Smriti Mandhana: ಕೇವಲ 149 ರನ್​ಗಳಿಗೆ 3 ಕೋಟಿ 40 ಲಕ್ಷ ರೂ. ಪಡೆದ ಸ್ಮೃತಿ ಮಂಧಾನ..!

WPL 2023: ಒಟ್ಟಿನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್​ಗಾಗಿ ಬಲಿಷ್ಠ ತಂಡವನ್ನು ರೂಪಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೆಕ್ಕಾಚಾರಗಳು ಮೊದಲ ಸೀಸನ್​ನಲ್ಲೇ ತಲೆಕೆಳಗಾಗಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Mar 21, 2023 | 8:30 PM

ಫೆಬ್ರವರಿ 13 ರಂದು ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ ಹರಾಜು ಪ್ರಕ್ರಿಯೆಯಲ್ಲಿ ಅತ್ಯಧಿಕ ಮೊತ್ತಕ್ಕೆ ಹರಾಜಾದ ಆಟಗಾರ್ತಿ ಸ್ಮೃತಿ ಮಂಧಾನ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಬರೋಬ್ಬರಿ 3 ಕೋಟಿ 40 ಲಕ್ಷ ರೂ. ನೀಡಿ ಸ್ಮೃತಿಯನ್ನು ಖರೀದಿಸಿತ್ತು. ಅಷ್ಟೇ ಅಲ್ಲದೆ ಆರ್​ಸಿಬಿ ತಂಡದ ನಾಯಕತ್ವವನ್ನೂ ಕೂಡ ನೀಡಿದ್ದರು.

1 / 6
ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್​ನ ಲೀಗ್​ ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಆಡಿರುವ 8 ಪಂದ್ಯಗಳಲ್ಲಿ ಆರ್​ಸಿಬಿ 6 ರಲ್ಲಿ ಸೋಲನುಭವಿಸಿದೆ. ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವುಮೆನ್ಸ್ ಪ್ರೀಮಿಯರ್ ಲೀಗ್​ ಅಭಿಯಾನ ಅಂತ್ಯಗೊಳಿಸಿದೆ.

2 / 6
ಇತ್ತ ಆರ್​ಸಿಬಿ ಫ್ರಾಂಚೈಸಿಯು ಕೋಟಿ ನೀಡಿ ಖರೀದಿಸಿದ ಸ್ಮೃತಿ ಮಂಧಾನ ಬ್ಯಾಟಿಂಗ್​​ನಲ್ಲೂ ವಿಫಲರಾಗಿದ್ದರು. ಅತ್ತ ನಾಯಕತ್ವದಲ್ಲೂ ಹಿಂದೆ ಉಳಿದರು. ಇದಕ್ಕೆ ಸಾಕ್ಷಿಯೇ ಆರ್​ಸಿಬಿ ತಂಡವು ಸತತವಾಗಿ 5 ಪಂದ್ಯಗಳನ್ನು ಸೋತಿರುವುದು.

3 / 6
ಇನ್ನು 8 ಪಂದ್ಯಗಳಲ್ಲಿ ಆರಂಭಿಕಳಾಗಿ ಕಣಕ್ಕಿಳಿದಿದ್ದ ಸ್ಮೃತಿ ಮಂಧಾನ ಕಲೆಹಾಕಿದ್ದು ಕೇವಲ 149 ರನ್​ಗಳು ಮಾತ್ರ. ಅಂದರೆ ಪ್ರತಿ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಸರಾಸರಿ 18.62 ಅಷ್ಟೇ. ಹಾಗೆಯೇ ಇಡೀ ಟೂರ್ನಿಯಲ್ಲಿ ಒಂದೇ ಒಂದು ಅರ್ಧಶತಕ ಕೂಡ ಬಾರಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.

4 / 6
ಇಲ್ಲಿ ಇಂಟ್ರೆಸ್ಟಿಂಗ್ ವಿಷಯ ಎಂದರೆ ಸ್ಮೃತಿ ಮಂಧಾನ ಅವರ ರನ್​ಗಳಿಕೆ ಹಾಗೂ ಹರಾಜು ಮೊತ್ತವನ್ನು ಲೆಕ್ಕಹಾಕಿದರೆ, ಅವರು ಪ್ರತಿ ರನ್​ಗೆ 2,28,187 ರೂ.ಗಳನ್ನು ಪಡೆದಿದ್ದಾರೆ.

5 / 6
ಒಟ್ಟಿನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್​ಗಾಗಿ ಬಲಿಷ್ಠ ತಂಡವನ್ನು ರೂಪಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೆಕ್ಕಾಚಾರಗಳು ಮೊದಲ ಸೀಸನ್​ನಲ್ಲೇ ತಲೆಕೆಳಗಾಗಿದೆ. ಇನ್ನು ಮುಂದಿನ ಸೀಸನ್​ನಲ್ಲಿ ಏನೆಲ್ಲಾ ಬದಲಾವಣೆ ತರಲಿದ್ದಾರೆ ಕಾದು ನೋಡಬೇಕಿದೆ.

6 / 6
Follow us
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು

ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ

ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ

ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ

ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ

ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ

ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ

ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್

Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ