AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sophie Devine: 8 ಸಿಕ್ಸ್, 9 ಫೋರ್, 36 ಎಸೆತ, 99 ರನ್​ಗೆ ಔಟ್: ಕ್ರಿಸ್ ಗೇಲ್ ಸ್ಫೋಟಕ ಆಟ ನೆನಪಿಸಿದ ಸೋಫಿ ಡಿವೈನ್

RCB vs Gujarat Giants, WPL 2023: ಶನಿವಾರ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಗೈಂಟ್ಸ್ ವಿರುದ್ಧದ ಪಂದ್ಯದಲ್ಲಂತು ಆರ್​ಸಿಬಿ ಮಹಿಳಾ ತಂಡದ ಬ್ಯಾಟರ್​ಗಳು ಅಬ್ಬರಿಸಿದರು. ಅದರಲ್ಲೂ ಸೋಫಿ ಡಿವೈನ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡ 8 ವಿಕೆಟ್​ಗಳ ಜಯ ಸಾಧಿಸುವಲ್ಲಿ ಮುಖ್ಯ ಪಾತ್ರವಹಿಸಿದರು.

Vinay Bhat
|

Updated on:Mar 19, 2023 | 9:17 AM

Share
ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಸತತ ಐದು ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಇದೀಗ ಒಂದರ ಹಿಂದೆ ಒಂದರಂತೆ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫರ್ ರೇಸ್​ನಲ್ಲಿ ಉಳಿದುಕೊಂಡಿದೆ.

1 / 8
ಶನಿವಾರ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಗೈಂಟ್ಸ್ ವಿರುದ್ಧದ ಪಂದ್ಯದಲ್ಲಂತು ಆರ್​ಸಿಬಿ ಮಹಿಳಾ ತಂಡದ ಬ್ಯಾಟರ್​ಗಳು ಅಬ್ಬರಿಸಿದರು. ಅದರಲ್ಲೂ ಸೋಫಿ ಡಿವೈನ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡ 8 ವಿಕೆಟ್​ಗಳ ಜಯ ಸಾಧಿಸುವಲ್ಲಿ ಮುಖ್ಯ ಪಾತ್ರವಹಿಸಿದರು.

2 / 8
ಕೇವಲ 36 ಎಸೆತಗಳನ್ನು ಎದುರಿಸಿದ ಸೋಫಿ ಡಿವೈನ್ ಬರೋಬ್ಬರಿ 8 ಸಿಕ್ಸರ್, 9 ಫೋರ್​ನೊಂದಿಗೆ 99 ರನ್​ಗೆ ಔಟಾದರು. ಈ ಮೂಲಕ 1 ರನ್​ಗಳಿಂದ ಶತಕ ವಂಚಿತರಾದರು. ಈ ಆಟ ನೋಡಿ ಪುಳಕಗೊಂಡ ಅಭಿಮಾನಿಗಳು ಡಿವೈನ್‌ ಆರ್‌ಸಿಬಿಯ ಕ್ರಿಸ್‌ ಗೇಲ್‌ ಎಂದು ಹೇಳುತ್ತಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಇವರು ಏನು ಹೇಳಿದ್ದಾರೆ ನೋಡಿ.

3 / 8
ನಾವು ಪ್ಲೇ ಆಫ್ ರೇಸ್​ನಲ್ಲಿ ಇನ್ನೂ ಜೀವಂತವಾಗಿದ್ದೇವೆ. ಕೆಲವು ಪಂದ್ಯಗಳನ್ನು ನಾನು ಗಮನಿಸಿದ್ದೇನೆ. ಪ್ರತಿ ದಿನ ಇಲ್ಲಿ ಒಂದೊಂದು ವಿಚಾರಗಳನ್ನು ಕಲಿಯುತ್ತಿದ್ದೇವೆ. ಈ ವಾತಾವರಣ ತುಂಬಾ ಕಷ್ಟಕರವಾಗಿತ್ತು. ಬೌಲರ್​ಗಳು ಹರಸಾಹಸ ಪಟ್ಟರು. 99 ರನ್​ಗೆ ಔಟಾಗಿದ್ದು ಬೇಸರವಿಲ್ಲ. ತಂಡಕ್ಕಾಗಿ ಕೊಡುಗೆ ನೀಡುವುದು ಮುಖ್ಯ ಎಂಬುದಾಗಿ ಸೋಫಿ ಡಿವೈನ್ ಹೇಳಿದ್ದಾರೆ.

4 / 8
ಗುಜರಾತ್ ನೀಡಿದ 189 ರನ್‌ಗಳ ಕಠಿಣ ‌ಗುರಿ ಬೆನ್ನತ್ತಿದ ಆರ್‌ಸಿಬಿ 15.3 ಓವರ್‌ಗಳಲ್ಲಿ 2 ವಿಕೆಟ್‌ ‌ಕಳೆದುಕೊಂಡು ಗೆಲುವು ಸಾಧಿಸಿತು. ಸೋಫಿ ಹಾಗೂ ನಾಯಕಿ ಸ್ಮೃತಿ ಮಂದಾನ (37) ಮೊದಲ ವಿಕೆಟ್‌ ಜೊತೆಯಾಟದಲ್ಲಿ 125 ರನ್‌ ಗಳಿಸಿದರು. ಚೆಂಡನ್ನು ಮನಬಂದಂತೆ ದಂಡಿಸಿದ ಡಿವೈನ್​ ಅಕ್ಷರಶಃ ಕ್ರೀಡಾಂಗಣದಲ್ಲಿ ಅಲೆ ಎಬ್ಬಿಸಿದರು. ಟಿ20 ಕ್ರಿಕೆಟ್​ನ ರಸದೌತಣ ನೀಡಿದರು.

5 / 8
ನ್ಯೂಜಿಲೆಂಡ್​ ತಂಡದಲ್ಲಿ ಬೌಲರ್​ ಆಗಿ ವೃತ್ತಿಜೀವನ ಆರಂಭಿಸಿದ್ದ ಸೋಫಿ, ಬಳಿಕ ಆಲ್​ರೌಂಡರ್ ಆಗಿ ಗುರುತಿಸಿಕೊಂಡರು. ಟಿ20 ಪಂದ್ಯದಲ್ಲಿ ಇದು ಅವರ ಅತ್ಯದ್ಭುತ ಪ್ರದರ್ಶನವಾಗಿದೆ.

6 / 8
ಸ್ಮೃತಿ- ಸೋಫಿ ನಿರ್ಗಮನದ ಬಳಿಕ ಎಲಿಸ್‌ ಪೆರಿ (ಔಟಾಗದೆ 19) ಮತ್ತು ಹೀದರ್ ನೈಟ್‌ (ಔಟಾಗದೆ 22) ತಂಡವನ್ನು ಜಯದ ದಡ ಸೇರಿಸಿದರು. ಈ ಮೂಲಕ ಆರ್​ಸಿಬಿ ತಂಡ 27 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತು.

7 / 8
ಇದಕ್ಕೂ ಮೊದಲು ಬ್ಯಾಟ್​ ಮಾಡಿದ ಗುಜರಾತ್​ ಗೈಂಟ್ಸ್​ ಲಾರಾ ವೊಲ್ವಾರ್ಡ್​ರ (68) ಅರ್ಧಶತಕ, ಗಾರ್ಡ್ನರ್​ರ (41) ಹೋರಾಟದ ಬಲದಿಂದ 20 ಓವರ್​ಗಳಲ್ಲಿ 4 ವಿಕೆಟ್‌ಗೆ 188 ರನ್ ಬೃಹತ್​ ಮೊತ್ತ ಪೇರಿಸಿತು. ಆರ್​ಸಿಬಿ ಪರ ಶ್ರೆಯಾಂಕ ಪಾಟಿಲ್ 2 ವಿಕೆಟ್ ಪಡೆದರು.

8 / 8

Published On - 9:17 am, Sun, 19 March 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ