IND vs AUS: ಗಾಬಾ ಮೈದಾನದಲ್ಲಿ ಹೆಡ್ ಸಾಧನೆ ಶೂನ್ಯ, ಶೂನ್ಯ, ಶೂನ್ಯ..; ಟೀಂ ಇಂಡಿಯಾ ನಿರಾಳ

Travis Head: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಟ್ರಾವಿಸ್ ಹೆಡ್ ಭಾರತಕ್ಕೆ ದೊಡ್ಡ ತಲೆನೋವಾಗಿದ್ದಾರೆ. ಅಡಿಲೇಡ್‌ನಲ್ಲಿ ಶತಕ ಬಾರಿಸಿದ್ದ ಅವರು ಟೀಂ ಇಂಡಿಯಾ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಗಾಬಾ ಮೈದಾನದಲ್ಲಿ ಕಳೆದ ಮೂರು ಇನ್ನಿಂಗ್ಸ್‌ಗಳಲ್ಲಿ ಹೆಡ್ ಶೂನ್ಯಕ್ಕೆ ಔಟಾಗಿರುವುದು ರೋಹಿತ್​ ಪಡೆಗೆ ಕೊಂಚ ನಿರಾಳ ತಂದಿದೆ. ಆದಾಗ್ಯೂ ಹೆಡ್ ಅವರ ಒಟ್ಟಾರೆ ಫಾರ್ಮ್ ಭಾರತಕ್ಕೆ ಆತಂಕ ತಂದಿದೆ.

ಪೃಥ್ವಿಶಂಕರ
|

Updated on: Dec 12, 2024 | 5:27 PM

ಪ್ರಸ್ತುತ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್​ ಪಡೆಗೆ ದೊಡ್ಡ ತಲೆನೋವಾಗಿರುವ ಆಟಗಾರನೆಂದರೆ ಅದು ಟ್ರಾವಿಸ್ ಹೆಡ್. ಅಡಿಲೇಡ್‌ನಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ಹೆಡ್, ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾಗಿದ್ದರು. ಹೀಗಾಗಿ ಬ್ರಿಸ್ಬೇನ್ ಟೆಸ್ಟ್​ಗೂ ಮುನ್ನ ಹೆಡ್​ ಅವರ ಫಾರ್ಮ್​ ಟೀಂ ಇಂಡಿಯಾಕ್ಕೆ ಆತಂಕ ತಂದೊಡ್ಡಿದೆ.

1 / 7
ಅಡಿಲೇಡ್ ಟೆಸ್ಟ್​ನ ಮೊದಲ ಇನ್ನಿಂಗ್ಸ್‌ನಲ್ಲಿ ಹೆಡ್ 141 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಇದು ಟೀಂ ಇಂಡಿಯಾಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡಿತ್ತು. ಅಂತಿಮವಾಗಿ ಅಡಿಲೇಡ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಹೆಡ್ ಹೊರತುಪಡಿಸಿ ಆಸೀಸ್ ತಂಡದ ಉಳಿದ ಬ್ಯಾಟ್ಸ್‌ಮನ್​ಗಳು ಟೀಂ ಇಂಡಿಯಾದ ಮುಂದೆ ಮಂಕಾಗಿರುವುದು ಎರಡೂ ಟೆಸ್ಟ್​ಗಳಲ್ಲಿ ಸಾಭೀತಾಗಿದೆ.

2 / 7
ಹೀಗಾಗಿ ಮೂರನೇ ಟೆಸ್ಟ್‌ನಲ್ಲಿ ಹೆಡ್​ರನ್ನು ಕಟ್ಟಿಹಾಕಲು ಟೀಂ ಇಂಡಿಯಾ ಸಾಕಷ್ಟು ತಂತ್ರಗಾರಿಕೆಯನ್ನು ಹೆಣೆಯುತ್ತಿದೆ. ಇದರ ನಡುವೆ ಮೂರನೇ ಟೆಸ್ಟ್ ನಡೆಯುವ ಗಾಬಾ ಮೈದಾನದಲ್ಲಿ ಹೆಡ್ ಅವರ ಪ್ರದರ್ಶನ ರೋಹಿತ್ ಪಡೆಗೆ ಕೊಂಚ ನಿರಾಳತೆ ತಂದಿದೆ. ಏಕೆಂದರೆ ಈ ಮೈದಾನದಲ್ಲಿ ಆಡಿರುವ ಕಳೆದ 3 ಇನ್ನಿಂಗ್ಸ್​ಗಳಲ್ಲಿ ಹೆಡ್​ಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ.

3 / 7
ಮೇಲೆ ಹೇಳಿದಂತೆ ಟ್ರಾವಿಸ್ ಹೆಡ್ ಕಳೆದ 724 ದಿನಗಳಿಂದ ಗಾಬಾ ಮೈದಾನದಲ್ಲಿ ಖಾತೆ ತೆರೆದಿಲ್ಲ. ಈ ವರ್ಷದ ಜನವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹೆಡ್ ಇದೇ ಮೈದಾನದಲ್ಲಿ ಆಡಿದ್ದರು. ಆಶ್ಚರ್ಯಕರ ಸಂಗತಿಯೆಂದರೆ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಹೆಡ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಶೂನ್ಯದ ಸಾಧನೆ ಮಾಡಿದ್ದರು.

4 / 7
ಅಂದಹಾಗೆ, ಈ ಎರಡು ಇನ್ನಿಂಗ್ಸ್‌ಗೂ ಮುನ್ನ ಆಡಿದ್ದ ಒಂದು ಇನ್ನಿಂಗ್ಸ್‌ನಲ್ಲೂ ಹೆಡ್​ಗೆ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. 2022 ರಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಆ ಪಂದ್ಯದಲ್ಲೂ ಟ್ರಾವಿಸ್ ಹೆಡ್ ಸೊನ್ನೆ ಸುತ್ತಿದ್ದರು. ಅರ್ಥಾತ್, ಗಾಬಾದಲ್ಲಿ ಕಳೆದ ಮೂರು ಇನ್ನಿಂಗ್ಸ್‌ಗಳಲ್ಲಿ ಹೆಡ್ ಶೂನ್ಯಕ್ಕೆ ಔಟಾಗಿದ್ದಾರೆ.

5 / 7
ಆದರೆ ಬ್ರಿಸ್ಬೇನ್‌ನಲ್ಲಿ ಹೆಡ್ ಸತತ ಮೂರು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 0 ರನ್‌ಗೆ ಔಟಾಗಿರಬಹುದು. ಆದರೆ ಇದರ ಹೊರತಾಗಿಯೂ, ಈ ಮೈದಾನದಲ್ಲಿ ಅವರ ಸರಾಸರಿ 50 ಕ್ಕಿಂತ ಹೆಚ್ಚಿದೆ. ಗಾಬಾದಲ್ಲಿ ಇದುವರೆಗೆ 7 ಇನ್ನಿಂಗ್ಸ್​ಗಳನ್ನು ಆಡಿರುವ ಹೆಡ್ 50.28 ಸರಾಸರಿಯಲ್ಲಿ 352 ರನ್ ಗಳಿಸಿದ್ದಾರೆ. ಈ ಮೈದಾನದಲ್ಲಿ ಅವರು ಒಂದು ಶತಕ ಮತ್ತು 2 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.

6 / 7
ಪ್ರಸ್ತುತ ಟ್ರಾವಿಸ್ ಹೆಡ್ ಉತ್ತಮ ಫಾರ್ಮ್‌ನಲ್ಲಿರುವುದು ಭಾರತದ ಚಿಂತೆಯನ್ನು ಹೆಚ್ಚಿಸಿದೆ. ಒಂದು ವೇಳೆ ಹೆಡ್​ರನ್ನು ಬೇಗ ಕಟ್ಟಿಹಾಕಿದಿದ್ದರೆ ಟೀಂ ಇಂಡಿಯಾಗೆ ಗೆಲುವು ಕಷ್ಟವಾಗಲಿದೆ. ಹೆಡ್‌ ಅವರ ಇನ್ನೊಂದು ವಿಶೇಷತೆ ಏನೆಂದರೆ, ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದಾಗಲೆಲ್ಲಾ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿದೆ. ಹೀಗಾಗಿ ಗಾಬಾದಲ್ಲಿ ಹೆಡ್ ಶತಕ ಸಿಡಿದಂತೆ ಭಾರತದ ವೇಗಿಗಳು ತಡೆಯಬೇಕಿದೆ.

7 / 7
Follow us
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ

ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ

ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್

Video: ಹೆದ್ದಾರಿಯಲ್ಲಿ ವಾಹನಗಳ ಮೇಲೆ ಅಪ್ಪಳಿಸಿದ ವಿಮಾನ

ಅಪಘಾತದ ಬಳಿಕ ಬ್ಯಾಗ್​ ಎತ್ತಿಕೊಂಡು ಕಿಟಕಿಯಿಂದ ಓಡಿ ಹೋದ ಡ್ರೈವರ್

Pushpa 2 Press Meet Live: ಅಭಿಮಾನಿಗಳಿಗೆ ‘ಪುಷ್ಪ’ರಾಜ್ ಧನ್ಯವಾದ

ನಾವು ತಯಾರಿಸಿದ ಮಂತ್ರಿಗಳ ಲಿಸ್ಟ್​ನಿಂದ ನಮ್ಮ ಹೆಸರೇ ಗಾಯಬ್!: ಶಿವಕುಮಾರ್

ಶಾಂತಿಯುತ ಪ್ರತಿಭಟನೆಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕರೆ

ಗದಗದಲ್ಲಿ ಪಂಚಮಸಾಲಿ ಹೋರಾಟ: ಟಯರ್​ಗೆ ಬೆಂಕಿ ಹಚ್ಚುವ ವೇಳೆ ಕಾಲಿಗೆ ಬೆಂಕಿ

ಲಾಠಿಚಾರ್ಜ್ ಮತ್ತು ಮೀಸಲಾತಿ ಪ್ರತಿಭಟನೆ ನಡುವೆ ಸಂಬಂಧ ಇಲ್ಲ: ಪರಮೇಶ್ವರ್