24 ವರ್ಷಗಳ ಬರ ಅಂತ್ಯಗೊಳಿಸಿದ ವಿಂಡೀಸ್ ಆರಂಭಿಕರು..!

Updated on: Sep 27, 2026 | 4:41 PM

ತಿರುವನಂತಪುರದಲ್ಲಿ ಭಾರತದ ವಿರುದ್ಧದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆರಂಭಿಕರಾದ ಗ್ರೀವ್ಸ್ ಮತ್ತು ಕ್ಯಾಂಪ್‌ಬೆಲ್ ಇತಿಹಾಸ ಸೃಷ್ಟಿಸಿದ್ದಾರೆ. ಕೇವಲ 13.3 ಓವರ್‌ಗಳಲ್ಲಿ 100 ರನ್ ಜೊತೆಯಾಟವಾಡಿ, ಭಾರತದ ನೆಲದಲ್ಲಿ 24 ವರ್ಷಗಳ ನಂತರ ಶತಕದ ಆರಂಭಿಕ ಜೊತೆಯಾಟದ ದಾಖಲೆ ನಿರ್ಮಿಸಿದರು. ಅವರ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಾಗಿ ಮೊದಲ 10 ಓವರ್‌ಗಳಲ್ಲಿ 85 ರನ್ ಗಳಿಸಿ, ಗಿಲ್ ಅವರ ಬೌಲಿಂಗ್ ನಿರ್ಧಾರವನ್ನು ತಪ್ಪು ಎಂದು ಸಾಬೀತುಪಡಿಸಿದರು.

1 / 5
ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೆರಿಬಿಯನ್ ಆರಂಭಿಕ ಜೋಡಿ ಇತಿಹಾಸ ಸೃಷ್ಟಿಸಿದೆ. ಕೇವಲ ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗಿರುವ ವಿಂಡೀಸ್ ತಂಡದ ದಾಂಡಿಗರು ತಾಳ್ಮೆಯ ಇನ್ನಿಂಗ್ಸ್ ಕಟ್ಟಿ ಭಾರತದ ವಿರುದ್ಧ ದಾಖಲೆ ನಿರ್ಮಿಸಿದ್ದಾರೆ(PC- West Indies X).

ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೆರಿಬಿಯನ್ ಆರಂಭಿಕ ಜೋಡಿ ಇತಿಹಾಸ ಸೃಷ್ಟಿಸಿದೆ. ಕೇವಲ ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗಿರುವ ವಿಂಡೀಸ್ ತಂಡದ ದಾಂಡಿಗರು ತಾಳ್ಮೆಯ ಇನ್ನಿಂಗ್ಸ್ ಕಟ್ಟಿ ಭಾರತದ ವಿರುದ್ಧ ದಾಖಲೆ ನಿರ್ಮಿಸಿದ್ದಾರೆ(PC- West Indies X).

2 / 5

ಈ ಪಂದ್ಯದಲ್ಲಿ ಭಾರತದ ನಾಯಕ ಶುಭ್​ಮನ್ ಗಿಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್ ಇಂಡೀಸ್‌ ಪರ ಆರಂಭಿಕರಾದ ಜಸ್ಟಿನ್ ಗ್ರೀವ್ಸ್ ಮತ್ತು ಜಾನ್ ಕ್ಯಾಂಪ್‌ಬೆಲ್ ಮೈದಾನದಲ್ಲಿ ರನ್‌ಗಳ ಮಳೆ ಸುರಿಸುವ ಮೂಲಕ ಗಿಲ್ ನಿರ್ಧಾರವನ್ನು ಸಂಪೂರ್ಣವಾಗಿ ತಪ್ಪು ಎಂದು ಸಾಬೀತುಪಡಿಸಿದರು(PC- West Indies X).

3 / 5

ಈ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ ಜಸ್ಟಿನ್ ಗ್ರೀವ್ಸ್ ಮತ್ತು ಜಾನ್ ಕ್ಯಾಂಪ್ಬೆಲ್ ಭಾರತೀಯ ಬೌಲರ್‌ಗಳ ಬೆವರಿಳಿಸಿ ಕೇವಲ 13.3 ಓವರ್‌ಗಳಲ್ಲಿ 100 ರನ್‌ಗಳ ಪಾಲುದಾರಿಕೆಯನ್ನು ಪೂರ್ಣಗೊಳಿಸಿದರು. 24 ವರ್ಷಗಳ ಕಾಯುವಿಕೆಯ ನಂತರ, ವೆಸ್ಟ್ ಇಂಡೀಸ್‌ನ ಆರಂಭಿಕ ಜೋಡಿಯು ಭಾರತದ ನೆಲದಲ್ಲಿ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಶತಕದ ಪಾಲುದಾರಿಕೆಯನ್ನು ದಾಖಲಿಸಿದ್ದು ಇದೇ ಮೊದಲು(PC- West Indies X).

4 / 5

ಏತನ್ಮಧ್ಯೆ, ವೆಸ್ಟ್ ಇಂಡೀಸ್ 2025 ರಿಂದ 20 ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದೆ, ಆದರೆ ತಂಡದ ಯಾವುದೇ ಆರಂಭಿಕ ಜೋಡಿಯೂ ಮೊದಲ ವಿಕೆಟ್‌ಗೆ 65 ರನ್‌ಗಳ ಗಡಿ ದಾಟಿರಲಿಲ್ಲ. ಆದರೆ ಎರಡನೇ ಬಾರಿಗೆ ಆರಂಭಿಕ ಜೋಡಿಯಾಗಿ ಕಣಕ್ಕಿಳಿದಿದ್ದ ಜಾನ್ ಕ್ಯಾಂಪ್ಬೆಲ್ ಮತ್ತು ಜಸ್ಟಿನ್ ಗ್ರೀವ್ಸ್ ಕೇವಲ 81 ಎಸೆತಗಳಲ್ಲಿ 100 ರನ್​ಗಳ ಜೊತೆಯಾಟ ಹಂಚಿಕೊಂಡರು(PC- West Indies X).

5 / 5

ಗ್ರೀವ್ಸ್ ಮತ್ತು ಕ್ಯಾಂಪ್‌ಬೆಲ್ ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಭಾರತದ ಬೌಲರ್​ಗಳ ಲಯ ತಪ್ಪಿಸಿದರು. ಇದರ ಪರಿಣಾಮವಾಗಿ 10 ಓವರ್‌ಗಳ ಪವರ್‌ಪ್ಲೇ ಅಂತ್ಯದ ವೇಳೆಗೆ ವೆಸ್ಟ್ ಇಂಡೀಸ್ ವಿಕೆಟ್ ಕಳೆದುಕೊಳ್ಳದೆ 85 ರನ್‌ ಕಲೆಹಾಕಿತು. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ವಿರುದ್ಧ ಮೊದಲ 10 ಓವರ್‌ಗಳಲ್ಲಿ ವೆಸ್ಟ್ ಇಂಡೀಸ್ ಗಳಿಸಿದ ಮೂರನೇ ಅತ್ಯಧಿಕ ಮೊತ್ತವಾಗಿದೆ(PC- West Indies X).

Published On - 4:41 pm, Sun, 27 September 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us