ಟಿ20 ವಿಶ್ವಕಪ್ನ 4 ಗ್ರೂಪ್ಗಳು ಪ್ರಕಟ: ಇಲ್ಲಿದೆ ಟೀಮ್ ಇಂಡಿಯಾದ ಎದುರಾಳಿಗಳ ಪಟ್ಟಿ
T20 World Cup 2026: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ 20 ತಂಡಗಳನ್ನು ನಾಲ್ಕು ಗ್ರೂಪ್ಗಳಾಗಿ ವಿಂಗಡಿಸಲಾಗಿದ್ದು, ಈ ಗುಂಪುಗಳ ಪಟ್ಟಿ ಇದೀಗ ಬಹಿರಂಗವಾಗಿದ್ದು, ಯಾವ ತಂಡ ಯಾವ ಗ್ರೂಪ್ಗಳಲ್ಲಿದೆ ಎಂಬುದರ ಮಾಹಿತಿ ಈ ಕೆಳಗಿನಂತಿದೆ...
Updated on:Nov 22, 2025 | 2:03 PM

T20 World Cup 2026: ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿರುವ 20 ತಂಡಗಳನ್ನು 4 ಗ್ರೂಪ್ಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಗ್ರೂಪ್ ಒನ್ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಕಾಣಿಸಿಕೊಂಡಿದೆ. ಹೀಗಾಗಿ ಮೊದಲ ಸುತ್ತಿನಲ್ಲೇ ಭಾರತ-ಪಾಕ್ ಮುಖಾಮುಖಿಯಾಗಲಿದೆ. ಇನ್ನು 4 ಗ್ರೂಪ್ಗಳಲ್ಲಿ ಸ್ಥಾನ ಪಡೆದಿರುವ ತಂಡಗಳ ಪಟ್ಟಿ ಈ ಕೆಳಗಿನಂತಿದೆ...

ಗ್ರೂಪ್- 1: ಭಾರತ, ಪಾಕಿಸ್ತಾನ್, ಯುಎಸ್ಎ, ನಮೀಬಿಯಾ ಮತ್ತು ನೆದರ್ಲೆಂಡ್ಸ್ ಗ್ರೂಪ್-1 ನಲ್ಲಿ ಕಾಣಿಸಿಕೊಂಡಿದೆ. ಅದರಂತೆ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ್, ಯುಎಸ್ಎ, ನಮೀಬಿಯಾ ಮತ್ತು ನೆದರ್ಲೆಂಡ್ಸ್ ತಂಡಗಳ ವಿರುದ್ಧ ಕಣಕ್ಕಿಳಿಯಲಿದೆ.

ಗ್ರೂಪ್-2: ಆಸ್ಟ್ರೇಲಿಯಾ, ಶ್ರೀಲಂಕಾ, ಝಿಂಬಾಬ್ವೆ, ಐರ್ಲೆಂಡ್ ಮತ್ತು ಒಮಾನ್ ತಂಡಗಳು ಗ್ರೂಪ್-2 ನಲ್ಲಿ ಸ್ಥಾನ ಪಡೆದಿವೆ. ಈ ಗ್ರೂಪ್ನಲ್ಲಿ ಆಸ್ಟ್ರೇಲಿಯಾ ತಂಡ ಮಾತ್ರ ಬಲಿಷ್ಠವಾಗಿದ್ದು, ಹೀಗಾಗಿ ಆಸೀಸ್ ಪಡೆ ಮುಂದಿನ ಹಂತಕ್ಕೇರುವುದು ಖಚಿತ. ಇನ್ನು ಶ್ರೀಲಂಕಾ, ಝಿಂಬಾಬ್ವೆ ಮತ್ತು ಐರ್ಲೆಂಡ್ ನಡುವೆ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಬಹುದು.

ಗ್ರೂಪ್-3: ಇಂಗ್ಲೆಂಡ್, ವೆಸ್ಟ್ ಇಂಡೀಸ್, ಇಟಲಿ, ಬಾಂಗ್ಲಾದೇಶ್ ಮತ್ತು ನೇಪಾಳ ತಂಡಗಳು ಗ್ರೂಪ್-3 ರಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ಇಂಗ್ಲೆಂಡ್ ತಂಡ ಬಲಿಷ್ಠವಾಗಿ ಕಾಣಿಸಿಕೊಂಡರೂ ವೆಸ್ಟ್ ಇಂಡೀಸ್ ತಂಡದ ಕಡೆಯಿಂದಲೂ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಗ್ರೂಪ್-4: ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಯುಎಇ ಮತ್ತು ಕೆನಡಾ ತಂಡಗಳು ಗ್ರೂಪ್-4 ರಲ್ಲಿ ಸ್ಥಾನ ಪಡೆದಿವೆ. ಈ ಗ್ರೂಪ್ನಲ್ಲಿ ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ತಂಡಗಳು ಬಲಿಷ್ಠವಾಗಿದೆ. ಇದಾಗ್ಯೂ ಅಫ್ಘಾನಿಸ್ತಾನ್ ತಂಡವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಹೀಗಾಗಿ ಗ್ರೂಪ್-4 ಪಂದ್ಯಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿಯನ್ನು ಎದುರು ನೋಡಬಹುದು.
Published On - 2:00 pm, Sat, 22 November 25
