- Kannada News Photo gallery Cricket photos Virat Kohli vs Sachin Tendulkar: A glance at all format stats after 71 tons
Virat Kohli vs Sachin Tendulkar: ಸಚಿನ್ vs ಕೊಹ್ಲಿ: ಯಾರು ಬೆಸ್ಟ್? ಇಲ್ಲಿದೆ ಉತ್ತರ
Virat Kohli vs Sachin Tendulkar: ಸಚಿನ್-ಕೊಹ್ಲಿ ನಡುವಣ ಅಂಕಿ ಅಂಶಗಳ ಹೋಲಿಕೆಗಳು ಮತ್ತೆ ಮುನ್ನಲೆಗೆ ಬಂದಿವೆ. ಈ ಅಂಕಿ ಅಂಶಗಳ ಪ್ರಕಾರ ಯಾರು ಬೆಸ್ಟ್ ಎಂದು ನೀವೇ ನಿರ್ಧರಿಸಿ...
Updated on: Sep 11, 2022 | 10:30 AM

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ನಡುವಣ ಹೋಲಿಕೆಗಳು ಇಂದು ನಿನ್ನೆಯದಲ್ಲ. ಏಕೆಂದರೆ ಇಬ್ಬರು ಕ್ರಿಕೆಟ್ ಅಂಗಳದಲ್ಲಿ ರನ್ ಸರದಾರರಾಗಿ ಕಾಣಿಸಿಕೊಂಡ ಬ್ಯಾಟ್ಸ್ಮನ್ಗಳು.

ಇದಾಗ್ಯೂ ಕ್ರಿಕೆಟ್ ದೇವರೊಂದಿಗೆ ರನ್ ಮೆಷಿನ್ ಹೋಲಿಕೆ ಸದಾ ಚರ್ಚೆಗೆ ಕಾರಣವಾಗುತ್ತದೆ. ಕೆಲವರು ಸಚಿನ್ ತೆಂಡೂಲ್ಕರ್ ಬೆಸ್ಟ್ ಎಂದರೆ ಮತ್ತೆ ಕೆಲವರು ವಿರಾಟ್ ಕೊಹ್ಲಿಯೇ ಅತ್ಯುತ್ತಮ ಬ್ಯಾಟ್ಸ್ಮನ್ ಎನ್ನುತ್ತಾರೆ. ಇದೀಗ ಕಿಂಗ್ ಕೊಹ್ಲಿ 71ನೇ ಶತಕ ಸಿಡಿಸಿ ಮಿಂಚಿದ್ದಾರೆ. ಇದೇ ವೇಳೆ ಸಚಿನ್-ಕೊಹ್ಲಿ ನಡುವಣ ಅಂಕಿ ಅಂಶಗಳ ಹೋಲಿಕೆಗಳು ಮತ್ತೆ ಮುನ್ನಲೆಗೆ ಬಂದಿವೆ. ಈ ಅಂಕಿ ಅಂಶಗಳ ಪ್ರಕಾರ ಯಾರು ಬೆಸ್ಟ್ ಎಂದು ನೀವೇ ನಿರ್ಧರಿಸಿ...

ಸಚಿನ್ ತೆಂಡೂಲ್ಕರ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 71 ಶತಕಗಳನ್ನು ಪೂರೈಸಲು ತೆಗೆದುಕೊಂಡ ಒಟ್ಟು ಇನಿಂಗ್ಸ್ 523.

ಈ ವೇಳೆ 107 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ. ಇನ್ನು 523 ಇನಿಂಗ್ಸ್ ಮೂಲಕ ಸಚಿನ್ ತೆಂಡೂಲ್ಕರ್ ಕಲೆಹಾಕಿದ್ದು 23,274 ರನ್ಗಳು.

ವಿರಾಟ್ ಕೊಹ್ಲಿ: ಕಿಂಗ್ ಕೊಹ್ಲಿ ತಮ್ಮ 71ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದ್ದು 522ನೇ ಇನಿಂಗ್ಸ್ನಲ್ಲಿ. ಅಲ್ಲದೆ ಇದರ ನಡುವೆ 124 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ.

ಇನ್ನು 522 ಇನಿಂಗ್ಸ್ ಮೂಲಕ ವಿರಾಟ್ ಕೊಹ್ಲಿ ಕಲೆಹಾಕಿರುವುದು ಬರೋಬ್ಬರಿ 24,002 ರನ್ಗಳು.

ಅಂದರೆ ವಿರಾಟ್ ಕೊಹ್ಲಿ (522) ಸಚಿನ್ ತೆಂಡೂಲ್ಕರ್ (523) ಗಿಂತ ಒಂದು ಇನಿಂಗ್ಸ್ ಕಡಿಮೆ ಅಂತರದಲ್ಲಿ 71 ಶತಕಗಳನ್ನು ಪೂರೈಸಿದ್ದಾರೆ. ಇನ್ನು ಈ ವೇಳೆ ಸಚಿನ್ 107 ಅರ್ಧಶತಕ ಬಾರಿಸಿದರೆ, ಕೊಹ್ಲಿ 124 ಹಾಫ್ ಸೆಂಚುರಿ ಸಿಡಿಸಿದ್ದರು.

ಇದಲ್ಲದೆ 522 ಇನಿಂಗ್ಸ್ ಮೂಲಕ ಕೊಹ್ಲಿ 24,002 ರನ್ ಕಲೆಹಾಕಿದರೆ, 523 ಇನಿಂಗ್ಸ್ ಮೂಲಕ ಸಚಿನ್ ಕಲೆಹಾಕಿದ್ದು 23,274 ರನ್ಗಳು. ಅಂದರೆ ಇಲ್ಲಿ ಸಚಿನ್ಗಿಂತ ಕಡಿಮೆ ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ಹೆಚ್ಚುವರಿ 728 ರನ್ಗಳನ್ನು ಕಲೆಹಾಕಿದ್ದಾರೆ.




