ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ನಟಿ ಮೇಘನಾ ರಾಜ್ ಅವರು ಬ್ಯುಸಿ ಆಗಿದ್ದಾರೆ. ಈ ಮೂಲಕ ಅವರು ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ. ಈ ನಡುವೆ ಅನೇಕ ಫೋಟೋಗಳನ್ನು ಕೂಡ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
‘ಕಲರ್ಸ್ ಕನ್ನಡ’ ವಾಹಿನಿಯ ಡಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೆ ಮೇಘನಾ ರಾಜ್ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ವೇದಿಕೆಯಲ್ಲಿ ಅವರು ತಮ್ಮ ಬದುಕಿನ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಶೋ ಅವರಿಗೆ ಆಪ್ತವಾಗಿದೆ.
ಕಿರುತೆರೆ ಕಾರ್ಯಕ್ರಮದ ಸಲುವಾಗಿ ಮೇಘನಾ ರಾಜ್ ಸಖತ್ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ಸಿನಿಮಾಗಳಿಗೂ ಸಮಯ ಮೀಸಲಿಟ್ಟಿದ್ದಾರೆ. ಒಟ್ಟಿನಲ್ಲಿ ಅವರು ಬಣ್ಣದ ಲೋಕದಲ್ಲಿ ಪುನಃ ಸಕ್ರಿಯರಾಗಿರುವುದು ಕಂಡು ಫ್ಯಾನ್ಸ್ ಖುಷಿ ಆಗಿದ್ದಾರೆ.
‘ಡಾನ್ಸಿಂಗ್ ಚಾಂಪಿಯನ್’ ಕಾರ್ಯಕ್ರಮಕ್ಕೆ ಬರುವ ಮೇಘನಾ ರಾಜ್ ಅವರು ಬಗೆಬಗೆಯ ಕಾಸ್ಟ್ಯೂಮ್ನಲ್ಲಿ ಗಮನ ಸೆಳೆಯುತ್ತಾರೆ. ಆ ದಿರಿಸಿನಲ್ಲಿ ಅವರು ಫೋಟೋಶೂಟ್ ಕೂಡ ಮಾಡಿಸಿ, ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಪುತ್ರ ರಾಯನ್ ರಾಜ್ ಸರ್ಜಾನ ಆರೈಕೆ ಕಡೆಗೂ ಮೇಘನಾ ರಾಜ್ ಗಮನ ಹರಿಸುತ್ತಿದ್ದಾರೆ. ಮೇಘನಾ ಒಪ್ಪಿಕೊಂಡಿರುವ ‘ಶಬ್ದ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಆ ಚಿತ್ರಕ್ಕೆ ಕಾಂತ ಕನ್ನಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.