ಮುಂದಿನ ಸೀಸನ್ ಐಪಿಎಲ್ಗಾಗಿ 5 ತಂಡಗಳು ಹೊಸ ನಾಯಕನ ಹುಡುಕಾಟದಲ್ಲಿದೆ. ಪ್ರಸ್ತುತ ಮೆಗಾ ಹರಾಜಿನಲ್ಲಿ ಅನೇಕ ಸ್ಟಾರ್ ಆಟಗಾರರಿದ್ದಾರೆ. ಅದರಲ್ಲೂ ಈ ಹಿಂದೆ ಐಪಿಎಲ್ ತಂಡವನ್ನು ಮುನ್ನಡೆಸಿದ ಆಟಗಾರರು ಕೂಡ ಈ ಪಟ್ಟಿಯಲ್ಲಿದ್ದಾರೆ. ಹೀಗಾಗಿ ಇವರಲ್ಲಿ ಒಬ್ಬರನ್ನು ನಾಯಕನಾಗಿ ಆರ್ಸಿಬಿ, ಕೆಕೆಆರ್, ಪಂಜಾಬ್ ಕಿಂಗ್ಸ್, ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ಆಯ್ಕೆ ಮಾಡಬಹುದು.