IND vs AUS 4th T20I: ಸರಣಿ ವಶಪಡಿಸಿದ ಬಳಿಕ ಪೋಸ್ಟ್ ಮ್ಯಾಚ್​ನಲ್ಲಿ ಹೆಚ್ಚು ಮಾತನಾಡದ ಸೂರ್ಯಕುಮಾರ್: ಏನಂದ್ರು ನೋಡಿ

Updated on: Dec 02, 2023 | 6:57 AM

Suryakumar Yadav in post match presentation: ಶುಕ್ರವಾರ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 20 ರನ್​ಗಳ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಏನು ಹೇಳಿದರು ನೋಡಿ.

1 / 7
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಭಾರತ  3-1 ಅಂಕಗಳ ಅಂತರದಿಂದ ವಶಪಡಿಸಿಕೊಂಡಿದೆ. ಶುಕ್ರವಾರ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ 20 ರನ್​ಗಳ ಜಯ ಸಾಧಿಸಿತು.

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಭಾರತ 3-1 ಅಂಕಗಳ ಅಂತರದಿಂದ ವಶಪಡಿಸಿಕೊಂಡಿದೆ. ಶುಕ್ರವಾರ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ 20 ರನ್​ಗಳ ಜಯ ಸಾಧಿಸಿತು.

2 / 7

ಬ್ಯಾಟಿಂಗ್​ಗೆ ಕಠಿಣವಾದ ಪಿಚ್​ನಲ್ಲಿ ರನ್ ಕಲೆಹಾಕಲು ಉಭಯ ತಂಡಗಳ ಬ್ಯಾಟರ್​ಗಳು ಪರದಾಡಿದರು. ಭಾರತ 20 ಓವರ್​ಗಳಲ್ಲಿ 174 ರನ್ ಕಲೆಹಾಕಿದರೆ, ಆಸ್ಟ್ರೇಲಿಯಾ 154 ರನ್ ಗಳಿಸಿತಷ್ಟೆ. ಅಕ್ಷರ್ ಪಟೇಲ್ ಪ್ರಮುಖ 3 ವಿಕೆಟ್ ಕಿತ್ತರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್ ಏನು ಹೇಳಿದ್ದಾರೆ ನೋಡಿ.

3 / 7

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಟಾಸ್ ಒಂದು ಹೊರತುಪಡಿಸಿ, ಉಳಿದ ಎಲ್ಲವೂ ನಾವು ಅಂದುಕೊಂಡಂತೆ ಸಾಗಿತು. ಹುಡುಗರು ತಮ್ಮ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದರು. ಅದು ನಮಗೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

4 / 7

ನಾವು ಆಟಕ್ಕೆ ಮೊದಲು ಸಭೆಯಲ್ಲಿ ಮಾತನಾಡಿದ್ದೆವು. ಎಲ್ಲರಿಗೂ ನಿಮ್ಮ ಆಟ ನೀವು ಆಡಿ ಎಂದು ಹೇಳಿದ್ದೆವು. ನಾನು ಯಾವಾಗಲೂ ಅಕ್ಷರ್ ಪಟೇಲ್ ಅವರನ್ನು ಒತ್ತಡದ ಸಮಯಕ್ಕೆಂದು ಇರಿಸಲು ಇಷ್ಟಪಡುತ್ತೇನೆ, ಯಾಕೆಂದರೆ ಅವರು ಆ ಸಂದರ್ಭದಲ್ಲಿ ಅದ್ಭುತ ಬೌಲಿಂಗ್ ಮಾಡುತ್ತಾರೆ, ಇಂದು ಕೂಡ ಅದೇರೀತಿ ನಡೆಯಿತು. ಡೆತ್ ಓವರ್‌ಗಳ ಸಮಯದಲ್ಲಿ ಯಾರ್ಕರ್‌ ಎಸೆಯುವುದು ನಮ್ಮ ಪ್ಲಾನ್ ಆಗಿತ್ತು. ಅದುಕೂಡ ಯಶಸ್ವಿ ಆಯಿತು ಎಂಬುದು ಸೂರ್ಯಕುಮಾರ್ ಯಾದವ್ ಮಾತು.

5 / 7

ಅಕ್ಷರ್ ಪಟೇಲ್ 4 ಓವರ್ ಬೌಲಿಂಗ್ ಮಾಡಿ ಕೇವಲ 16 ರನ್ ನೀಡಿ 3 ವಿಕೆಟ್ ಪಡೆದರು. ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು. ಈ ಸಂದರ್ಭ ಮಾತನಾಡಿದ ಅವರು ನಾನು ಮನೆಯಲ್ಲಿದ್ದಾಗ ಬಹಳಷ್ಟು ಅಭ್ಯಾಸ. ಅದು ಇಂದು ಚೆನ್ನಾಗಿ ಕೆಲಸಕ್ಕೆ ಬಂದಿದೆ. ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತೇನೆ ಎಂದು ಹೇಳಿದ್ದಾರೆ.

6 / 7

ಸ್ಟಂಪ್-ಟು-ಸ್ಟಂಪ್ ಬೌಲಿಂಗ್ ಮಾಡಿದೆ. ಇಬ್ಬನಿ ಅಂಶವು ಪ್ರಮುಖವಾಗಿದೆ. ಆಕ್ರಮಣಕಾರಿಯಾಗಿ ಮತ್ತು ಮಾನಸಿಕವಾಗಿ ಬಲವಾಗಿರುವುದು ಮುಖ್ಯ. ಏಕೆಂದರೆ ಇದು ಟಿ20 ಮಾದರಿಯ ಕ್ರಿಕೆಟ್. ನೀವು ವಿಕೆಟ್‌ಗಳನ್ನು ತೆಗೆಯುವ ಮನೋಭಾವದೊಂದಿಗೆ ಹೋದಾಗ, ತುಂಬಾ ಸಹಕಾರಿ ಆಗುತ್ತದೆ ಎಂಬುದು ಅಕ್ಷರ್ ಪಟೇಲ್ ಮಾತು.

7 / 7

ಆಸ್ಟ್ರೇಲಿಯನ ನಾಯಕ ಮ್ಯಾಥ್ಯೂ ವೇಡ್ ಮಾತನಾಡಿ, ನಾವು ಸ್ಪಿನ್ ಅನ್ನು ಚೆನ್ನಾಗಿ ಆಡಲಿಲ್ಲ, ಮಧ್ಯದಲ್ಲಿ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡೆವು. ಬೌಲರ್​ಗಳು ಒಳ್ಳೆಯ ಕೆಲಸ ಮಾಡಿದರು ಆದರೆ ದುರದೃಷ್ಟವಶಾತ್ ನಮಗೆ ಉತ್ತಮ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. T20 ವಿಶ್ವಕಪ್ ಇರುವ ಕಾರಣ ಈಗಾಗಲೇ ತಂಡದಲ್ಲಿ ರೂಪಿಸುವುದು ಅಗತ್ಯ ಎಂದು ಹೇಳಿದ್ದಾರೆ.

Loading...
Unable to load recommendations.
Follow Us