‘ಪಾಕ್ ವಿರುದ್ಧ ಪಂದ್ಯವಿದೆ ಎಂದು ಹೇಳಿ’; ಕೊಹ್ಲಿ ಫಾರ್ಮ್‌ಗೆ ಮರಳಲು ಅಖ್ತರ್ ಸಲಹೆ
Virat Kohli's Comeback: ವಿರಾಟ್ ಕೊಹ್ಲಿ ಇತ್ತೀಚೆಗೆ ಲಯ ತಪ್ಪಿದ್ದು, ಅವರ ಪ್ರದರ್ಶನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಮಾಜಿ ಪಾಕಿಸ್ತಾನ ವೇಗಿ ಶೋಯೆಬ್ ಅಖ್ತರ್, ಕೊಹ್ಲಿ ಪಾಕಿಸ್ತಾನದ ವಿರುದ್ಧ ಆಡುವುದರಿಂದ ಮತ್ತೆ ಫಾರ್ಮ್‌ಗೆ ಮರಳುತ್ತಾರೆ ಎಂದು ಹೇಳಿದ್ದಾರೆ. ಅಖ್ತರ್ ಹೇಳಿಕೆಗೆ ಪೂರಕವಾಗಿ ಕೊಹ್ಲಿ ಪಾಕಿಸ್ತಾನ ವಿರುದ್ಧ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದು, ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ ಮತ್ತೆ ಅಬ್ಬರಿಸುವ ವಿಶ್ವಾಸವಿದೆ.
1 / 6
ವಿಶ್ವ ಕ್ರಿಕೆಟ್ನ ರನ್ ಮಷಿನ್ ವಿರಾಟ್ ಕೊಹ್ಲಿ ಕೆಲವು ಸಮಯದಿಂದ ಲಯ ತಪ್ಪಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೆ. ಅದರಲ್ಲೂ ಟೆಸ್ಟ್ ಮಾದರಿಯಲ್ಲಿ ರನ್ ಬರ ಎದುರಿಸುತ್ತಿರುವ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಹಾಗೂ ಆಸ್ಟ್ರೇಲಿಯಾ ವಿರುದ್ಧ ರನ್ ಬಾರಿಸಲು ಸಾಕಷ್ಟು ಕಷ್ಟಪಟ್ಟರು. ಇದರ ಪರಿಣಾಮವಾಗಿ ತಂಡ ಸರಣಿ ಸೋಲನ್ನು ಎದುರಿಸಬೇಕಾಯಿತು.
2 / 6
ಈ ಎರಡು ಸರಣಿಗಳಲ್ಲಿ ಕೊಹ್ಲಿಯ ಕಳಪೆ ಆಟವನ್ನು ನೋಡಿದ ಕ್ರಿಕೆಟ್ ಪಂಡಿತರು ಹಾಗೂ ಅಭಿಮಾನಿಗಳು ಕೊಹ್ಲಿ ನಿವೃತ್ತಿ ಘೋಷಿಸಿ, ಯುವ ಆಟಗಾರರಿಗೆ ದಾರಿ ಮಾಡಿಕೊಡಬೇಕು ಎನ್ನುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಸಿಸಿಐ ಕೂಡ ಯೋಚಿಸುತ್ತಿದೆ ಎಂದೂ ಹೇಳಲಾಗುತ್ತಿದೆ. ಆದರೀಗ ಕೊಹ್ಲಿಯನ್ನು ಮತ್ತೆ ಫಾರ್ಮ್‌ಗೆ ಮರಳಿ ಕರೆತರುವುದು ಹೇಗೆ ಎಂಬುದನ್ನು ಪಾಕ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ತಿಳಿಸಿದ್ದಾರೆ.
3 / 6
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವು ಕ್ರಿಕೆಟ್ ಪರಿಣಿತರು ಕೊಹ್ಲಿಯನ್ನು ತೆಗಳುತ್ತಿದ್ದರೆ, ಅಖ್ತರ್ ಮಾತ್ರ ಕೊಹ್ಲಿಗೆ ಬೆಂಬಲವಾಗಿ ನಿಂತಿದ್ದಾರೆ. ಸ್ಪೋರ್ಟ್‌ಸ್ಟಾಕ್‌ನೊಂದಿಗೆ ಮಾತನಾಡಿದ ಅಖ್ತರ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಸಲಹೆ ನೀಡಿದ್ದು, ‘ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಬೇಕಾದರೆ ಪಾಕಿಸ್ತಾನ ವಿರುದ್ಧ ಪಂದ್ಯವಿದೆ ಎಂದು ಹೇಳಿ, ಅವರು ಎಚ್ಚೆತ್ತುಕೊಳ್ಳುತ್ತಾರೆ, ನಾವು ಅದನ್ನು ಆಗಾಗ್ಗೆ ನೋಡಿದ್ದೇವೆ ಎಂದಿದ್ದಾರೆ.
4 / 6
ಮುಂದುವರೆದು ಮಾತನಾಡಿರುವ ಅಖ್ತರ್, ಕೊಹ್ಲಿ ಮೆಲ್ಬೋರ್ನ್‌ನಲ್ಲಿ ಟಾಪ್ ಇನ್ನಿಂಗ್ಸ್ ಆಡಿದರು. ಹೀಗಾಗಿ ಅವರು ಮತ್ತೆ ಪುಟಿದೇಳುತ್ತಾರೆ ಎಂಬುದರಲ್ಲಿನ ಯಾವುದೇ ಅನುಮಾನವಿಲ್ಲ. ಹೀಗಾಗಿ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಜೊತೆಗೆ ರೋಹಿತ್ ಶರ್ಮಾ ಆಡುವುದು ಖಚಿತವಾಗಿದ್ದು, ಈ ಇಬ್ಬರು ಮತ್ತೆ ತಮ್ಮ ಹಳೆಯ ಲಯಕ್ಕೆ ಮರಳುತ್ತಾರೆ ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
5 / 6
ಅಖ್ತರ್ ಅವರ ಈ ಹೇಳಿಕೆಯಲ್ಲೂ ಸತ್ಯವಿದ್ದು, ಪ್ರತಿಯೊಂದು ಐಸಿಸಿ ಟೂರ್ನಿಯಲ್ಲೂ ಪಾಕಿಸ್ತಾನದ ವಿರುದ್ಧ ಕೊಹ್ಲಿ ಬ್ಯಾಟ್ ಅಬ್ಬರಿಸಿದೆ. ಇದಕ್ಕೆ ಪೂರಕವಾಗಿ ವಿರಾಟ್ ಕೊಹ್ಲಿ ಇದುವರೆಗೆ ಪಾಕಿಸ್ತಾನ ವಿರುದ್ಧ 16 ಏಕದಿನ ಪಂದ್ಯಗಳನ್ನು ಆಡಿದ್ದ್ದು, 52.15ರ ಸರಾಸರಿಯಲ್ಲಿ 678 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು ಸೇರಿವೆ.
ಇದಲ್ಲದೇ ಪಾಕಿಸ್ತಾನ ವಿರುದ್ಧ 11 ಟಿ20 ಪಂದ್ಯಗಳನ್ನಾಡಿರುವ ವಿರಾಟ್ 70.28 ರ ಸರಾಸರಿಯಲ್ಲಿ 492 ರನ್ ಗಳಿಸಿದ್ದಾರೆ.
6 / 6
ಇನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿಯ ಪ್ರದರ್ಶನವನ್ನು ನೋಡುವುದಾದರೆ... ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಟೂರ್ನಿಯಲ್ಲಿ ಇದುವರೆಗೆ 13 ಪಂದ್ಯಗಳನ್ನು ಆಡಿದ್ದು 88.16 ಸರಾಸರಿ ಮತ್ತು 92.32 ಸ್ಟ್ರೈಕ್ ರೇಟ್‌ನಲ್ಲಿ 529 ರನ್ ಗಳಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಸೇರಿದ್ದು, ಟೂರ್ನಿಯಲ್ಲಿ ಅವರ ಗರಿಷ್ಠ ಸ್ಕೋರ್ ಔಟಾಗದೆ 96 ರನ್ ಆಗಿದೆ.