- Kannada News Photo gallery Cricket photos Team india vice captain ms dhoni travel to kasaragod via mangalore see pics
MS Dhoni: ಮಂಗಳೂರಿನಲ್ಲಿ ಎಂಎಸ್ ಧೋನಿ..! ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಕೂಲ್
MS Dhoni: ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತೆರಳುವ ಸಲುವಾಗಿ ಮುಂಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಧೋನಿ, ಶಾಸಕ ಖಾದರ್ ಸಹೋದರ ಯು.ಟಿ.ಇಫ್ತಿಕಾರ್ ಅವರೊಂದಿಗೆ ಕಾರಿನಲ್ಲಿ ಕಾಸರಗೋಡಿನ ಬೇಕಲ್ಗೆ ತೆರಳಿದರು.
Updated on:Jan 07, 2023 | 2:57 PM

ಎಂಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರಬಹುದು ಆದರೆ ಅಭಿಮಾನಿಗಳ ಅಭಿಮಾನ ಕಿಂಚಿತ್ತು ಕಡಿಮೆಯಾಗಿಲ್ಲ. ಇವತ್ತಿಗೂ ಧೋನಿಯ ಕ್ರೇಜ್ ಅವರು ಕ್ರಿಕೆಟ್ ಆಡುವ ದಿನಗಳಲ್ಲಿ ಇದ್ದಂತೆಯೇ ಇದೆ. ಸದ್ಯ ಐಪಿಎಲ್ನಲ್ಲಿ ಕಣಕ್ಕಿಳಿಯುತ್ತಿರುವ ಧೋನಿಗೆ ಇದು ಕೊನೆಯ ಐಪಿಎಲ್ ಎಂದೇ ಹೇಳಲಾಗುತ್ತಿದೆ.

ಇತ್ತ ತನ್ನ ನಿವೃತ್ತಿಯ ಬದುಕಿಗೆ ತಯಾರಿ ಆರಂಭಿಸಿರುವ ಧೋನಿ ಕೃಷಿ ಕಡೆ ಚಿತ್ತ ಹರಿಸಿದ್ದಾರೆ. ಅದರ ಪ್ರಯುಕ್ತ ತಮ್ಮ ಫಾರ್ಮ್ ಹೌಸ್ನಲ್ಲಿ ವಿದವಿಧದ ತರಾಕರಿ, ಹಣ್ಣುಗಳನ್ನು ಬೆಳೆದು ವಿದೇಶಕ್ಕೆ ರಫ್ತು ಮಾಡುವ ಕೆಲಸವನ್ನು ಮಹಿ ಆರಂಭಿಸಿದ್ದಾರೆ. ಇತ್ತ ಬಿಡುವಿನ ವೇಳೆಯಲ್ಲಿ ಹಲವು ಸಮಾರಂಭಗಳಿಗೆ ಅತಿಥಿಯಾಗಿ ತೆರಳುವ ಅಭ್ಯಾಸವೂ ಧೋನಿಗಿದೆ. ಈಗ ಅಂತಹದ್ದೇ ಕಾರ್ಯಕ್ರಮಕ್ಕಾಗಿ ವಿಮಾನ ಪ್ರಯಾಣ ಬೆಳೆಸಿದ ಕ್ಯಾಪ್ಟನ್ ಕೂಲ್ ಮಂಗಳೂರಿನ ವಿಮಾನ ನಿಲ್ದಾಣ ಕಾಣಿಸಿಕೊಂಡಿದ್ದಾರೆ.

ಕೇರಳದ ಕಾಸರಗೋಡಿನಲ್ಲಿ ನಡೆಯುತ್ತಿರುವ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಮುಂಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಧೋನಿ ಆಗಮಿಸಿದರು.

ಮಂಗಳೂರಿನಲ್ಲಿ ಧೋನಿಯನ್ನು ಬರ ಮಾಡಿಕೊಂಡ ಶಾಸಕ ಖಾದರ್ ಸಹೋದರ ಯು.ಟಿ.ಇಫ್ತಿಕಾರ್

ಭಾರೀ ಭದ್ರತೆಯೊಂದಿಗೆ ಕಾಸರಗೋಡಿಗೆ ತೆರಳಿದ ಎಂ.ಎಸ್.ಧೋನಿ

ಸ್ವತಃ ಕಾರು ಚಲಾಯಿಸಿಕೊಂಡು ಧೋನಿಯನ್ನು ಕರೆದುಕೊಂಡು ಹೋದ ಇಫ್ತಿಕಾರ್

ಕಾಸರಗೋಡಿನ ಬೇಕಲ್ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತೆರಳಿದ ಧೋನಿ
Published On - 2:56 pm, Sat, 7 January 23




