಡಿಯಾ ವಿರುದ್ಧ 20 ವರ್ಷದ ಯುವ ಸ್ಪಿನ್ನರ್ ಕಣಕ್ಕೆ

Edited By:

Updated on: Feb 01, 2024 | 3:14 PM

India vs England 2nd Test: ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ನಾಳೆಯಿಂದ (ಫೆ.2) ಶುರುವಾಗಲಿದೆ. ವಿಶಾಖಪಟ್ಟಣಂನಲ್ಲಿನ ವೈಎಸ್​ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಇಂಗ್ಲೆಂಡ್ ತಂಡದ ಯುವ ಸ್ಪಿನ್ನರ್ ಶೊಯೆಬ್ ಬಶೀರ್ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಲಿದ್ದಾರೆ.

1 / 7
India vs England 2nd Test: ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತನ್ನ ಪ್ಲೇಯಿಂಗ್ ಇಲೆವೆನ್​ನ್ನು ಘೋಷಿಸಿದೆ. ಈ ಆಡುವ ಬಳಗದಲ್ಲಿ 20 ವರ್ಷದ ಶೊಯೆಬ್ ಬಶೀರ್ (Shoaib Bashir) ಸ್ಥಾನ ಪಡೆದಿದ್ದಾರೆ. ವಿಶೇಷ ಎಂದರೆ ಇದು ಶೊಯೆಬ್​ಗೆ ಚೊಚ್ಚಲ ಟೆಸ್ಟ್ ಪಂದ್ಯ.

India vs England 2nd Test: ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತನ್ನ ಪ್ಲೇಯಿಂಗ್ ಇಲೆವೆನ್​ನ್ನು ಘೋಷಿಸಿದೆ. ಈ ಆಡುವ ಬಳಗದಲ್ಲಿ 20 ವರ್ಷದ ಶೊಯೆಬ್ ಬಶೀರ್ (Shoaib Bashir) ಸ್ಥಾನ ಪಡೆದಿದ್ದಾರೆ. ವಿಶೇಷ ಎಂದರೆ ಇದು ಶೊಯೆಬ್​ಗೆ ಚೊಚ್ಚಲ ಟೆಸ್ಟ್ ಪಂದ್ಯ.

2 / 7

ಅದರಂತೆ ವಿಶಾಖಪಟ್ಟಣಂನ ವೈಎಸ್​ ರಾಜಶೇಖರ ರೆಡ್ಡಿ ಮೈದಾನದಲ್ಲಿ ನಡೆಯಲಿರುವ ಟೀಮ್ ಇಂಡಿಯಾ ವಿರುದ್ಧದ ಪಂದ್ಯದ ಮೂಲಕ ಶೊಯೆಬ್ ಬಶೀರ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಲಿದ್ದಾರೆ.

3 / 7

ಬಲಗೈ ಆಫ್ ಬ್ರೇಕ್ ಸ್ಪಿನ್ನರ್ ಆಗಿರುವ ಶೊಯೆಬ್ ಬಶೀರ್ ಇದುವರೆಗೆ ಕೇವಲ 6 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 10 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಬಶೀರ್ ಪಡೆದಿರುವುದು ಕೇವಲ 10 ವಿಕೆಟ್​ಗಳು ಮಾತ್ರ.

4 / 7

ಇನ್ನು ಲೀಸ್ಟ್​ ಎ ಕ್ರಿಕೆಟ್​ನಲ್ಲಿ 7 ಪಂದ್ಯಗಳನ್ನಾಡಿರುವ ಶೊಯೆಬ್ ಬಶೀರ್ 3 ವಿಕೆಟ್​ಗಳನ್ನು ಕಬಳಿಸಲಷ್ಟೇ ಯಶಸ್ವಿಯಾಗಿದ್ದಾರೆ. ಹಾಗೆಯೇ 5 ಟಿ20 ಪಂದ್ಯಗಳಿಂದ ಕೇವಲ 4 ವಿಕೆಟ್ ಮಾತ್ರ ಪಡೆದಿದ್ದಾರೆ. ಅಂದರೆ ಶೊಯೆಬ್ ಬಶೀರ್ ಅವರ ಖಾತೆಯಲ್ಲಿರುವ ಒಟ್ಟು ವಿಕೆಟ್​ಗಳ ಸಂಖ್ಯೆ ಕೇವಲ 17.

5 / 7

ಇದಾಗ್ಯೂ ಭಾರತದಂತಹ ಬಲಿಷ್ಠ ತಂಡದ ವಿರುದ್ಧ ಶೊಯೆಬ್​ಗೆ ಅವಕಾಶ ಸಿಗಲು ಮುಖ್ಯ ಕಾರಣ ಜ್ಯಾಕ್ ಲೀಚ್. ಇಂಗ್ಲೆಂಡ್ ತಂಡದ ಅನುಭವಿ ಸ್ಪಿನ್ನರ್ ಲೀಚ್ ಮೊಣಕಾಲಿನ ಗಾಯದ ಕಾರಣ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಇತ್ತ ವಿಶಾಖಪಟ್ಟಣಂ ಮೈದಾವು ಸ್ಪಿನ್ ಬೌಲರ್​ಗಳಿಗೆ ಸಹಕಾರಿ. ಹೀಗಾಗಿ ತಂಡದಲ್ಲಿರುವ ಏಕೈಕ ಸ್ಪಿನ್ನರ್ ಶೊಯೆಬ್ ಬಶೀರ್ ಅವರನ್ನು ಕಣಕ್ಕಿಳಿಸಲು ಇಂಗ್ಲೆಂಡ್ ನಿರ್ಧರಿಸಿದೆ.

6 / 7

ಅದರಂತೆ ಟೀಮ್ ಇಂಡಿಯಾ ವಿರುದ್ಧದ ಪಂದ್ಯದ ಮೂಲಕ ವೃತ್ತಿಜೀವನ ಆರಂಭಿಸಲು ಸಜ್ಜಾಗಿರುವ ಶೊಯೆಬ್ ಬಶೀರ್ ತನ್ನ ಚೊಚ್ಚಲ ಪಂದ್ಯದಲ್ಲಿ ಹೇಗೆ ಮೋಡಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

7 / 7

ದ್ವಿತೀಯ ಟೆಸ್ಟ್​ಗೆ ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲೀ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಶೊಯೆಬ್ ಬಶೀರ್.

Published On - 3:14 pm, Thu, 1 February 24

Loading...
Unable to load recommendations.
Follow Us