
ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯ ಇಂದು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾಕ್ಕೆ ಉಪನಾಯಕಿ ಸ್ಮೃತಿ ಮಂಧಾನ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ (PC-BCCI Women x).

ಈ ಪಂದ್ಯದಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಯಾಸ್ತಿಕಾ ಭಾಟಿಯಾ ಅವರ ಇನ್ನಿಂಗ್ಸ್ ಕೂಡ 12 ರನ್ಗಳಿಗೆ ಅಂತ್ಯವಾಯಿತು. ಜೆಮಿಮಾ ಕೂಡ 35 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು (PC-BCCI Women x).

ಈ ಆಘಾತಗಳ ನಡುವೆ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿದ ಸ್ಮೃತಿ ಅರ್ಧಶತಕ ದಾಖಲಿಸುವ ಮೂಲಕ ತಂಡವನ್ನು 100 ರನ್ಗಳ ಗಡಿ ದಾಟಿಸಿದರು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಇದು ಸ್ಮೃತಿ ಮಂಧಾನ ಅವರಿಗೆ ಐತಿಹಾಸಿಕ ಪಂದ್ಯವಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಮೃತಿಗೆ ಇದು 300ನೇ ಪಂದ್ಯವಾಗಿದ್ದು, ಈ ವಿಶೇಷ ಪಂದ್ಯದಲ್ಲಿ ಸ್ಮೃತಿ ಅವರ ಬ್ಯಾಟ್ನಿಂದ ಅತಿ ವೇಗದ ಟೆಸ್ಟ್ ಅರ್ಧಶತಕ ಮೂಡಿ ಬಂದಿದೆ (PC-BCCI Women x).

ತಂಡವನ್ನು ಸಂಕಷ್ಟದಿಂದ ಪಾರು ಮಾಡುವುದರ ಜೊತೆಗೆ ಸ್ಮೃತಿ ಕೇವಲ 50 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಇದರೊಂದಿಗೆ, ಲಾರ್ಡ್ಸ್‌ನಲ್ಲಿ ಟೆಸ್ಟ್ ಅರ್ಧಶತಕ ಗಳಿಸಿದ ವಿಶ್ವದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಹಿಳಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಮೂರನೇ ವೇಗದ ಅರ್ಧಶತಕ ಇದಾಗಿರುವುದರಿಂದ ಮಂಧಾನ ಅವರ ಇನ್ನಿಂಗ್ಸ್ ಕೂಡ ವಿಶೇಷವಾಗಿದೆ (PC-BCCI Women x).

ಮಂಧಾನ ಈ ಹಿಂದೆ 2021 ರಲ್ಲಿ ಕ್ಯಾನ್ಬೆರಾದಲ್ಲಿ ಆಸ್ಟ್ರೇಲಿಯಾ ವಿರುದ್ಧ 51 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು, ಆದರೆ ಲಾರ್ಡ್ಸ್‌ನಲ್ಲಿ ಅವರು ಆಡಿದ ಈ ಇನ್ನಿಂಗ್ಸ್ ಈಗ ಅವರ ಟೆಸ್ಟ್ ವೃತ್ತಿಜೀವನದ ಅತ್ಯಂತ ವೇಗದ ಅರ್ಧಶತಕವಾಗಿದೆ (PC-BCCI Women x).

ಇದು ಸ್ಮೃತಿ ಮಂಧಾನ ಅವರ 9 ನೇ ಟೆಸ್ಟ್ ಪಂದ್ಯ. ಅವರು ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 4 ಅರ್ಧಶತಕಗಳು ಮತ್ತು 2 ಶತಕಗಳನ್ನು ಸಿಡಿಸಿದ್ದಾರೆ. ಈ ಅರ್ಧಶತಕಗಳಲ್ಲಿ ಮೂರು ಇಂಗ್ಲೆಂಡ್ ವಿರುದ್ಧವೇ ಬಂದಿವೆ. ಆದಾಗ್ಯೂ, ಅವರು ಈ ತಂಡದ ವಿರುದ್ಧ ಇನ್ನೂ ಟೆಸ್ಟ್ ಶತಕ ಗಳಿಸಿಲ್ಲ. ಆದ್ದರಿಂದ, ಸ್ಮೃತಿ ಮಂಧಾನ ಅವರಿಗೆ ಈ ಬಾರಿ ಶತಕ ಬಾರಿಸುವ ದೊಡ್ಡ ಅವಕಾಶವಿದೆ (PC-BCCI Women x).