AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿದ ಕಿಂಗ್ ಕೊಹ್ಲಿ

Virat Kohli - Sachin Tendulkar: ಈ ಶತಕದೊಂದಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಕಿಂಗ್ ಕೊಹ್ಲಿ ಮುರಿದಿರುವುದು ವಿಶೇಷ.

TV9 Web
| Edited By: |

Updated on: Jan 10, 2023 | 9:29 PM

Share
ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದ ಕೊಹ್ಲಿ 80 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ 87 ಎಸೆತಗಳಲ್ಲಿ 12 ಫೋರ್​ ಹಾಗೂ 1 ಸಿಕ್ಸ್​ನೊಂದಿಗೆ 113 ರನ್​ ಬಾರಿಸಿದರು. ಈ ಶತಕದೊಂದಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಕಿಂಗ್ ಕೊಹ್ಲಿ  ಮುರಿದಿರುವುದು ವಿಶೇಷ.

1 / 5
ಹೌದು, ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್​ ಅತ್ಯಧಿಕ ಶತಕ ಬಾರಿಸಿದ ವಿಶ್ವ ದಾಖಲೆ ಸಚಿನ್ ತೆಂಡೂಲ್ಕರ್​ ಹೆಸರಿನಲ್ಲಿತ್ತು. ಕ್ರಿಕೆಟ್​ ದೇವರು ಲಂಕಾ ವಿರುದ್ಧವೇ 8 ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದರು. ಇದೀಗ ಈ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

2 / 5
ಗುವಹಾಟಿಯಲ್ಲಿ ಶ್ರೀಲಂಕಾ ವಿರುದ್ಧ ಶತಕ ಪೂರೈಸುವುದರೊಂದಿಗೆ ಶ್ರೀಲಂಕಾ ವಿರುದ್ಧ ಅತ್ಯಧಿಕ ಸೆಂಚುರಿ ಸಿಡಿಸಿದ ವಿಶೇಷ ವಿಶ್ವ ದಾಖಲೆ ಕಿಂಗ್ ಕೊಹ್ಲಿ ಪಾಲಾಗಿದೆ. ಕೊಹ್ಲಿ ಇದುವರೆಗೆ ಲಂಕಾ ವಿರುದ್ಧ 9 ಶತಕ ಬಾರಿಸಿದ್ದಾರೆ. ಈ ಮೂಲಕ ಸಿಂಹಳೀಯರ ವಿರುದ್ಧದ ಶತಕದ ಸರದಾರನಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ.

3 / 5
ಇದಲ್ಲದೆ, ಭಾರತದಲ್ಲಿ ಅತ್ಯಧಿಕ ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನೂ ಕೂಡ ಕೊಹ್ಲಿ ಸರಿಗಟ್ಟಿದ್ದರು. ಸಚಿನ್ ತವರಿನಲ್ಲಿ 164  ಏಕದಿನ ಪಂದ್ಯಗಳಲ್ಲಿ 20 ಶತಕಗಳನ್ನು ಸಿಡಿಸಿದ್ದರು.

4 / 5
ಇದೀಗ ಶ್ರೀಲಂಕಾ ವಿರುದ್ಧದ ಶತಕದೊಂದಿಗೆ ಕೊಹ್ಲಿ ಕೂಡ ಭಾರತದ ಪಿಚ್​ನಲ್ಲಿ 20 ಶತಕ ಪೂರೈಸಿದ್ದಾರೆ. ವಿಶೇಷ ಎಂದರೆ ಕೊಹ್ಲಿ ತವರಿನಲ್ಲಿ 20 ಶತಕ ಬಾರಿಸಲು ತೆಗೆದುಕೊಂಡಿರುವುದು ಕೇವಲ 102 ಇನಿಂಗ್ಸ್ ಮಾತ್ರ. ಇದರೊಂದಿಗೆ ತವರಿನ ಶತಕದ ಸರದಾರ ಎಂಬ ಮಾಸ್ಟರ್ ಬ್ಲಾಸ್ಟರ್ ಅವರ ಮತ್ತೊಂದು ದಾಖಲೆಯನ್ನು ಕಿಂಗ್ ಕೊಹ್ಲಿ ಸರಿಗಟ್ಟಿದ್ದಾರೆ.

5 / 5