AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Suryakumar Yadav: ಸೂರ್ಯಕುಮಾರ್ ಯಾದವ್ ಕೈ ಹಿಡಿದ ಉಡುಪಿಯ ಮಾರಿಯಮ್ಮ..!

Suryakumar Yadav: ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು 7 ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾ 5 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಅತ್ತ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ತಂಡ 16 ಪಂದ್ಯಗಳನ್ನಾಡಿದೆ. ಇದಾಗ್ಯೂ ಇದೀಗ ಪಾಂಡ್ಯರನ್ನು ಹಿಂದಿಕ್ಕಿ ಸೂರ್ಯಕುಮಾರ್ ಯಾದವ್​ಗೆ ಟೀಮ್ ಇಂಡಿಯಾ ನಾಯಕತ್ವ ಒಲಿದಿದೆ.

ಝಾಹಿರ್ ಯೂಸುಫ್
|

Updated on: Jul 20, 2024 | 8:04 AM

Share
ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ (Suryakumar Yadav) ಆಯ್ಕೆಯಾಗಿದ್ದಾರೆ. ನಾಯಕತ್ವದ ರೇಸ್​ನಲ್ಲಿದ್ದ ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್ ಅವರನ್ನು ಹಿಂದಿಕ್ಕಿ ನಾಯಕನ ಪಟ್ಟಕ್ಕೇರುವಲ್ಲಿ ಸೂರ್ಯ ಯಶಸ್ವಿಯಾಗಿದ್ದಾರೆ. ಆದರೆ ಇದಕ್ಕೂ ಮುನ್ನವೇ ಸೂರ್ಯಕುಮಾರ್​ಗೆ ನಾಯಕತ್ವ ಸಿಗುವ ಮುನ್ಸೂಚನೆ ಸಿಕ್ಕಿತ್ತು ಎಂಬುದು ವಿಶೇಷ.

1 / 6
ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿಯೊಂದಿಗೆ ಇತ್ತೀಚೆಗೆ ಉಡುಪಿಯ ಕಾಪುವಿನ ಮಾರಿಯಮ್ಮನ ಗುಡಿಗೆ ಭೇಟಿ ನೀಡಿದ್ದರು. ಟಿ20 ವಿಶ್ವಕಪ್ ಗೆಲ್ಲಲು ಹರಕೆ ಹೊತ್ತಿದ್ದ ಸೂರ್ಯ, ಹರಕೆ ತೀರಿಸಲೆಂದು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. ಹೀಗೆ ಪೂಜೆ ಮುಗಿಸಿ ಹಿಂತಿರುಗುವ ಮುನ್ನ ನಾಯಕನಾದ ಬಳಿಕ ಮತ್ತೊಮ್ಮೆ ಮಾರಿಯಮ್ಮನ ದರ್ಶನಕ್ಕೆ ಬರುವಂತೆ ತಿಳಿಸಿದ್ದರು.

2 / 6
ಹೌದು, ಪೂಜೆಯ ಬಳಿಕ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಮಾತನಾಡಿದ ಮಾರಿಗುಡಿ ದೇವಸ್ಥಾನದ ಆರ್ಚಕರು, ಟೀಮ್ ಇಂಡಿಯಾದ ನಾಯಕರಾಗಿ ಮತ್ತೆ ಕಾಪುವಿಗೆ ಬನ್ನಿ ಎಂದು ಆಶೀರ್ವಾದ ಮಾಡಿದರು. ದೇವರ ಸನ್ನಿಧಿಯಲ್ಲಿ ಮಾಡಿದ ಈ ಆಶೀರ್ವಾದ ಇದೀಗ ಸೂರ್ಯಕುಮಾರ್ ಯಾದವ್ ಅವರ ಕೈ ಹಿಡಿದಿದೆ ಎಂದರೆ ತಪ್ಪಾಗಲಾರದು.

3 / 6
ಏಕೆಂದರೆ ಆರ್ಚಕರು ಆಶಿರ್ವಾದ ಮಾಡಿದಾಗಲೂ, ಭಾರತ ತಂಡದ ಕಪ್ತಾನ ಆಗೋದು ನಮ್ಮ ಕೈಯಲ್ಲಿಲ್ಲ. ದೇಶಕ್ಕಾಗಿ ಚೆನ್ನಾಗಿ ಆಡುವುದು ಮಾತ್ರ ನನ್ನ ಗುರಿ. ದೇವರು ಇಚ್ಚಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದರು.

4 / 6
ಅದ್ಯಾವ ಶುಭಘಳಿಗೆಯಲ್ಲಿ ಆರ್ಚಕರಿಂದ ಮತ್ತು ಸೂರ್ಯಕುಮಾರ್ ಯಾದವ್ ಅವರಿಂದ ಮಾರಿಗುಡಿ ಸನ್ನಿಧಿಯಲ್ಲಿ ಈ ಮಾತು ಬಂತೋ, ಅದೀಗ ನಿಜವಾಗಿದೆ. ಎಲ್ಲರೂ ಅಚ್ಚರಿಪಡುವಂತೆ ಭಾರತ ಟಿ20 ತಂಡದ ನಾಯಕತ್ವ ಸೂರ್ಯಕುಮಾರ್ ಯಾದವ್ ಅವರಿಗೆ ಒಲಿದಿದೆ.

5 / 6
ಹೀಗೆ ಅನಿರೀಕ್ಷಿತವಾಗಿ ಸಿಕ್ಕ ನಾಯಕತ್ವದ ಬಗ್ಗೆ ಸಂತಸ ಹಂಚಿಕೊಂಡಿರುವ ಸೂರ್ಯಕುಮಾರ್ ಯಾದವ್ ಕೂಡ ಇದೆಲ್ಲವೂ ದೇವರ ದಯೆಯಿಂದ ಎಂದು ತಿಳಿಸಿದ್ದಾರೆ. ಹೊಸ ಜವಾಬ್ದಾರಿವಹಿಸಿಕೊಳ್ಳಲು ಉತ್ಸುಕನಾಗಿದ್ದೇನೆ. ನಿಮ್ಮೆಲ್ಲರ ಬೆಂಬಲ ಹೀಗೆ ಇರಲಿ. ಎಲ್ಲಾ ಕೀರ್ತಿಯು ದೇವರಿಗೆ ಸಲ್ಲುತ್ತದೆ. ದೇವರು ದೊಡ್ಡವನು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಸೂರ್ಯಕುಮಾರ್ ಯಾದವ್​ ಅವರಿಗೆ ನಾಯಕತ್ವ ಒಲಿಯಲು ಮಾರಿಯಮ್ಮನ ಕೃಪೆಯೇ ಕಾರಣ ಎನ್ನಲಾಗುತ್ತಿದೆ.

6 / 6
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!

ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು

ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ

ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ

ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ

ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ

ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​

‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು

ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ