IND vs SL: ಟೆಸ್ಟ್ ಸರಣಿಯಲ್ಲಿ ಶುಭ್​ಮನ್ ಗಿಲ್ ನಿರ್ಮಿಸಲಿರುವ ದಾಖಲೆಗಳಿವು

Updated on: Aug 13, 2026 | 10:53 PM

Shubman Gill WTC records: ಆಗಸ್ಟ್ 15 ರಂದು ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ನಾಯಕ ಶುಭ್​ಮನ್ ಗಿಲ್ ಹಲವು ಐತಿಹಾಸಿಕ ದಾಖಲೆಗಳನ್ನು ಬರೆಯಲು ಸಿದ್ಧರಾಗಿದ್ದಾರೆ. ಅವರು WTC ಯಲ್ಲಿ 3000 ರನ್ ಪೂರ್ಣಗೊಳಿಸುವ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಆಗುವ ಅವಕಾಶ ಹೊಂದಿದ್ದಾರೆ. ಜೊತೆಗೆ, ಒಂದೇ WTC ಆವೃತ್ತಿಯಲ್ಲಿ ನಾಯಕನಾಗಿ 1000 ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಗಿಲ್ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯಲಿದ್ದಾರೆ.

1 / 5
ಆಗಸ್ಟ್ 15 ರಂದು ಗಾಲೆಯಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ನಾಯಕ ಶುಭ್​ಮನ್ ಗಿಲ್ ಹಲವು ದಾಖಲೆಗಳನ್ನು ಸೃಷ್ಟಿಸುವ ಅವಕಾಶ ಹೊಂದಿದ್ದಾರೆ. ಇದುವರೆಗೆ ಯಾವುದೇ ಭಾರತೀಯ ನಾಯಕನಿಗೆ ಮಾಡಲು ಸಾಧ್ಯವಾಗದ ದಾಖಲೆಯನ್ನು ಗಿಲ್ ಸೃಷ್ಟಿಸಬಹುದು. ಇದರ ಜೊತೆಗೆ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕುವ ಅವಕಾಶ ಗಿಲ್​ಗಿದೆ(PC-PTI).

2 / 5
ಗಿಲ್ ಇದುವರೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 40 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು 43.07 ಸರಾಸರಿಯಲ್ಲಿ 2843 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕಗಳು ಮತ್ತು 8 ಅರ್ಧಶತಕಗಳು ಸೇರಿವೆ. ಇದೀಗ ಶ್ರೀಲಂಕಾ ವಿರುದ್ಧದ ಎರಡೂ ಪಂದ್ಯಗಳಲ್ಲಿ ಗಿಲ್ 157 ರನ್ ಗಳಿಸಿದರೆ WTC ಇತಿಹಾಸದಲ್ಲಿ 3000 ರನ್‌ಗಳನ್ನು ಪೂರ್ಣಗೊಳಿಸುತ್ತಾರೆ(PC-PTI).

3 / 5
 ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆನಿಸಿಕೊಂಡಿರುವ ಗಿಲ್ 3000 ರನ್‌ಗಳನ್ನು ಪೂರ್ಣಗೊಳಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 3000 ರನ್ ಪೂರ್ಣಗೊಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ(PC-PTI).

4 / 5
ಗಿಲ್ ಪ್ರಸ್ತುತ ಡಬ್ಲ್ಯೂಟಿಸಿಯಲ್ಲಿ (2025-2027) 950 ರನ್ ಗಳಿಸಿದ್ದಾರೆ. ಅವರು ಇನ್ನೂ 40 ರನ್ ಗಳಿಸಿದರೆ, ಒಂದೇ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ನಾಯಕನಾಗಿ 1,000 ರನ್ ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಕೊಹ್ಲಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, 2019-2021ರ ಮೊದಲ ಸೈಕಲ್‌ನಲ್ಲಿ ಕೊಹ್ಲಿ 934 ರನ್ ಕಲೆಹಾಕಿದ್ದರು. ಇದೀಗ ಗಿಲ್​ಗೆ 1000 ರನ್​ಗಳ ಗಡಿ ದಾಟುವ ಅವಕಾಶವಿದೆ(PC-PTI).

5 / 5
ಡಬ್ಲ್ಯೂಟಿಸಿ ವಿಷಯದಲ್ಲಿ ಶ್ರೀಲಂಕಾ ಪ್ರವಾಸವು ಟೀಮ್ ಇಂಡಿಯಾಕ್ಕೆ ನಿರ್ಣಾಯಕವಾಗಲಿದೆ. ನಡೆಯುತ್ತಿರುವ ಡಬ್ಲ್ಯೂಟಿಸಿಯಲ್ಲಿ ಭಾರತ ಒಟ್ಟು ಒಂಬತ್ತು ಪಂದ್ಯಗಳನ್ನು ಆಡಲಿದೆ. ಗಿಲ್ ನಾಯಕತ್ವದ ತಂಡವು ಫೈನಲ್‌ಗೆ ಸ್ಥಾನ ಪಡೆಯಲು ಬಯಸಿದರೆ, ಕನಿಷ್ಠ ಎಂಟು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಅಂತಹ ಸನ್ನಿವೇಶದಲ್ಲಿ, ಟೀಂ ಇಂಡಿಯಾ ಸರಣಿಯನ್ನು ಗೆಲ್ಲುವ ಮೂಲಕ ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡುವ ಇರಾದೆಯಲ್ಲಿದೆ(PC-PTI).

Loading...
Unable to load recommendations.
Follow Us