IPL 2026: ಆರೆಂಜ್ ಕ್ಯಾಪ್ ರೇಸ್​ನಿಂದ ವಿರಾಟ್ ಕೊಹ್ಲಿ ಔಟ್!

Updated on: May 31, 2026 | 9:02 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಯಾರು? ಈ ಪ್ರಶ್ನೆಗೆ ಉತ್ತರ ಐಪಿಎಲ್ 2026ರ ಫೈನಲ್ ಪಂದ್ಯದ ವೇಳೆ ದಕ್ಕಲಿದೆ. ಏಕೆಂದರೆ ಐಪಿಎಲ್ ಆರೆಂಜ್ ಕ್ಯಾಪ್​ ರೇಸ್​ನಲ್ಲಿ ಮೂವರು ಆಟಗಾರರಿದ್ದು, ಈ ಆಟಗಾರರ ನಡುವೆ ಗರಿಷ್ಠ ಸ್ಕೋರರ್​ ಪಟ್ಟಕ್ಕಾಗಿ ಪೈಪೋಟಿ ಮುಂದುವರೆದಿದೆ.

1 / 7
IPL 2026: ಐಪಿಎಲ್​ 2026ರ ಆರೆಂಜ್ ಕ್ಯಾಪ್ ರೇಸ್​ನಿಂದ ವಿರಾಟ್ ಕೊಹ್ಲಿ (Virat Kohli)  ಹೊರಬಿದ್ದಿದ್ದಾರೆ. ಅದು ಕೂಡ ಫೈನಲ್ ಪಂದ್ಯಕ್ಕೂ ಮುನ್ನ!, ಅಂದರೆ ಕೊನೆಯ ಮ್ಯಾಚ್​ನಲ್ಲಿ ಕೊಹ್ಲಿ ಆರ್ಭಟಿಸಿದರೂ ಆರೆಂಜ್ ಕ್ಯಾಪ್ ದಕ್ಕಿಸಿಕೊಳ್ಳುವುದು ಕಷ್ಟಸಾಧ್ಯ. ಏಕೆಂದರೆ ವಿರಾಟ್ ಕೊಹ್ಲಿ ಬರೋಬ್ಬರಿ 176 ರನ್​ಗಳಿಂದ ಹಿಂದಿದ್ದಾರೆ.  (PC: IPL)

2 / 7
ಈ ಬಾರಿಯ ಐಪಿಎಲ್​ನಲ್ಲಿ 15 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ಈವರೆಗೆ 365 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 600 ರನ್​ಗಳು. ಇನ್ನು ಫೈನಲ್ ಮ್ಯಾಚ್​ನಲ್ಲಿ ಪ್ರಚಂಡ ಪ್ರದರ್ಶನ ನೀಡಿದರೂ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. (PC: IPL)

3 / 7
ಏಕೆಂದರೆ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್​ನ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಬೇಕಿದ್ದರೆ ಬರೋಬ್ಬರಿ 177 ರನ್​ ಕಲೆಹಾಕಬೇಕು. ಅಂದರೆ ಪ್ರಸ್ತುತ ಅಗ್ರಸ್ಥಾನದಲ್ಲಿರುವ ವೈಭವ್ ಸೂರ್ಯವಂಶಿಗಿಂತ ಕೊಹ್ಲಿ ಬರೋಬ್ಬರಿ 176 ರನ್​ಗಳಿಂದ ಹಿಂದೆ ಉಳಿದಿದ್ದಾರೆ. ಅದರಂತೆ ಇದೀಗ ಆರೆಂಜ್ ಕ್ಯಾಪ್ ರೇಸ್​ನಲ್ಲಿರುವುದು ಕೇವಲ ಮೂವರು ಆಟಗಾರರು ಮಾತ್ರ. ಅವರೆಂದರೆ... (PC: IPL)

4 / 7
1- ವೈಭವ್ ಸೂರ್ಯವಂಶಿ: ರಾಜಸ್ಥಾನ್ ರಾಯಲ್ಸ್ ತಂಡದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್ ರೇಸ್​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈವರೆಗೆ 16 ಇನಿಂಗ್ಸ್ ಆಡಿರುವ ವೈಭವ್ 1 ಶತಕ ಹಾಗೂ 5 ಅರ್ಧಶತಕಗಳೊಂದಿಗೆ  337 ಎಸೆತಗಳಲ್ಲಿ ಒಟ್ಟು 776  ರನ್​ ಬಾರಿಸಿದ್ದಾರೆ.  (PC: IPL)

5 / 7
2- ಶುಭ್​ಮನ್ ಗಿಲ್: ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಕೂಡ ಆರೆಂಜ್ ಕ್ಯಾಪ್ ರೇಸ್​ನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಈವರೆಗೆ 15 ಇನಿಂಗ್ಸ್ ಆಡಿರುವ ಶುಭ್​ಮನ್ ಗಿಲ್ 1 ಶತಕ ಹಾಗೂ 6 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ 441 ಎಸೆತಗಳಲ್ಲಿ  722 ರನ್ ಕಲೆಹಾಕಿದ್ದಾರೆ. (PC: IPL)

6 / 7
3- ಸಾಯಿ ಸುದರ್ಶನ್: ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ದಾಂಡಿಗ ಸಾಯಿ ಸುದರ್ಶನ್ ಆರೆಂಜ್ ಕ್ಯಾಪ್ ರೇಸ್​ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಈವರೆಗೆ 16 ಇನಿಂಗ್ಸ್ ಆಡಿರುವ ಸಾಯಿ ಸುದರ್ಶನ್ 445 ಎಸೆತಗಳನ್ನು ಎದುರಿಸಿ ಒಟ್ಟು 710 ರನ್​ ಕಲೆಹಾಕಿದ್ದಾರೆ. (PC: IPL)

7 / 7
 ಅಂದರೆ ಆರ್​ಸಿಬಿ ವಿರುದ್ಧದ ಫೈನಲ್ ಪಂದ್ಯದಲ್ಲಿ ಶುಭ್​ಮನ್ ಗಿಲ್ 55 ರನ್​ಗಳಿಸಿದರೆ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳಬಹುದು. ಇದೇ ವೇಳೆ ಸಾಯಿ ಸುದರ್ಶನ್ 67 ರನ್ ಬಾರಿಸಿದರೆ ವೈಭವ್​ನ ಹಿಂದಿಕ್ಕಿ ಅಗ್ರಸ್ಥಾನಕ್ಕೇರಬಹುದು. ಹೀಗಾಗಿ ಈ ಬಾರಿ ಆರೆಂಜ್ ಕ್ಯಾಪ್ ಯಾರ ಪಾಲಾಗಲಿದೆ ಎಂಬುದು ಗುಜರಾತ್ ಟೈಟಾನ್ಸ್ ತಂಡದ ಬ್ಯಾಟಿಂಗ್ ಬಳಿಕ ನಿರ್ಧಾರವಾಗಲಿದೆ. (PC: IPL)

Published On - 8:58 am, Sun, 31 May 26

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us