ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯಗಳು ಇಂದಿಗೆ ಅಂತ್ಯಗೊಂಡಿದ್ದು, ಈ ಸುತ್ತಿನಿಂದ 4 ತಂಡಗಳು ಸೂಪರ್ 12 ಸುತ್ತಿಗೆ ಎಂಟ್ರಿಕೊಟ್ಟಿವೆ. ಇದರಲ್ಲಿ ಎ ಗುಂಪಿನಿಂದ ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್ ಅರ್ಹತೆ ಪಡೆದಿದ್ದರೆ, ಬಿ ಗುಂಪಿನಿಂದ ಜಿಂಬಾಬ್ವೆ ಹಾಗೂ ಐರ್ಲೆಂಡ್ ಸೂಪರ್ 12 ಸುತ್ತಿಗೆ ಅರ್ಹತೆ ಪಡೆದಿವೆ.
ಎ ಗುಂಪಿನಿಂದ ಶ್ರೀಲಂಕಾ ತಂಡ ಟೇಬಲ್ ಟಾಪರ್ ಆಗಿದ್ದು, ಈ ತಂಡ ಆಡಿರುವ 3 ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿದೆ. ಇದರ ನೆಟ್ ರನ್ರೇಟ್ +0.667 ಆಗಿದೆ. ಇದರೊಂದಿಗೆ ಈ ತಂಡ ಸೂಪರ್ 12 ಸುತ್ತಿನಲ್ಲಿ ಗುಂಪು 1 ರಲ್ಲಿ ಸ್ಥಾನ ಪಡೆದಿದೆ.
ಹಾಗೆಯೇ ನೆದರ್ಲೆಂಡ್ಸ್ ತಂಡ ಕೂಡ ಎ ಗುಂಪಿನ ರನ್ನರ್ ಅಪ್ ತಂಡವಾಗಿ ಆಯ್ಕೆಯಾಗಿದ್ದು, ಈ ತಂಡ ಆಡಿರುವ 3 ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದೆ. ಆದರೆ ಈ ತಂಡದ ನೆಟ್ ರನ್ರೇಟ್ ಲಂಕಾ ತಂಡಕ್ಕಿಂತ ಕಡಿಮೆ ಇದ್ದು -0.162 ಆಗಿದೆ. ಇದರೊಂದಿಗೆ ಈ ತಂಡ ಸೂಪರ್ 12 ಸುತ್ತಿನಲ್ಲಿ ಗುಂಪು 2 ರಲ್ಲಿ ಸ್ಥಾನ ಪಡೆದಿದೆ.
ಬಿ ಗುಂಪಿನಿಂದ ಟೇಬಲ್ ಟಾಪರ್ ಆಗಿ ಹೊರಹೊಮ್ಮಿರುವ ಜಿಂಬಾಬ್ವೆ ತಂಡ ಆಡಿರುವ 3 ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ಬೀಗಿದೆ ಹಾಗೆಯೇ ಇದರ ನೆಟ್ ರನ್ರೇಟ್ +0.200 ಆಗಿದೆ. ಇದರೊಂದಿಗೆ ಈ ತಂಡ ಸೂಪರ್ 12 ಸುತ್ತಿನಲ್ಲಿ ಗುಂಪು 2 ರಲ್ಲಿ ಸ್ಥಾನ ಪಡೆದಿದೆ.
ಬಿ ಗುಂಪಿನಿಂದ ರನರ್ ಅಪ್ ಆಗಿನ ಆಯ್ಕೆಯಾಗಿರುವ ಐರ್ಲೆಂಡ್ ತಂಡ ಕೂಡ ಇದೇ ರೀತಿಯ ಫಲಿತಾಂಶ ಪಂಡಿದ್ದರೂ, ಅದರ ನೆಟ್ ರನ್-ರೇಟ್ +0.105 ಆಗಿದೆ. ಇದರೊಂದಿಗೆ ಈ ತಂಡ ಸೂಪರ್ 12 ಸುತ್ತಿನಲ್ಲಿ ಗುಂಪು 1 ರಲ್ಲಿ ಸ್ಥಾನ ಪಡೆದಿದೆ.
Published On - 6:00 pm, Fri, 21 October 22