IND vs ENG, ICC World Cup: ಸೊನ್ನೆ ಸುತ್ತಿದ ಕೋಪದಲ್ಲಿ ಡ್ರೆಸ್ಸಿಂಗ್ ರೂಮ್​ಗೆ ತೆರಳಿ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ

Virat Kohli Angry, India vs England ICC Cricket World Cup: ವಿಶ್ವಕಪ್​ನಲ್ಲಿ ಭರ್ಜರಿ ಫಾರ್ಮ್​ನಲ್ಲಿದ್ದ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಮಾತ್ರ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ತಮ್ಮ ಕಳಪೆ ಬ್ಯಾಟಿಂಗ್​ನಿಂದ ಸ್ವತಃ ಕೊಹ್ಲಿಯೇ ಕೋಪಗೊಂಡರು. ಡಕ್ ಔಟ್ ಆದ ನಂತರ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಏನು ಮಾಡಿದರು ನೋಡಿ.

|

Updated on: Oct 30, 2023 | 10:42 AM

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 100 ರನ್​ಗಳ ಅಮೋಘ ಗೆಲುವು ಕಂಡಿತು. ಬ್ಯಾಟರ್​ಗಳ ವೈಫಲ್ಯದ ನಡುವೆಯೂ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅವರ ಆಟದ ನೆರವಿನಿಂದ ಭಾರತ 229 ರನ್ ಕಲೆಹಾಕಿದರೆ, ಇಂಗ್ಲೆಂಡ್ 129 ರನ್​ಗಳಿಗೆ ಆಲೌಟ್ ಆಯಿತು.

1 / 7
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ದಿಢೀರನೇ ವಿಕೆಟ್ ಕಳೆದುಕೊಂಡಿತು. 40 ರನ್ ಆಗುವ ಹೊತ್ತಿಗೆ ಪ್ರಮುಖ 3 ವಿಕೆಟ್​ಗಳು ಬಿದ್ದವು. ಅದರಲ್ಲೂ ಭರ್ಜರಿ ಫಾರ್ಮ್​ನಲ್ಲಿದ್ದ ವಿರಾಟ್ ಕೊಹ್ಲಿ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ತಮ್ಮ ಕಳಪೆ ಬ್ಯಾಟಿಂಗ್​ನಿಂದ ಸ್ವತಃ ಕೊಹ್ಲಿಯೇ ಕೋಪಗೊಂಡರು.

2 / 7
ಇಂಗ್ಲೆಂಡ್ ವಿರುದ್ಧ ಡಕ್ ಔಟ್ ಆದ ನಂತರ ಕೋಪಗೊಂಡ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಸೋಫಾಗೆ ಗುದ್ದಿದ್ದಾರೆ. ಒಂಬತ್ತು ಎಸೆತಗಳಲ್ಲಿ ಕೊಹ್ಲಿ ಒಂದೂ ರನ್ ಗಳಿಸಲಿಲ್ಲ. ಡೇವಿಡ್ ವಿಲ್ಲಿ ಬೌಲಿಂಗ್​ನಲ್ಲಿ ಮಿಡ್ ಆಫ್‌ನಲ್ಲಿ ಬೆನ್ ಸ್ಟೋಕ್ಸ್‌ಗೆ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದರು.

3 / 7
ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಖಾತೆ ತೆರೆಯದೆ ಔಟಾದರು. ಕೊಹ್ಲಿಯ ಫಾರ್ಮ್ ಅನ್ನು ಗಮನಿಸಿದರೆ, ಸಚಿನ್ ತೆಂಡೂಲ್ಕರ್ ಅವರ 49ನೇ ಶತಕದ ದಾಖಲೆಯನ್ನು ಸರಿಗಟ್ಟಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ನಿರೀಕ್ಷೆ ಹುಸಿಯಾಯಿತು.

4 / 7
ಗಿಲ್, ಕೊಹ್ಲಿ ಹಾಗೂ ಅಯ್ಯರ್ ನಿರ್ಗಮನದ ಬಳಿಕ ಕೆಎಲ್ ರಾಹುಲ್ (39) ಜೊತೆಯಾದ ರೋಹಿತ್ ಶರ್ಮಾ ತಂಡಕ್ಕೆ ಆಧಾರವಾಗಿ ನಿಂತರು. ಈ ಜೋಡಿ 91 ರನ್​ಗಳ ಕಾಣಿಕೆ ನೀಡಿತು. ರೋಹಿತ್ 101 ಎಸೆತಗಳಲ್ಲಿ 3 ಸಿಕ್ಸರ್, 10 ಫೋರ್​ನೊಂದಿಗೆ 87 ರನ್ ಚಚ್ಚಿದರು.

5 / 7
ಬಳಿಕ ರನ್ ಹೆಚ್ಚಿಸುವ ಜವಾಬ್ದಾರಿ ಹೊತ್ತ ಸೂರ್ಯಕುಮಾರ್ ಯಾದವ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಸೂರ್ಯ 47 ಎಸೆತಗಳಲ್ಲಿ 49 ರನ್​ಗೆ ಔಟಾದರು. ಭಾರತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು. ಡೇವಿಡ್ ವಿಲ್ಲಿ 3 ವಿಕೆಟ್ ಪಡೆದರು.

6 / 7
ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿ 34.5 ಓವರ್​ಗಳಲ್ಲಿ ಕೇವಲ 129 ರನ್​ಗಳಿಗೆ ಆಲೌಟ್ ಆಯಿತು. ಭಾರತ ಪರ ಮೊಹಮ್ಮದ್ ಶಮಿ 4 ಹಾಗೂ ಜಸ್​ಪ್ರಿತ್ ಬುಮ್ರಾ 3 ವಿಕೆಟ್ ಕಿತ್ತು ಮಿಂಚಿದರು.

7 / 7
Follow us
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ

ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ

‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ

‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ

ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್

ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ

ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ

ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್

ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ

ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ