
ಟೀಮ್ ಇಂಡಿಯಾ ಆಟಗಾರರ ಜೊತೆಗಿನ 2026ರ ಕೇಂದ್ರ ಒಪ್ಪಂದಕ್ಕೆ ಬಿಸಿಸಿಐ ಸಿದ್ಧತೆಗಳನ್ನು ಶುರು ಮಾಡಿದೆ. ಈ ಬಾರಿಯ ಒಪ್ಪಂದದಲ್ಲಿ ಕೆಲ ಮಹತ್ವದ ಬದಲಾವಣೆ ಕಂಡು ಬರಲಿದೆ. ಈ ಬದಲಾವಣೆಯೊಂದಿಗೆ ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿಗೆ (Virat Kohli) ಹಿಂಬಡ್ತಿ ನೀಡಲಾಗುತ್ತಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಈ ಬಾರಿಯ ಒಪ್ಪಂದ ಪಟ್ಟಿಯಲ್ಲಿ A+ ಗ್ರೇಡ್ ಇರುವುದಿಲ್ಲ. ಬದಲಾಗಿ A,B.C ಗ್ರೇಡ್ ಮಾತ್ರ ಇರಲಿದೆ. ಈ ಗ್ರೇಡ್ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು B ಗ್ರೇಡ್ನಲ್ಲಿರಿಸಲಾಗಿದೆ. ಈ ಹಿಂದೆ ಇಬ್ಬರು ದಿಗ್ಗಜರು A+ ಗ್ರೇಡ್ನಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ಬಿ ಗ್ರೇಡ್ನಲ್ಲಿರಿಸಿರುವ ಕಾರಣ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಾರ್ಷಿಕ 3 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಇದಕ್ಕೂ ಮುನ್ನ ಇಬ್ಬರಿಗೆ ನೀಡಲಾಗುತ್ತಿದ್ದ ವಾರ್ಷಿಕ ಮೊತ್ತ 5 ಕೋಟಿ ರೂ. ಇದೀಗ ಗ್ರೇಡ್ನಲ್ಲಿ ಹಿಂಬಡ್ತಿ ನೀಡಿರುವ ಕಾರಣ ಸಂಭಾವನೆ ಕೂಡ ಕಡಿತವಾಗಿದೆ.

ಇದರೊಂದಿಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಯುಗಾಂತ್ಯವಾಗುವುದು ಸಹ ಖಚಿತವಾಗಿದೆ. ಅಂದರೆ 2027ರ ಏಕದಿನ ವಿಶ್ವಕಪ್ ಬೆನ್ನಲ್ಲೇ ಇಬ್ಬರು ನಿವೃತ್ತಿ ಘೋಷಿಸಲಿದ್ದಾರೆ. ಅದರ ಮನ್ಸೂಚನೆಯಾಗಿ ಇದೀಗ ರೋಹಿತ್ ಹಾಗೂ ವಿರಾಟ್ಗೆ ಒಪ್ಪಂದ ಪಟ್ಟಿಯಲ್ಲಿ ಹಿಂಬಡ್ತಿ ನೀಡಲಾಗಿದೆ.

ಇನ್ನು ಈ ಬಾರಿಯ ಒಪ್ಪಂದದಲ್ಲಿ A ಗ್ರೇಡ್ನಲ್ಲಿ ಸ್ಥಾನ ಪಡೆದಿರುವುದು ಮೂವರು ಆಟಗಾರರು ಮಾತ್ರ. ಅವರೆಂದರೆ ಭಾರತ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್, ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ.