
ಇಂಗ್ಲೆಂಡ್ ಪ್ರವಾಸದಲ್ಲಿ ಸತತ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕರೂ 15 ವರ್ಷದ ವೈಭವ್ ಸೂರ್ಯವಂಶಿಗೆ ನಿರೀಕ್ಷೆಗೆ ತಕ್ಕಂತಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ವೈಭವ್ ಸೂರ್ಯವಂಶಿಯನ್ನು ಟೀಕಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ವೈಭವ್ ತನ್ನ ಬ್ಯಾಟಿಂಗ್ ಅಬ್ಬರದಿಂದ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಮೈದಾನದಲ್ಲೇ ಮತ್ತೊಮ್ಮೆ ಅಬ್ಬರಿಸಿ ಟೀಕಾಕಾರರಿಗೆ ಉತ್ತರಿಸಲು ಸಜ್ಜಾಗಿದ್ದಾರೆ(PC-PTI).

ವಾಸ್ತವವಾಗಿ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ಪ್ರವಾಸದಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗಲಿಲ್ಲ. ಮೊದಲ ಪಂದ್ಯದಲ್ಲಿ ಕೇವಲ 14 ರನ್ಗಳಿಗೆ ಸುಸ್ತಾಗಿದ್ದ ವೈಭವ್ ಎರಡನೇ ಟಿ20 ಪಂದ್ಯದಲ್ಲಿ 13 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡಿದ್ದರು. ಮೂರನೇ ಪಂದ್ಯದಲ್ಲೂ ಫಾರ್ಮ್ ಕಂಡುಕೊಳ್ಳದ ವೈಭವ್ ಆಟ 15 ರನ್ಗಳಿಗೆ ಅಂತ್ಯವಾಗಿತ್ತು(PC-PTI).

ಇದೀಗ ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ20 ಸರಣಿಯು ಜುಲೈ 23 ರ ಗುರುವಾರ ಹರಾರೆಯಲ್ಲಿ ಆರಂಭವಾಗಲಿದೆ. ಈ ಸರಣಿಯಲ್ಲಿ ಮೂರು ಪಂದ್ಯಗಳು ನಡೆಯಲಿದ್ದು, ಈ ಮೂರು ಪಂದ್ಯಗಳಿಗೂ ಹರಾರೆ ಆತಿಥ್ಯವಹಿಸುತ್ತಿದೆ. ಈ ಮೈದಾನ ಭಾರತದ ವೈಭವ್ ಸೂರ್ಯವಂಶಿಗೆ ಬಲು ಅದೃಷ್ಟದ ಮೈದಾನವಾಗಿದೆ. ಇದಕ್ಕೆ ಕಾರಣ ಕೆಲವೇ ತಿಂಗಳುಗಳ ಹಿಂದೆ ನಡೆದಿದ್ದ ಅಂಡರ್-19 ವಿಶ್ವಕಪ್ ಫೈನಲ್(PC-PTI).

ವಾಸ್ತವವಾಗಿ ಕಳೆದ ಫೆಬ್ರವರಿಯಲ್ಲಿ ಇದೇ ಮೈದಾನದಲ್ಲಿ ವೈಭವ್ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಕೇವಲ 80 ಎಸೆತಗಳಲ್ಲಿ 175 ರನ್ ಗಳಿಸಿ ದಾಖಲೆಯ ಇನ್ನಿಂಗ್ಸ್ ಆಡಿದ್ದರು. ಅವರ ಈ ಇನ್ನಿಂಗ್ಸ್ನಲ್ಲಿ 15 ಸಿಕ್ಸರ್‌ಗಳು ಮತ್ತು 15 ಬೌಂಡರಿಗಳು ಅಂದರೆ ಒಟ್ಟು 30 ಬೌಂಡರಿಗಳು ಸೇರಿದ್ದವು. ಇದೀಗ ಅದೇ ರೀತಿಯ ಆಕ್ರಮಣಕಾರಿ ಇನ್ನಿಂಗ್ಸ್‌ನೊಂದಿಗೆ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸುವ ಆಶಯವನ್ನು ವೈಭವ್ ಹೊಂದಿದ್ದಾರೆ(PC-PTI).

ಇದೀಗ ಟಿ20 ಸರಣಿ ಆರಂಭಕ್ಕೂ ಮುನ್ನ ಬಿಸಿಸಿಐ ಮಾಧ್ಯಮ ತಂಡಕ್ಕೆ ನೀಡಿದ ಸಂದರ್ಶನದಲ್ಲಿ ವೈಭವ್, ಹರಾರೆಗೆ ಮರಳಿದ್ದಕ್ಕೆ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ. ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯವನ್ನು ನೆನಪಿಸಿಕೊಂಡ ವೈಭವ್, ‘ಹರಾರೆ ನನಗೆ ಅತ್ಯಂತ ಸ್ಮರಣೀಯ ಮೈದಾನ. ನಾಲ್ಕು ತಿಂಗಳ ಹಿಂದೆ ನಾವು ಆಡಿದ್ದು ಅಂಡರ್-19 ವಿಶ್ವಕಪ್ ಗೆದ್ದಿದ್ದೆವು. ಭಾರತಕ್ಕಾಗಿ ಆಡುವುದು ಎಲ್ಲರ ಕನಸು, ಮತ್ತು ನಾವು ಇತಿಹಾಸ ನಿರ್ಮಿಸಿದ ಇಂತಹ ಸುಂದರ ಮೈದಾನದಲ್ಲಿ ಮತ್ತೆ ಆಡುವುದು ವಿಶೇಷ ಅನುಭವ. ನಾನು ಅದನ್ನು ತುಂಬಾ ಆನಂದಿಸುತ್ತೇನೆ’ ಎಂದಿದ್ದಾರೆ(PC-PTI).