
ಭಾರತ ಟಿ20 ತಂಡದ ಮಾಜಿ ನಾಯಕ ಹಾಗೂ 2026ರ ಟಿ20 ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್ ಯಾದವ್ಗೆ ಸದ್ಯ ಭಾರತ ತಂಡಕ್ಕೆ ಮರಳುವ ಅವಕಾಶ ಕ್ಷೀಣಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಸೂರ್ಯಕುಮಾರ್ ಅವರನ್ನು ಆಯ್ಕೆ ಸಮಿತಿ ಪರಿಗಣಿಸುತ್ತಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ(PC-PTI).
ಅಚ್ಚರಿಯ ಸಂಗತಿಯೆಂದರೆ, ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರಿಗೂ ಭಾರತ ತಂಡದ ವೈಟ್ಬಾಲ್ ಕ್ರಿಕೆಟ್ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಸೂರ್ಯಕುಮಾರ್ ಅವರನ್ನು ತಂಡಕ್ಕೆ ಹೇಗೆ ಸೇರಿಸಿಕೊಳ್ಳುವುದು ಎಂಬುದು ಆಯ್ಕೆಗಾರರ ಮುಂದಿರುವ ಪ್ರಶ್ನೆಯಾಗಿದೆ(PC-PTI).
2026ರ ಟಿ20 ವಿಶ್ವಕಪ್ನಲ್ಲಿ ಭಾರತಕ್ಕೆ ಸತತ ಎರಡನೇ ಬಾರಿ ಪ್ರಶಸ್ತಿ ತಂದುಕೊಟ್ಟಿದ್ದ ಸೂರ್ಯಕುಮಾರ್ ಯಾದವ್, ಐಪಿಎಲ್ ಮುಕ್ತಾಯದ ಬಳಿಕ ಟಿ20 ತಂಡದಿಂದ ಹೊರಬಿದ್ದಿದ್ದರು. ಬಳಿಕ ಆಯ್ಕೆಗಾರರು ಶ್ರೇಯಸ್ ಅಯ್ಯರ್ ಅವರನ್ನು ನೂತನ ನಾಯಕನನ್ನಾಗಿ ನೇಮಿಸಿದ್ದರು(PC-PTI).
ಸದ್ಯ ಸೂರ್ಯಕುಮಾರ್ ನಮ್ಮ ಆಯ್ಕೆ ಯೋಜನೆಯ ಭಾಗವಾಗಿಲ್ಲ. ವೈಟ್ಬಾಲ್ ಕ್ರಿಕೆಟ್ನಲ್ಲಿ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರಿಗೇ ತಂಡದಲ್ಲಿ ಸ್ಥಾನ ಕಲ್ಪಿಸಲು ಸಾಧ್ಯವಾಗಿಲ್ಲ' ಎಂದು ಬಿಸಿಸಿಐ ಮೂಲಗಳು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿವೆ(PC-PTI).
ಇನ್ನು ಸೂರ್ಯಕುಮಾರ್ ಯಾದವ್ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಲಿಸ್ಟ್ ಎ ಕ್ರಿಕೆಟ್ನಲ್ಲೂ ಕಠಿಣ ಪರಿಶ್ರಮ ಹಾಕುತ್ತಿದ್ದಾರೆ ಎಂಬುದನ್ನು ಬಿಸಿಸಿಐ ಮೂಲಗಳು ಒಪ್ಪಿಕೊಂಡಿವೆ. ಆದರೆ ಸದ್ಯದ ಭಾರತ ತಂಡದ ಸಂಯೋಜನೆಯಲ್ಲಿ ಅವರಿಗೆ ಸ್ಥಾನ ಕಲ್ಪಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿವೆ(PC-PTI).
ಸೂರ್ಯಕುಮಾರ್ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಉತ್ತಮ ಪ್ರದರ್ಶನವನ್ನೂ ನೀಡುತ್ತಿದ್ದಾರೆ. ಆದರೆ ಈಗಿನ ಭಾರತ ತಂಡದಲ್ಲಿ ಅವರಿಗೆ ಯಾವ ಸ್ಥಾನ ನೀಡಲು ಸಾಧ್ಯ? ಸದ್ಯ ತಂಡದಲ್ಲಿ ಅವಕಾಶವೇ ಇಲ್ಲ. ಯಶಸ್ವಿ ಜೈಸ್ವಾಲ್ ಅವರಂತಹ ಯುವ ಆಟಗಾರನಿಗೇ ವೈಟ್ಬಾಲ್ ಕ್ರಿಕೆಟ್ನಲ್ಲಿ ಸ್ಥಾನ ಸಿಗುತ್ತಿಲ್ಲ. ಹೀಗಿರುವಾಗ ಸೂರ್ಯಕುಮಾರ್ ಅವರನ್ನು ತಂಡಕ್ಕೆ ಹೇಗೆ ಸೇರಿಸಿಕೊಳ್ಳಲು ಸಾಧ್ಯ? ಸದ್ಯದ ಮಟ್ಟಿಗೆ ಅವರನ್ನು ಆಯ್ಕೆಗೆ ಪರಿಗಣಿಸುತ್ತಿಲ್ಲ ಎಂದು ಬಿಸಿಸಿಐ ಮೂಲಗಳು ಹೇಳಿವೆ(PC-PTI).
Published On - 7:08 pm, Sat, 21 November 26