AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2026: ಮೊದಲ ಸುತ್ತಿನಲ್ಲಿ ಹರಾಜಾಗಲಿರುವ 8 ಆಟಗಾರ್ತಿಯರು ಇವರೇ..!

WPL 2026 Auction: ವುಮೆನ್ಸ್ ಪ್ರೀಮಿಯರ್ ಲೀಗ್ 2026ರ ಮೆಗಾ ಹರಾಜಿನಲ್ಲಿ ಒಟ್ಟು 277 ಆಟಗಾರ್ತಿಯರ ಹೆಸರು ಕಾಣಿಸಿಕೊಳ್ಳಲಿದೆ. ಈ 277 ಆಟಗಾರ್ತಿಯರಲ್ಲಿ ಟೀಮ್ ಇಂಡಿಯಾದ 52 ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಅಂತಾರಾಷ್ಟ್ರೀಯ ಪಂದ್ಯವಾಡಿದ 66 ವಿದೇಶಿ ಆಟಗಾರ್ತಿಯರು ಸಹ ಈ ಪಟ್ಟಿಯಲ್ಲಿದ್ದಾರೆ. ಇನ್ನುಳಿದವರು ಅನ್​ಕ್ಯಾಪ್ಡ್ ಪ್ಲೇಯರ್ಸ್​. ಇವರಲ್ಲಿ ಮೊದಲ ಸುತ್ತಿನಲ್ಲೇ ಹರಾಜಾಗಲಿರುವ 8 ಆಟಗಾರ್ತಿಯರ ಪಟ್ಟಿ ಈ ಕೆಳಗಿನಂತಿದೆ...

ಝಾಹಿರ್ ಯೂಸುಫ್
|

Updated on: Nov 26, 2025 | 8:24 AM

Share
WPL 2026:  ವುಮೆನ್ಸ್ ಪ್ರೀಮಿಯರ್ ಲೀಗ್​​ನ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 27 ರಂದು ನಡೆಯಲಿರುವ ಈ ಹರಾಜಿನಲ್ಲಿ ಬರೋಬ್ಬರಿ 277 ಆಟಗಾರ್ತಿಯರ ಹೆಸರು ಕಾಣಿಸಿಕೊಳ್ಳಲಿದೆ. ಇವರಲ್ಲಿ 8 ಆಟಗಾರ್ತಿಯರಿಗಾಗಿ ಮೊದಲ ಸುತ್ತಿನಲ್ಲೇ ಹರಾಜು ನಡೆಯಲಿದೆ. ಆ ಪ್ಲೇಯರ್ಸ್ ಯಾರೆಂದರೆ...

1 / 9
ಅಲಿಸ್ಸಾ ಹೀಲಿ: ವುಮೆನ್ಸ್ ಪ್ರೀಮಿಯರ್ ಲೀಗ್ 2025 ರಲ್ಲಿ ಯುಪಿ ವಾರಿಯರ್ಸ್ ತಂಡದ ನಾಯಕಿಯಾಗಿ ಕಾಣಿಸಿಕೊಂಡಿದ್ದ ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಅಲಿಸ್ಸಾ ಹೀಲಿಗಾಗಿ ಮೊದಲ ಸುತ್ತಿನಲ್ಲೇ ಬಿಡ್ಡಿಂಗ್ ನಡೆಯಲಿದೆ.

2 / 9
ಸೋಫಿ ಡಿವೈನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯುತ್ತಿದ್ದ ನ್ಯೂಝಿಲೆಂಡ್ ಆಟಗಾರ್ತಿ ಸೋಫಿ ಡಿವೈನ್ ಅವರನ್ನು ಈ ಬಾರಿ ಆರ್​ಸಿಬಿ ರಿಟೈನ್ ಮಾಡಿಕೊಂಡಿಲ್ಲ. ಅದರಂತೆ ಇದೀಗ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿರುವ ಸೋಫಿ ಡಿವೈನ್ ಮೊದಲ ಸುತ್ತಿನ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

3 / 9
ಸೋಫಿ ಎಕ್ಲೆಸ್ಟೋನ್: ಇಂಗ್ಲೆಂಡ್ ಆಲ್​ರೌಂಡರ್ ಸೋಫಿ ಎಕ್ಲೆಸ್ಟೋನ್ ಕಳೆದ ಸೀಸನ್​​ನಲ್ಲಿ ಯುಪಿ ವಾರಿಯರ್ಸ್ ಪರ ಕಣಕ್ಕಿಳಿದಿದ್ದರು. ಈ ಬಾರಿ ತಂಡದಿಂದ ರಿಲೀಸ್ ಆಗಿರುವ ಅವರು 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಮೊದಲ ಸುತ್ತಿನ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

4 / 9
ಅಮೆಲಿಯಾ ಕೆರ್: ವುಮೆನ್ಸ್ ಪ್ರೀಮಿಯರ್ ಲೀಗ್ 2025ರ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ್ತಿ ಅಮೆಲಿಯಾ ಕೆರ್ ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 50 ಲಕ್ಷ ರೂ. ಮೂಲ ಬೆಲೆ ಘೋಷಿಸಿರುವ ಅಮೆಲಿಯಾ ಮೊದಲ ಸುತ್ತಿನ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

5 / 9
ಮೆಗ್ ಲ್ಯಾನಿಂಗ್: ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ತನ್ನ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅನ್ನು ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಅದರಂತೆ ಇದೀಗ 50 ಲಕ್ಷ ರೂ. ಮೂಲ ಬೆಲೆ ಘೋಷಿಸಿರುವ ಮೆಗ್ ಲ್ಯಾನಿಂಗ್​​ಗಾಗಿ ಮೊದಲ ಸುತ್ತಿನಲ್ಲೇ ಬಿಡ್ಡಿಂಗ್ ನಡೆಯಲಿದೆ.

6 / 9
ರೇಣುಕಾ ಸಿಂಗ್: ವುಮೆನ್ಸ್ ಪ್ರೀಮಿಯರ್ ಲೀಗ್​​​ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ವೇಗಿ ರೇಣುಕಾ ಸಿಂಗ್ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 40 ಲಕ್ಷ ರೂ. ಮೂಲ ಬೆಲೆ ಘೋಷಿಸಿರುವ ರೇಣುಕಾ ಕೂಡ ಮೊದಲ ಸುತ್ತಿನ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

7 / 9
ದೀಪ್ತಿ ಶರ್ಮಾ: ಯುಪಿ ವಾರಿಯರ್ಸ್ ತಂಡದ ಉಪನಾಯಕಿಯಾಗಿ ಕಣಕ್ಕಿಳಿಯುತ್ತಿದ್ದ ಟೀಮ್ ಇಂಡಿಯಾದ ಆಲ್​​ರೌಂಡರ್ ದೀಪ್ತಿ ಶರ್ಮಾ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಇದೀಗ ಮಾರ್ಕ್ಯೂ ಲಿಸ್ಟ್​​ನಲ್ಲಿ ಕಾಣಿಸಿಕೊಂಡಿರುವ ದೀಪ್ತಿ ಶರ್ಮಾ ಅವರ ಖರೀದಿಗಾಗಿ ಮೊದಲ ಸುತ್ತಿನಲ್ಲೇ ಹರಾಜು ನಡೆಯಲಿದೆ.

8 / 9
ಲಾರಾ ವೋಲ್ವಾರ್ಡ್: ಗುಜರಾತ್ ಜೈಂಟ್ಸ್ ಫ್ರಾಂಚೈಸಿಯು ತನ್ನ ಸ್ಟಾರ್ ಆಟಗಾರ್ತಿ ಲಾರಾ ವೋಲ್ವಾರ್ಡ್ ಅವರನ್ನು ರಿಲೀಸ್ ಮಾಡಿದ್ದಾರೆ. ಅದರಂತೆ ಇದೀಗ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿರುವ ಲಾರಾ ವೋಲ್ವಾರ್ಡ್ ಅವರಿಗಾಗಿ ಮೊದಲ ಸುತ್ತಿನಲ್ಲೇ ಬಿಡ್ಡಿಂಗ್ ನಡೆಯಲಿದೆ.

9 / 9
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ

ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ

ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ

ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು

ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ

ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು

ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್

ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?

ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!

ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್