- Kannada News Photo gallery Cricket photos Starcast Predict their Two World Cup 2023 Finalist on Star Sports
World Cup 2023: ಮಾಜಿ ದಂತಕಥೆಗಳ ಪ್ರಕಾರ ವಿಶ್ವಕಪ್ ಫೈನಲ್ಗೇರುವ ಎರಡು ತಂಡಗಳಿವು
World Cup 2023: ಈ ಬಾರಿಯ ವಿಶ್ವಕಪ್‌ನಲ್ಲಿ ಆತಿಥೇಯ ಭಾರತವೇ ಹಾಟ್ ಫೇವರಿಟ್ ಎಂದು ಹೇಳಲಾಗುತ್ತಿದೆ. ನೀವು ಮತ್ತು ನಾನು ಮಾತ್ರವಲ್ಲ, ದೇಶ ಮತ್ತು ವಿದೇಶಗಳ ಅನೇಕ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ತಮ್ಮ ದೃಷ್ಟಿಯಲ್ಲಿ ಭಾರತವೇ ಫೈನಲಿಸ್ಟ್ ಎನಿಸಿದೆ. ಹಾಗಿದ್ದರೆ ಈ ಮಾಜಿ ದಂತಕಥೆಗಳ ಪ್ರಕಾರ ಯಾವೆರಡು ತಂಡಗಳು ಫೈನಲ್ ಪ್ರವೇಶಿಸಲಿವೆ ಎಂಬುದನ್ನು ನೋಡೋಣ.
Updated on: Oct 01, 2023 | 12:33 PM

ಇನ್ನು ಮೂರು ದಿನಗಳ ನಂತರ ದೇಶದಲ್ಲಿ ವಿಶ್ವಕಪ್ ಆರಂಭವಾಗಲಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಆತಿಥೇಯ ಭಾರತವೇ ಹಾಟ್ ಫೇವರಿಟ್ ಎಂದು ಹೇಳಲಾಗುತ್ತಿದೆ. ನೀವು ಮತ್ತು ನಾನು ಮಾತ್ರವಲ್ಲ, ದೇಶ ಮತ್ತು ವಿದೇಶಗಳ ಅನೇಕ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ತಮ್ಮ ದೃಷ್ಟಿಯಲ್ಲಿ ಭಾರತವೇ ಫೈನಲಿಸ್ಟ್ ಎನಿಸಿದೆ. ಹಾಗಿದ್ದರೆ ಈ ಮಾಜಿ ದಂತಕಥೆಗಳ ಪ್ರಕಾರ ಯಾವೆರಡು ತಂಡಗಳು ಫೈನಲ್ ಪ್ರವೇಶಿಸಲಿವೆ ಎಂಬುದನ್ನು ನೋಡೋಣ.

ಜಾಕ್ವೆಸ್ ಕಾಲಿಸ್: ಈ ಆಫ್ರಿಕಾ ದಂತಕಥೆ ಪ್ರಕಾರ ಈ ವಿಶ್ವಕಪ್‌ನ ಎರಡೂ ಫೈನಲಿಸ್ಟ್‌ಗಳೆಂದರೆ ಅದು ಭಾರತ ಮತ್ತು ಇಂಗ್ಲೆಂಡ್

ಕ್ರಿಸ್ ಗೇಲ್: ಕೆರಿಬಿಯನ್ ಸೂಪರ್ ಸ್ಟಾರ್ ಕ್ರಿಸ್ ಗೇಲ್ ಅವರ ಪ್ರಕಾರ ಮುಂಬರುವ ವಿಶ್ವಕಪ್‌ನ 2 ಫೈನಲಿಸ್ಟ್ ತಂಡಗಳೆಂದರೆ ಭಾರತ ಮತ್ತು ಪಾಕಿಸ್ತಾನ.

ಡೇಲ್ ಸ್ಟೇನ್: ಮಾಜಿ ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇನ್ ಈ ಬಾರಿ ಭಾರತ ಮತ್ತು ಇಂಗ್ಲೆಂಡ್ ಫೈನಲ್ಗೇರುತ್ತವೆ ಎಂಬ ಭವಿಷ್ಯ ನುಡಿದಿದ್ದಾರೆ.

ಶೇನ್ ವ್ಯಾಟ್ಸನ್: ಆಸ್ಟ್ರೇಲಿಯಾದ ಈ ಮಾಜಿ ಆಲ್‌ರೌಂಡರ್ ಪ್ರಕಾರ, ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ಗೇರಲಿವಿಯಂತೆ.

ಫಾಫ್ ಡು ಪ್ಲೆಸಿಸ್: ದಕ್ಷಿಣ ಆಫ್ರಿಕಾದ ಈ ಸ್ಟಾರ್ ಓಪನರ್ ಪ್ರಕಾರ ಭಾರತ ಮತ್ತು ಆಸ್ಟ್ರೇಲಿಯಾ ಅಥವಾ ನ್ಯೂಜಿಲೆಂಡ್ ನಡುವೆ ಫೈನಲ್ ಪಂದ್ಯ ನಡೆಯಲ್ಲಿದೆಯಂತೆ.

ಮುತ್ತಯ್ಯ ಮುರಳೀಧರನ್: ಶ್ರೀಲಂಕಾದ ದಂತಕಥೆ ಮುತ್ತಯ್ಯ ಮುರಳೀಧರನ್ ಅವರ ಪ್ರಕಾರ, ಈ ಬಾರಿಯ ವಿಶ್ವಕಪ್‌ನ ಎರಡೂ ಫೈನಲಿಸ್ಟ್‌ಗಳೆಂದರೆ ಭಾರತ ಮತ್ತು ಪಾಕಿಸ್ತಾನ.

ಆಸ್ಟ್ರೇಲಿಯದ ಸ್ಟಾರ್ ಕ್ರಿಕೆಟಿಗ ಆ್ಯರೋನ್ ಫಿಂಚ್ ಪ್ರಕಾರ, ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಫೈನಲ್ ಸ್ಪರ್ಧಿಗಳಾಗಿವೆ.

ಭಾರತದ ಸ್ಟಾರ್ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಏಕದಿನ ವಿಶ್ವಕಪ್‌ಗೆ ಅಂತಿಮ ಸ್ಪರ್ಧಿಗಳಾಗಿವೆ.

ಭಾರತದ ಮಾಜಿ ಕ್ರಿಕೆಟಿಗ ಪಿಯೂಷ್ ಚಾವ್ಲಾ ಪ್ರಕಾರ ಭಾರತ ಮತ್ತು ಇಂಗ್ಲೆಂಡ್ ಫೈನಲ್ ಆಡಲಿವೆ.

ಇರ್ಫಾನ್ ಪಠಾಣ್: ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಪ್ರಕಾರ, ಮುಂಬರುವ ವಿಶ್ವಕಪ್‌ನ ಎರಡು ಫೈನಲಿಸ್ಟ್‌ಗಳೆಂದರೆ ಭಾರತ ಮತ್ತು ದಕ್ಷಿಣ ಆಫ್ರಿಕಾ.

ಸಂಜಯ್ ಮಂಜ್ರೇಕರ್: ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರ ಪ್ರಕಾರ ಈ ಬಾರಿ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ಗೇರಲಿವೆ.

ವಕಾರ್ ಯೂನಿಸ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಅವರ ಪ್ರಕಾರ ಭಾರತ ಮತ್ತು ಇಂಗ್ಲೆಂಡ್ ಫೈನಲ್ ಆಡಲಿವಿಯಂತೆ.




