- Kannada News Photo gallery Cricket photos Shubman Gill breaks Sachin Tendulkar's record kannada news zp
Shubman Gill: ಸಚಿನ್, ದ್ರಾವಿಡ್ ದಾಖಲೆ ಮುರಿದ ಶುಭ್ಮನ್ ಗಿಲ್
Shubman Gill: ಪ್ರಸ್ತುತ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಗಿಲ್, 2ನೇ ಪಂದ್ಯದಲ್ಲಿ ಅಜೇಯ 45 ರನ್ ಗಳಿಸಿದ್ದರು.
Updated on: Nov 27, 2022 | 8:32 PM

ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಕಳೆದ ಕೆಲವು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಅದೇ ಫಾರ್ಮ್ ಮುಂದುವರೆಸಿರುವ ಗಿಲ್ ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿರುವುದು ವಿಶೇಷ.

ಪ್ರಸ್ತುತ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಗಿಲ್, 2ನೇ ಪಂದ್ಯದಲ್ಲಿ ಅಜೇಯ 45 ರನ್ ಗಳಿಸಿದ್ದರು. ಇದರೊಂದಿಗೆ ಆರಂಭಿಕನಾಗಿ ಟೀಮ್ ಇಂಡಿಯಾ ಪರ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಭಾರತದ ಪರ ಆರಂಭಿಕರಾಗಿ ಮೊದಲ ಇನಿಂಗ್ಸ್ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆಗಳು ಈ ಹಿಂದೆ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಹೆಸರಿನಲ್ಲಿತ್ತು. ಆದರೀಗ ಈ ಇಬ್ಬರು ದಿಗ್ಗಜರನ್ನು ಶುಭ್ಮನ್ ಗಿಲ್ ಹಿಂದಿಕ್ಕಿದ್ದಾರೆ.

ಸಚಿನ್ ತೆಂಡೂಲ್ಕರ್ ಆರಂಭಿಕನಾಗಿ ಮೊದಲ ಇನಿಂಗ್ಸ್ಗಳಲ್ಲಿ 478 ರನ್ ಕಲೆಹಾಕುವ ಮೂಲಕ ಟೀಮ್ ಇಂಡಿಯಾ ಪರ ವಿಶೇಷ ದಾಖಲೆ ಬರೆದಿದ್ದರು.

ಹಾಗೆಯೇ ರಾಹುಲ್ ದ್ರಾವಿಡ್ ಆರಂಭಿಕರಾಗಿ ಕಣಕ್ಕಿಳಿದ ಮೊದಲ 10 ಇನಿಂಗ್ಸ್ಗಳಲ್ಲಿ ಒಟ್ಟು 463 ರನ್ ಬಾರಿಸಿ ಮಿಂಚಿದ್ದರು.

ಇದೀಗ ಶುಭ್ಮನ್ ಗಿಲ್ ಓಪನರ್ ಅಗಿ ತಮ್ಮ ಮೊದಲ 10 ಇನಿಂಗ್ಸ್ಗಳಲ್ಲಿ ಬರೋಬ್ಬರಿ 495 ರನ್ ಕಲೆಹಾಕಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದಿದ್ದಾರೆ.

2019 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದೊಂದಿಗೆ ಏಕದಿನ ವೃತ್ತಿಜೀವನವನ್ನು ಪ್ರಾರಂಭಿಸಿರುವ ಶುಭಮನ್, ಇದುವರೆಗೆ ಒಟ್ಟು 14 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 61.27 ಸರಾಸರಿಯಲ್ಲಿ ಈ ಒಟ್ಟು 674 ರನ್ ಗಳಿಸಿದ್ದಾರೆ. ಅದರಲ್ಲಿ ಆರಂಭಿಕನಾಗಿ 495 ರನ್ಗಳನ್ನು ಕಲೆಹಾಕಿರುವುದು ಮೂಡಿಬಂದಿರುವುದು ವಿಶೇಷ. ಇದುವೇ ಈಗ ಟೀಮ್ ಇಂಡಿಯಾ ಪರ ಹೊಸ ದಾಖಲೆಯಾಗಿ ಮಾರ್ಪಟ್ಟಿರುವುದು ಮತ್ತೊಂದು ವಿಶೇಷ.
