Team India: ದಕ್ಷಿಣ ಆಫ್ರಿಕಾ ಸರಣಿಗೆ ಟೀಮ್ ಇಂಡಿಯಾದ ನಾಲ್ವರು ಆಟಗಾರರು ಅನುಮಾನ

| Updated By: ಝಾಹಿರ್ ಯೂಸುಫ್

Updated on: Dec 08, 2021 | 2:43 PM

India vs South Africa: ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮಾ ಕೂಡ ಸೈಡ್ ಸ್ಟ್ರೈನ್ ನಿಂದಾಗಿ ಮುಂಬೈ ಟೆಸ್ಟ್ ನಿಂದ ಹೊರಗುಳಿದಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್​ ಸರಣಿಯಿಂದ ಅವರೂ ಕೂಡ ಹೊರಗುಳಿಯುವುದು ಬಹುತೇಕ ಖಚಿತ ಎನ್ನಬಹುದು.

1 / 7
 ನ್ಯೂಜಿಲೆಂಡ್ ವಿರುದ್ದ ಭರ್ಜರಿಯಾಗಿ ಸರಣಿ ಗೆದ್ದಿರುವ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗಾಗಿ ತಯಾರಿಯಲ್ಲಿದೆ. ಡಿಸೆಂಬರ್ 26 ರಿಂದ ಹರಿಣರ ನಾಡಲ್ಲಿ ಶುರುವಾಗಲಿರುವ ಈ ಸರಣಿಗಾಗಿ ಶೀಘ್ರದಲ್ಲೇ ಭಾರತ ತಂಡವನ್ನು ಘೋಷಿಸಲಾಗುತ್ತದೆ.

2 / 7
ಆದರೆ ಈ ಸರಣಿಗೆ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಅಲಭ್ಯರಾಗುವ ಸಾಧ್ಯತೆಯಿದೆ. ಏಕೆಂದರೆ ತಂಡದಲ್ಲಿರುವ ಕೆಲ ಆಟಗಾರರು ಗಾಯಗೊಂಡಿದ್ದು, ಹೀಗಾಗಿ ಇವರನ್ನು ಆಯ್ಕೆಗೆ ಪರಿಗಣಿಸುವುದು ಅನುಮಾನ ಎನ್ನಲಾಗಿದೆ.

3 / 7
ಈ ಪಟ್ಟಿಯಲ್ಲಿ ಆಲ್​ರೌಂಡರ್​ ರವೀಂದ್ರ ಜಡೇಜಾ ಹೆಸರು ಮುಂಚೂಣಿಯಲ್ಲಿದ್ದು, ಕಾನ್ಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಪಂದ್ಯದ ವೇಳೆ ಜಡೇಜಾ ಬಲ ಮುಂಗೈ ಗಾಯಕ್ಕೆ ಒಳಗಾಗಿದ್ದರು. ಇದೀಗ ಗಾಯವು ಗಂಭೀರವಾಗಿರುವ ಕಾರಣ ವಿಶ್ರಾಂತಿ ಸೂಚಿಸಲಾಗಿದೆ. ಹೀಗಾಗಿ ಸೌತ್ ಆಫ್ರಿಕಾ ಸರಣಿಯಲ್ಲಿ ಜಡೇಜಾ ಕಾಣಿಸಿಕೊಳ್ಳುವುದು ಅನುಮಾನ.

4 / 7
ಮತ್ತೊಂದೆಡೆ, ಅಕ್ಷರ್ ಪಟೇಲ್ ಕೂಡ 2ನೇ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದು, ಹೀಗಾಗಿ ಅವರು ಸಂಪೂರ್ಣವಾಗಿ ಫಿಟ್ ಆಗಲು ಸುಮಾರು 6 ವಾರಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.

5 / 7
 ಇನ್ನು ಆರಂಭಿಕ ಆಟಗಾರ ಶುಭಮನ್ ಗಿಲ್ ಕೂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವುದು ಕಷ್ಟ. ನ್ಯೂಜಿಲೆಂಡ್ ವಿರುದ್ಧದ ಮುಂಬೈ ಟೆಸ್ಟ್ ಪಂದ್ಯದ ವೇಳೆ ಗಿಲ್ ಅವರ ಕಾಲಿನ ಗಾಯವಾಗಿದ್ದು, ಹೀಗಾಗಿ ಅವರಿಗೂ ಕೂಡ ವೈದ್ಯರು ವಿಶ್ರಾಂತಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

6 / 7
ಅದೇ ರೀತಿ ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮಾ ಕೂಡ ಸೈಡ್ ಸ್ಟ್ರೈನ್ ನಿಂದಾಗಿ ಮುಂಬೈ ಟೆಸ್ಟ್ ನಿಂದ ಹೊರಗುಳಿದಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್​ ಸರಣಿಯಿಂದ ಅವರೂ ಕೂಡ ಹೊರಗುಳಿಯುವುದು ಬಹುತೇಕ ಖಚಿತ ಎನ್ನಬಹುದು.

7 / 7

ಭಾರತ-ದಕ್ಷಿಣ ಆಫ್ರಿಕಾ ನಡುವಣ ಸರಣಿ ವೇಳಾಪಟ್ಟಿ: ಮೊದಲ ಟೆಸ್ಟ್ ಪಂದ್ಯ -ಡಿಸೆಂಬರ್ 26 ರಿಂದ 30 (ಸೆಂಚುರಿಯನ್, ಸಮಯ-1.30 ಗಂಟೆ), ಎರಡನೇ ಟೆಸ್ಟ್ ಜನವರಿ 3 ರಿಂದ 07 (ಜೋಹಾನ್ಸ್ ಬರ್ಗ್ , ಸಮಯ -1.30 ಗಂಟೆ), ಮೂರನೇ ಟೆಸ್ಟ್ ಜನವರಿ 11 ರಿಂದ 15 (ಕೇಪ್ ಟೌನ್, ಸಮಯ-2.00 ಗಂಟೆ)