AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಏಕದಿನ ಕ್ರಿಕೆಟ್​ಗೆ ಕೊಹ್ಲಿ-ರೋಹಿತ್ ವಿದಾಯ?: ಕೇಳಿಬರುತ್ತಿವೆ ಹೀಗೊಂದು ಮಾತು

Rohit Sharma: ಭಾರತ ಕ್ರಿಕೆಟ್ ತಂಡ 2024 ವರ್ಷವನ್ನು ಟೆಸ್ಟ್ ಪಂದ್ಯದೊಂದಿಗೆ ಆರಂಭಿಸಲಿದೆ. ಈ ಬಾರಿ ಟೀಮ್ ಇಂಡಿಯಾ ಅತಿ ಹೆಚ್ಚು ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನು ಆಡಲಿದ್ದು, ಏಕದಿನ ಪಂದ್ಯ ಇರುವುದು ಕೇವಲ ಮೂರು ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಸ್ವರೂಪದಲ್ಲಿ ಮತ್ತೆ ಕಾಣಿಸುವುದು ಅನುಮಾನ ಎನ್ನಲಾಗಿದೆ.

Vinay Bhat
|

Updated on: Jan 02, 2024 | 7:37 AM

Share
ನವೆಂಬರ್ 19 ರ ದಿನಾಂಕವನ್ನು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂದು 2023ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ಟೀಮ್ ಇಂಡಿಯಾದ ಕನಸು ಭಗ್ನಗೊಂಡಿತು. ಆದರೆ ಈಗ 2024 ರ ಸರದಿ. ಹೊಸ ಅಧ್ಯಾಯದೊಂದಿಗೆ ಭಾರತ 50 ಓವರ್​ಗಳ ಫಾರ್ಮೆಟ್ ಅನ್ನು ಮುಂದುವರೆಸಬೇಕಿದೆ. ಆದರೆ, ಇದಕ್ಕೂ ಮುನ್ನ ಶಾಕಿಂಗ್ ವಿಚಾರವೊಂದು ಹರಿದಾಡುತ್ತಿದೆ.

1 / 6
2024ರಲ್ಲಿ ಟೀಮ್ ಇಂಡಿಯಾ ಕೇವಲ ಮೂರು ಏಕದಿನ ಪಂದ್ಯಗಳನ್ನಷ್ಟೇ ಆಡಲಿದೆ. ಅಂದರೆ ಕಳೆದ ವರ್ಷ ಅತಿ ಹೆಚ್ಚು ಓಡಿಐ ಪಂದ್ಯಗಳನ್ನು ಆಡಿದ ಭಾರತ ಈ ವರ್ಷ ಆಡುವುದು ಕೇವಲ ಮೂರು ಪಂದ್ಯ. ಟೀಮ್ ಇಂಡಿಯಾ 2024ರ ವರ್ಷವನ್ನು ಟೆಸ್ಟ್ ಪಂದ್ಯದೊಂದಿಗೆ ಆರಂಭಿಸುತ್ತಿದೆ. ಜೊತೆಗೆ ವರ್ಷವಿಡೀ ಸುಮಾರು 15 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

2 / 6
ಭಾರತಕ್ಕೆ ಏಕದಿನ ಪಂದ್ಯಗಳಿರುವುದು ಕೇವಲ 3 ಮಾತ್ರ. ಹೀಗಿರುವಾಗ ಟೀಮ್ ಇಂಡಿಯಾದ ಹಿರಿಯ ಆಟಗಾರರು ಈ ಪಂದ್ಯಗಳಲ್ಲಿ ಆಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. 2024ರಲ್ಲಿ ನಡೆಯಲಿರುವ ಭಾರತ ತಂಡದ ಮೂರು ODI ಪಂದ್ಯಗಳು ಜುಲೈ-ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಅವರ ನೆಲದಲ್ಲಿ ನಡೆಯಲಿದೆ.

3 / 6
ಮೂರು ಏಕದಿನ ಹೊರತುಪಡಿಸಿ ಭಾರತ ತಂಡ ವರ್ಷವಿಡೀ ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನಷ್ಟೇ ಆಡಲಿದೆ. ಈ ವರ್ಷ ಐಸಿಸಿ ಟಿ20 ವಿಶ್ವಕಪ್ ನಡೆಯಲಿರುವ ಕಾರಣ ಭಾರತ ತಂಡವು ಈ ಸ್ವರೂಪದ ಮೇಲೆ ಕೇಂದ್ರೀಕರಿಸುತ್ತದೆ. ಹೀಗಿರುವಾಗ ಕಳೆದ ಒಂದೂವರೆ ದಶಕದಿಂದ ಏಕದಿನ ಕ್ರಿಕೆಟ್ ಅನ್ನು ಆಳಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಗ್ಗೆ ನಿವೃತ್ತಿಯ ಮಾತು ಕೇಳಿಬರುತ್ತಿದೆ.

4 / 6
ಕೊಹ್ಲಿ-ರೋಹಿತ್ ಈ ಹಿಂದೆಯೂ ಕಡಿಮೆ ಏಕದಿನ ಸರಣಿಗಳನ್ನು ಆಡುತ್ತಿದ್ದರು. ಕಳೆದ ವರ್ಷ ಏಕದಿನ ವಿಶ್ವಕಪ್ ಇದ್ದ ಕಾರಣ ಇವರು ಈ ಮಾದರಿಯಲ್ಲಿ ಆಡಿದ್ದರು. ಆದರೆ ಈ ವರ್ಷ, ಕೇವಲ ಮೂರು ಏಕದಿನ ಪಂದ್ಯಗಳು ಇರುವುದರಿಂದ, ಇಬ್ಬರೂ ಆಟಗಾರರು ಈ ವರ್ಷ ಕೊನೆಯ ಬಾರಿಗೆ ಏಕದಿನ ಮಾದರಿಯಲ್ಲಿ ಆಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ.

5 / 6
ರೋಹಿತ್ ಶರ್ಮಾಗೆ ಈಗ 36 ವರ್ಷ ಮತ್ತು ವಿರಾಟ್ ಕೊಹ್ಲಿಗೆ 35 ವರ್ಷ, ಇಬ್ಬರ ಗಮನವು ಈ ವರ್ಷದ ಟಿ20 ವಿಶ್ವಕಪ್ ಮತ್ತು ಉಳಿದ 15 ಟೆಸ್ಟ್ ಪಂದ್ಯಗಳ ಮೇಲೆ ಕೇಂದ್ರೀಕೃತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ 3-ಪಂದ್ಯಗಳ ODI ಸ್ವರೂಪದ ಮೇಲೆ ಕೇಂದ್ರೀಕರಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಏಕದಿನ ವಿಶ್ವಕಪ್​ ಫೈನಲ್ ಆಡಿರುವುದೇ ಇವರ ಕೊನೆಯ ಪಂದ್ಯ ಆಗಲಿದೆ ಎಂದು ಹೇಳಲಾಗುತ್ತಿದೆ.

6 / 6
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ

‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ

ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ

ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್

ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್

7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು

ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?

ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು

ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ

ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ