Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!

| Updated By: ಝಾಹಿರ್ ಯೂಸುಫ್

Updated on: Jul 09, 2022 | 4:09 PM

Steve Smith: ಈ ಬಾರಿ ಐಪಿಎಲ್​ ಆಡದಿದ್ದರೂ ಸ್ಟೀವ್ ಸ್ಮಿತ್ ಒಂದೇ ವರ್ಷದೊಳಗೆ ಬರೋಬ್ಬರಿ 30 ಕೋಟಿ ಲಾಭಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

1 / 6
ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್​ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಅಷ್ಟೇ ಯಾಕೆ ಬದಲಿ ಆಟಗಾರನಾಗಿಯೂ ಕೂಡ ಐಪಿಎಲ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಾಗ್ಯೂ ಒಂದೇ ವರ್ಷದೊಳಗೆ ಸ್ಟೀವ್ ಸ್ಮಿತ್ ಬರೋಬ್ಬರಿ 30 ಕೋಟಿ ಲಾಭಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

2 / 6
ಸ್ಟೀವ್ ಸ್ಮಿತ್ ಹೀಗೆ ಲಾಭಗಳಿಸಿದ್ದು ತಮ್ಮ ಮನೆಯ ಮಾರಾಟದಿಂದ ಎಂಬುದು ವಿಶೇಷ. ಮೊದಲೇ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ. ಇನ್ನು ಸ್ಮಿತ್ ಅವರ ಮನೆ ಖರೀದಿಗೆ ದೊಡ್ಡ ಕುಳಗಳ ದಂಡೇ ಕ್ಯೂನಲ್ಲಿರುತ್ತದೆ. ಅಂತದ್ರಲ್ಲಿ ಸ್ಮಿತ್ ಸಿಡ್ನಿಯ ದಿ ಕಿಂಗ್ಸ್​ ರೋಡ್​ನಲ್ಲಿರುವ ಮನೆಯನ್ನು ಮಾರಾಟ ಮಾಡಿದ್ದಾರೆ.

3 / 6
ದಿ ಕಿಂಗ್ಸ್ ರೋಡ್ ಆಸ್ಟ್ರೇಲಿಯಾದ ಅತ್ಯಂತ ಸುರಕ್ಷಿತ ಪ್ರದೇಶವಾಗಿ ಗುರುತಿಸಿಕೊಂಡಿದೆ. ಅಲ್ಲದೆ ಈ ಪ್ರದೇಶದಲ್ಲಿ ಎಲ್ಲಾ ರೀತಿಯ ಐಷಾರಾಮಿ ಸೌಲಭ್ಯಗಳಿವೆ. ಇಂತಹ ಪ್ರದೇಶದಲ್ಲಿದ್ದ ಮನೆಯನ್ನು ಸ್ಮಿತ್ ಬರೋಬ್ಬರಿ 12.30 ಮಿಲಿಯನ್​ ಆಸ್ಟ್ರೇಲಿಯಾ ಡಾಲರ್​ಗೆ ಮಾರಾಟ ಮಾಡಿದ್ದಾರೆ.

4 / 6
ಹರಾಜಿನ ಮೂಲಕ ಮಾರಾಟ ಮಾಡಲಾದ ಈ ಮನೆಗೆ 11.5 ಮಿಲಿಯನ್ ಆರಂಭಿಕ ಬಿಡ್ ಎಂದು ನಿಗದಿಪಡಿಸಲಾಗಿತ್ತು. ಅದರಂತೆ ಶುರುವಾದ ಮಿಲಿಯನ್ ಡಾಲರ್ ಹರಾಜು ಅಂತಿಮವಾಗಿ 12.38 ಮಿಲಿಯನ್ ಡಾಲರ್​ಗೆ ಬಂದು ನಿಂತಿದೆ. ಅಂದರೆ ಸುಮಾರು 65 ಕೋಟಿ ರೂ.ಗೆ ಮನೆ ಮಾರಾಟವಾಗಿದೆ.

5 / 6
ವಿಶೇಷ ಎಂದರೆ ಸ್ಟೀವ್ ಸ್ಮಿತ್ ಈ ಮನೆಯನ್ನು ಖರೀದಿಸಿದ್ದು ಕೇವಲ 6.6 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್​ಗೆ. ಅಂದರೆ ಇದೀಗ ಡಬಲ್​ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಈ ಮೂಲಕ ಬರೋಬ್ಬರಿ 30 ಕೋಟಿಗೂ ಅಧಿಕ ಮೊತ್ತವನ್ನು ಲಾಭ ಪಡೆದಿದ್ದಾರೆ.

6 / 6
ಒಟ್ಟಿನಲ್ಲಿ ಐಪಿಎಲ್​ನಲ್ಲಿ ಕಾಣಿಸಿಕೊಳ್ಳದಿದ್ದರೂ ಬಿಸಿನೆಸ್ ಡೀಲ್ ಮೂಲಕ ಸ್ಟೀವ್ ಸ್ಮಿತ್ 30 ಕೋಟಿ ಆದಾಯಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

Published On - 2:24 pm, Sat, 9 July 22