100 ಸಿಕ್ಸರ್​ಗಳೊಂದಿಗೆ ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ

Updated on: Feb 07, 2026 | 8:09 AM

Vaibhav Sooryavanshi Records: ಅಂಡರ್-19 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಕೇವಲ 80 ಎಸೆತಗಳಲ್ಲಿ 15 ಫೋರ್ ಹಾಗೂ 15 ಸಿಕ್ಸ್​ಗಳೊಂದಿಗೆ 175 ರನ್ ಸಿಡಿಸಿ ವೈಭವ್ ಸೂರ್ಯವಂಶಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ದಾಖಲೆಗಳ ಪಟ್ಟಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು 100 ಸಿಕ್ಸರ್​ಗಳನ್ನು ಪೂರೈಸಿರುವುದು.

1 / 6
ಯೂತ್ ಒಡಿಐ ಕ್ರಿಕೆಟ್​ನಲ್ಲಿ ವೈಭವ್ ಸೂರ್ಯವಂಶಿಯ (Vaibhav Suryavanshi) ಸಿಡಿಲಬ್ಬರ ಮುಂದುವರೆದಿದೆ. ಈ ಹಲವು ದಾಖಲೆ ನಿರ್ಮಿಸಿದ್ದ ವೈಭವ್ ಇದೀಗ ಒಂದೇ ಪಂದ್ಯದ ಮೂಲಕ ಭರ್ಜರಿ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಲ್ಲೂ ಸಿಕ್ಸರ್​ಗಳ ಮೂಲಕವೇ ಹೊಸ ಇತಿಹಾಸವನ್ನು ಸಹ ನಿರ್ಮಿಸಿದ್ದಾರೆ.

2 / 6
ಹರಾರೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂಡರ್-19 ವಿಶ್ವಕಪ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 175 ರನ್​ ಚಚ್ಚಿದ್ದರು. ಈ ವೇಳೆ ಅವರ ಬ್ಯಾಟ್​ನಿಂದ ಸಿಡಿದ ಸಿಕ್ಸರ್​ಗಳ ಸಂಖ್ಯೆ ಬರೋಬ್ಬರಿ 15.

3 / 6
ಈ 15 ಸಿಕ್ಸರ್​ಗಳೊಂದಿಗೆ ಐಸಿಸಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಂಡರ್​-19 ವಿಶ್ವಕಪ್​ ಆವೃತ್ತಿಯಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

4 / 6
ಇದಕ್ಕೂ ಮುನ್ನ ಈ ದಾಖಲೆ ಸೌತ್ ಆಫ್ರಿಕಾದ ಡೆವಾಲ್ಡ್​ ಬ್ರೆವಿಸ್ ಹೆಸರಿನಲ್ಲಿತ್ತು. 2022ರ ಅಂಡರ್-19 ವಿಶ್ವಕಪ್​ನಲ್ಲಿ ಬ್ರೆವಿಸ್ 18 ಸಿಕ್ಸ್ ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು. ಆದರೆ ಈ ಬಾರಿ ವೈಭವ್ ಸೂರ್ಯವಂಶಿ ಸಿಡಿಸಿರುವುದು ಬರೋಬ್ಬರಿ 30 ಸಿಕ್ಸರ್​ಗಳು. ಈ ಮೂಲಕ ಅಂಡರ್-19 ವಿಶ್ವಕಪ್ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

5 / 6
ಅಷ್ಟೇ ಅಲ್ಲದೆ ಅತೀ ಕಡಿಮೆ ಇನಿಂಗ್ಸ್​ಗಳ ಮೂಲಕ ಯೂತ್ ಒಡಿಐ ಕ್ರಿಕೆಟ್​ನಲ್ಲಿ 100 ಸಿಕ್ಸ್ ಪೂರೈಸಿದ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ವೈಭವ್ ಸೂರ್ಯವಂಶಿ ಕೇವಲ 25 ಇನಿಂಗ್ಸ್​ಗಳ ಮೂಲಕ 100 ಸಿಕ್ಸರ್​ಗಳನ್ನು ಪೂರೈಸಿದ್ದಾರೆ.

6 / 6
ವಿಶೇಷ ಎಂದರೆ ವೈಭವ್ ಸೂರ್ಯವಂಶಿಯನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್ 25 ಇನಿಂಗ್ಸ್​ಗಳಲ್ಲಿ 100 ಸಿಕ್ಸ್ ಬಾರಿಸಿಲ್ಲ. ಇದಕ್ಕೂ ಮುನ್ನ 25 ಇನಿಂಗ್ಸ್​ಗಳಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆ ಬಾಂಗ್ಳಾದೇಶ್​ನ ಝವಾದ್ ಅಬ್ರಾರ್ ಹೆಸರಿನಲ್ಲಿತ್ತು. ಝವಾದ್ 25 ಇನಿಂಗ್ಸ್​ಗಳಲ್ಲಿ 55 ಸಿಕ್ಸ್​ ಬಾರಿಸಿದ್ದರು. ಇದೀಗ ಇಪ್ಪತ್ತೈದು ಇನಿಂಗ್ಸ್​ಗಳ ಮೂಲಕ ವೈಭವ್​ ಸೂರ್ಯವಂಶಿ ಸಿಕ್ಸರ್​ಗಳ ಶತಕ ಪೂರೈಸಿರುವುದು ವಿಶೇಷ.