ಮಕ್ಕಳಿಗಾಗಿ ಬೆಂಗಳೂರಿನ ಕಬ್ಬನ್ ಪಾರ್ಕ್​​ನಲ್ಲಿ ಪುಷ್ಪ ಪ್ರದರ್ಶನ: ಫೋಟೋಸ್​ ನೋಡಿ

Vinayak Hanamant Gurav
| Updated By: ವಿವೇಕ ಬಿರಾದಾರ

Updated on: Nov 30, 2024 | 8:27 AM

ಫ್ಲವರ್ ಶೋ ಅಂದರೆ ಸಾಕು ಮೊದಲಿಗೆ ನೆನಪಾಗುವುದು ಲಾಲ್ ಬಾಗ್. ಪ್ರತಿ ವರ್ಷ ನಡೆಯುವ ಲಾಲ್ ​ಬಾಗ್​ ಫ್ಲವರ್ ಶೋಗೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಅಲ್ಲಿನ ಸುಂದರವಾದ ವಿಧವಿಧವಾದ ಹೂವುಗಳನ್ನು ಕಂಡು ಆನಂದ ಪಡುತ್ತಾರೆ. ಇದೀಗ ಕಬ್ಬನ್ ಪಾರ್ಕ್‌ನ ಬಾಲಭವನ ಆವರಣದಲ್ಲಿ ಮಕ್ಕಳಿಗೋಸ್ಕರ ಅಂತನೇ ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ನೋಡುಗರ ಕಣ್ಮನ ಸೆಳೆಯುತ್ತಿದೆ.

1 / 6
ನವೆಂಬರ್​ 14 ಮಕ್ಕಳ ದಿನಾಚರಣೆ ಆಚರಣೆ ಮಾಡಲಾಗುತ್ತದೆ. ಈ ಮಕ್ಕಳ ದಿನಾಚರಣೆ ಅಂಗವಾಗಿ ಈ ಬಾರಿ ಕಬ್ಬನ್ ಪಾರ್ಕ್‌ನ ಬಾಲ ಭವನ ಆವರಣದಲ್ಲಿ ಆವರಣದಲ್ಲಿ, ತೋಟಗಾರಿಕೆ ಇಲಾಖೆ, ಬಾಲಭವನ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

2 / 6
ಮಕ್ಕಳ ವಿಷಯಾಧಾರಿತ ಹಾಗೂ ಮಕ್ಕಳಲ್ಲಿ ಪೃಕೃತಿ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಶುಕ್ರವಾರ (ನ.29)ರಿಂದ ಆರಂಭವಾಗಿರುವ ಫಲಪುಷ್ಪ ಪ್ರದರ್ಶನ ಮೂರು ದಿನಗಳವರೆಗೆ ನಡೆಯಲಿದ್ದು, ಡಿಸೆಂಬರ್ 1 ರಂದು ಅಂತ್ಯವಾಗಲಿದೆ.  ಸಾರ್ವಜನಿಕರಿಗೆ ನೋಡಲು ಅವಕಾಶ ಕಲ್ಪಿಸಲಾಗಿದೆ.

3 / 6
ಕಬ್ಬನ್ ಪಾರ್ಕ್​ಗೆ ಬಂದ ಜನರು ಫಲಪುಷ್ಪ ಪ್ರದರ್ಶನವನ್ನು ಕಂಡು ಆನಂದ ಪಟ್ಟರು. ಪುಷ್ಪಗಳಲ್ಲಿ ಮೂಡಿದ ನವಿಲು, ರಾಕೇಟ್, ರೊಬೋಟ್, ಡೈನಾಸೋರ್, ಆನೆಗಳು ಜನರನ್ನು ಆಕರ್ಷಿಸಿದವು.

4 / 6
ವರ್ಲ್ಡ್​​ ಕಪ್ ಟ್ರೋಫಿ ಸೇರಿದಂತೆ ಇನ್ನೀತರ ಫಲಪುಷ್ಪ ಕೃತಿಗಳ ಮುಂದೆ ನಿಂತು ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಮಕ್ಕಳು ಕೂಡ ಅತಿ ಉತ್ಸುಲತೆಯಿಂದ ಬಾಲಭವನ ಫಲಪುಷ್ಪ ಪ್ರದರ್ಶನದಲ್ಲಿ ಭಾಗಿಯಾಗಿ ಸಂತಸ ವ್ಯಕ್ತಪಡಿಸಿದರು.

5 / 6
ಇಷ್ಟು ದಿನಗಳ ಕಾಲ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿತ್ತು. ಆದರೆ, ಈ ಬಾರಿ ಕಬ್ಬನ್ ಪಾರ್ಕ್​ನಲ್ಲೂ ಫಲಪುಷ್ಪ ಪ್ರದರ್ಶನ ನಡಿಯುತ್ತಿದೆ. ಇಂದು ಮತ್ತು ನಾಳೆ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ಸಾಧ್ಯತೆ ಇದೆ.

6 / 6
Follow us
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?

ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ

ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ